Shivanna ಸದ್ಯಕ್ಕೆ ಕರ್ನಾಟಕ ರಾಜ್ಯದಲ್ಲಿ ಎಲ್ಲಾ ವಿಚಾರಗಳು ಕೂಡ ಮಂಕು ಕವಿದ್ದಿದ್ದು ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಒಂದೇ ಒಂದು ವಿಚಾರ ಎಂದರೆ ಇದೇ ಮೇ ಹತ್ತರಂದು ನಡೆಯಲಿರುವಂತಹ ರಾಜ್ಯ ವಿಧಾನಸಭಾ ಚುನಾವಣೆ. ಚುನಾವಣೆಯ ವಿಚಾರದಲ್ಲಿ ಕೇವಲ ರಾಜಕಾರಣಿಗಳು ಮಾತ್ರವಲ್ಲದೆ ಪ್ರತಿಯೊಂದು ವರ್ಗದ ಜನರು ಕೂಡ ಸಂಪರ್ಕವನ್ನು ಹೊಂದಿದ್ದಾರೆ ಎಂದು ಹೇಳಬಹುದು. ಅದರಲ್ಲೂ ವಿಶೇಷವಾಗಿ ನಮ್ಮ ಕನ್ನಡ ಚಿತ್ರರಂಗದ ಚಲನಚಿತ್ರ ನಟರು(Kannada Actors).
ಮೊದಲಿಗೆ ಈ ಬಾರಿ ಈ ಪರಂಪರೆ ಆರಂಭವಾಗಿದ್ದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ರವರು ಬಿಜೆಪಿ ಪಕ್ಷದ ಪರವಾಗಿ ರಾಜ್ಯದ್ಯಂತ ಪ್ರಚಾರ ಮಾಡಲು ಪ್ರಾರಂಭವಾದಾಗಿನಿಂದ. ಅದಾದ ನಂತರ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪರವಾಗಿ ಅಂದರೆ ತಮ್ಮ ಸ್ನೇಹಿತರ ಪರವಾಗಿ ದರ್ಶನ್(Darshan) ರವರು ಕೂಡ ಪ್ರಚಾರ ಮಾಡಲು ಆರಂಭಿಸುತ್ತಾರೆ. ಮೊದಲಿಗೆ ಈ ಬಗ್ಗೆ ಸಾಕಷ್ಟು ದೊಡ್ಡ ಮಟ್ಟದಲ್ಲಿ ವಿರೋಧ ಕೇಳಿ ಬಂದಿತ್ತಾದರೂ ಕೂಡ ಇಬ್ಬರು ಹೋದಲ್ಲೆಲ್ಲ ಜನರು ಅವರನ್ನು ಬರಮಾಡಿಕೊಂಡ ರೀತಿ ಜನರು ಅವರನ್ನು ಎಷ್ಟು ಇಷ್ಟಪಟ್ಟಿದ್ದರು ಎಂಬುದನ್ನು ಸಾಬೀತು ಪಡಿಸುತ್ತಿತ್ತು.
ಇದಾದ ನಂತರ ಇತ್ತೀಚಿಗಷ್ಟೇ ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಪತ್ನಿ ಆಗಿರುವ ಗೀತಕ್ಕ ಕಾಂಗ್ರೆಸ್ ಪಕ್ಷವನ್ನು ಸೇರುವ ಮೂಲಕ ಕಾಂಗ್ರೆಸ್ ಪಕ್ಷದ ಪರವಾಗಿ ಪ್ರಚಾರ ಮಾಡಲು ಪ್ರಾರಂಭಿಸುತ್ತಾರೆ ಹಾಗೂ ಇದೇ ಸಂದರ್ಭದಲ್ಲಿ ಸಂದರ್ಶನದಲ್ಲಿ ಕೂಡ ಕಿಚ್ಚ ಸುದೀಪ್ ರವರು ಬಿಜೆಪಿ ಪಕ್ಷದ ಪರವಾಗಿ ಪ್ರಚಾರ ಮಾಡುತ್ತಿರುವ ಬಗ್ಗೆ ಶಿವಣ್ಣ ಅವರ ಬಳಿ ಪ್ರಶ್ನೆಯನ್ನು ಕೇಳಲಾಗುತ್ತದೆ. ಆಗ ಅವರು ನೀಡಿರುವ ಉತ್ತರ ಮಾತ್ರ ಪ್ರತಿಯೊಬ್ಬರು ಎಂಜಾಯ್ ಮಾಡುವ ಹಾಗೆ ಇತ್ತು. ಏಕೆಂದರೆ ಮಾಧ್ಯಮದವರಿಗೆ ಈ ಸುದ್ದಿಯಿಂದ ಮಸಾಲ ಸುದ್ದಿಯನ್ನು ತೆಗೆಯುವಂತಹ ಅವಕಾಶ ಶಿವಣ್ಣ ನೀಡಲಿಲ್ಲ.
ಈ ಪ್ರಶ್ನೆಗೆ ಉತ್ತರಿಸುತ್ತಾ ಚುನಾವಣೆ ಮುಗಿದ ನಂತರ ನಾವಿಬ್ಬರೂ ಕೂಡ ಮಾತನಾಡುವುದನ್ನು ಬಿಡುವುದಿಲ್ಲ ನಾವಿಬ್ಬರೂ ಯಾವತ್ತೂ ಸ್ನೇಹಿತರು ಹಾಗೂ ಅವರು ನನ್ನ ಸಹೋದರ ಇದ್ದಹಾಗೆ. ಅವರಿಗೂ ಕೂಡ ಗೀತಕ್ಕ ಎಂದರೆ ಸಾಕಷ್ಟು ಗೌರವ ಇದೆ ಹಾಗೂ ಈ ಚುನಾವಣೆ ಪ್ರಚಾರದಿಂದ ನಮ್ಮ ನಡುವೆ ಯಾವುದೇ ಬದಲಾವಣೆಗಳು ಮೂಡುವುದಿಲ್ಲ ಅದು ಅವರ ದೃಷ್ಟಿಕೋನ ಹಾಗೂ ಇದು ನನ್ನ ದೃಷ್ಟಿಕೋನ ಅಷ್ಟೇ ಎಂಬುದಾಗಿ ಶಿವಣ್ಣ ಕಿಚ್ಚ ಸುದೀಪ್(Kiccha Sudeep) ರವರ ಪರವಾಗಿ ಮಾತನಾಡಿದ್ದಾರೆ. ಶಿವಣ್ಣ(Shivanna) ಅವರ ಈ ಹೇಳಿಕೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.