Ramya ಕಳೆದ 20 ವರ್ಷಗಳಿಗಿಂತಲೂ ಅಧಿಕಕಾಲ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವಂತಹ ಕೆಲವೇ ಕೆಲವು ನಟಿಮಣಿಯರಲ್ಲಿ ನಟಿ ರಮ್ಯಾ(Actress Ramya) ಅವರು ಮುಂಚೂಣಿ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಇಂದಿಗೂ ಕೂಡ ಕನ್ನಡ ಚಿತ್ರರಂಗದ ಯಾವುದೇ ಸ್ಟಾರ್ ನಟಿಯರಿಗಿಂತಲೂ ಕೂಡ ಕಡಿಮೆ ಇಲ್ಲದಂತಹ ಬೇಡಿಕೆಯನ್ನು ಕನ್ನಡ ಚಿತ್ರರಂಗದಲ್ಲಿ ಸಿನಿಮಾದಲ್ಲಿ ನಟನೆ ಮಾಡದೆ ಇದ್ದರೂ ಕೂಡ ಹೊಂದಿದ್ದಾರೆ. ಸಾಕಷ್ಟು ಸಮಯಗಳಿಂದ ಚಿತ್ರರಂಗದಿಂದ ದೂರ ಇರುವುದು ಕೂಡ ನಿಮಗೆ ತಿಳಿದಿದೆ.
ಈಗ ಸಾಕಷ್ಟು ವರ್ಷಗಳ ನಂತರ ಮತ್ತೆ ಕನ್ನಡ ಚಿತ್ರರಂಗಕ್ಕೆ ನಟಿಸಲು ಆಗಮಿಸಿರುವ ನಟಿ ರಮ್ಯಾ ಅವರು ಡಾಲಿ ಧನಂಜಯ್(Daali Dhananjay) ನಾಯಕ ನಟನಾಗಿ ಕಾಣಿಸಿಕೊಳ್ಳಲಿರುವ ಉತ್ತರಕಾಂಡ ಎನ್ನುವಂತಹ ಮಾಸ್ ಸಿನಿಮಾದಲ್ಲಿ ನಾಯಕಿಯಾಗಿ ಕಂಬ್ಯಾಕ್ ಮಾಡಲಿದ್ದಾರೆ ಅನ್ನುವುದು ಅಧಿಕೃತ ಸುದ್ದಿಯಾಗಿದೆ. ಇದರ ನಡುವೆ ಮತ್ತೆ ಅಭಿಮಾನಿಗಳು ಬೇಸರ ಮಾಡಿಕೊಂಡಿದ್ದರು.
ಅದ್ಯಾಕೆ ಎಂದರೆ ಮತ್ತೆ ರಾಜಕೀಯ ಪಕ್ಷದ ಪರವಾಗಿ ಪ್ರಚಾರ ನಡೆಸುವುದಕ್ಕೆ ರಮ್ಯ(Ramya) ಅವರು ಹೋಗಿರುವುದು. ಅವರ ನಟನೆಯನ್ನು ಆನಂದಿಸುವ ಅಭಿಮಾನಿಗಳಿಗೆ ಅವರು ರಾಜಕೀಯ ಪ್ರಚಾರಕ್ಕೆ ಹೋಗುವುದು ಇಷ್ಟವಿಲ್ಲ ಹೀಗಾಗಿ ಅವರು ಯಾವುದೇ ಪಕ್ಷದ ಪರವಾಗಿ ಕಾಣಿಸಿಕೊಂಡರು ಕೂಡ ಅದು ಅವರಿಗೆ ಅಸಮಾಧಾನವನ್ನು ನೀಡುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಇತ್ತೀಚಿಗೆ ರಾಜಕೀಯ ಪಕ್ಷದ ಪ್ರಚಾರದ ಕಾರ್ಯಕ್ರಮದಲ್ಲಿಯೇ ತಮ್ಮ ಮದುವೆ ಕುರಿತಂತೆ ಕೂಡ ಹೇಳಿಕೊಂಡಿದ್ದಾರೆ.
ರಮ್ಯಾ(Ramya) ಅವರು ಈ ಕಾರ್ಯಕ್ರಮದಲ್ಲಿ ಪತ್ರಕರ್ತರು ಹಾಗೂ ಮಾಧ್ಯಮದವರು ಕೇಳಿದಂತಹ ನಿಮ್ಮ ಮದುವೆ ಯಾವಾಗ ಅನ್ನೋ ಪ್ರಶ್ನೆಗೆ ನಟಿ ರಮ್ಯಾ ಅವರು ಯಾರಾದರೂ ಒಳ್ಳೆ ಗೌಡ್ರ ಹುಡುಗನ ತೋರಿಸಿ ಮದುವೆ ಮಾಡಿಸಿ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಮೂಲಕ ರಮ್ಯಾ ಅವರನ್ನು ಮದುವೆಯಾಗೋ ಹುಡುಗ ಗೌಡ ಆಗಿರಬೇಕು ಎಂಬುದನ್ನು ಖಚಿತವಾಗಿದೆ ಎಂಬುದಾಗಿ ಅಭಿಮಾನಿಗಳು ಭಾವಿಸಿದ್ದಾರೆ. ನಟಿ ರಮ್ಯಾ ಅವರು ಯಾರನ್ನು ಮದುವೆಯಾಗಬಹುದು ಎನ್ನುವ ನಿಮ್ಮ ಲೆಕ್ಕಾಚಾರಗಳನ್ನು ಕೂಡ ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಬಹುದಾಗಿದೆ.