Rajamouli ಭಾರತೀಯ ಚಿತ್ರರಂಗ ಕಂಡಂತಹ ಮಹಾನ್ ನಿರ್ದೇಶಕರಲ್ಲಿ ಇತ್ತೀಚಿನ ವರ್ಷಗಳಲ್ಲಿ ರಾಜ ಮೌಳಿ(Director Rajamouli) ಅವರ ಹೆಸರು ಕೂಡ ಶಾಮೀಲಾಗುತ್ತದೆ. ತಮ್ಮ ಈಗ, ಬಾಹುಬಲಿ ಸರಣಿ ಹಾಗೂ RRR ಸಿನಿಮಾಗಳ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಭಾರತದ ಸಿನಿಮಾಗಳನ್ನು ವಿದೇಶಿಗರು ಕೂಡ ನೋಡುವಂತೆ ಮಾಡಿದ್ದಾರೆ. ಭಾರತೀಯ ಚಿತ್ರರಂಗದ ಬ್ರಾಂಡ್ ಅಂಬಾಸಿಡರ್ ಎಂದರು ಕೂಡ ತಪ್ಪಾಗಲಾರದು.
ಆಗೊಮ್ಮೆ ಈಗೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ರಾಜ ಮೌಳಿ ಅವರು ಮಹಾಭಾರತ ಸಿನಿಮಾವನ್ನು(Mahabharath Film) ಮಾಡಲಿದ್ದಾರೆ ಎನ್ನುವಂತಹ ಸುದ್ದಿಗಳು ಕೂಡ ಕೇಳಿ ಬರುತ್ತವೆ. ಇಂತಹ ಮಹಾನ್ ಸಿನಿಮಾವನ್ನು ಮಾಡುವಂತಹ ಸಾಮರ್ಥ್ಯ ಇರೋದು ಕೂಡ ರಾಜಮೌಳಿಯವರಿಗೆ ಒಬ್ಬರಿಗೆ ಮಾತ್ರ ಎಂಬುದಾಗಿ ಕೂಡ ಎಲ್ಲರೂ ನಂಬುತ್ತಾರೆ.
ಇನ್ನು ಮಹಾಭಾರತ ಸಿನಿಮಾದ ಬಗ್ಗೆ ಮಾತನಾಡುತ್ತಾ ರಾಜಮೌಳಿ(Rajamouli) ಅವರು ಇದು ನನ್ನ ಡ್ರೀಮ್ ಪ್ರಾಜೆಕ್ಟ್ ಇದನ್ನ ನಾನು ಮಾಡಿಯೇ ತೀರುತ್ತೇನೆ ಎಂಬುದಾಗಿ ಹೇಳಿದ್ದಾರೆ. ಕೇವಲ ಇಷ್ಟು ಮಾತ್ರವಲ್ಲದೆ ಇದುವರೆಗೂ ನನ್ನ ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ನಾನು ಮಹಾಭಾರತದ ರೆಫರೆನ್ಸ್ ಅನ್ನು ಬಳಸಿದ್ದೇನೆ ಎಂಬುದಾಗಿ ಕೂಡ ರಾಜಮಾವಳಿಯವರು ಯಾರಿಗೂ ಗೊತ್ತಿಲ್ಲದೆ ಇರುವ ವಿಚಾರವನ್ನು ಬಹಿರಂಗವಾಗಿ ಬಿಚ್ಚಿಟ್ಟಿದ್ದಾರೆ.
ಸದ್ಯಕ್ಕೆ ಮಹೇಶ್ ಬಾಬು(Mahesh Babu) ಅವರ ಸಿನಿಮಾದಲ್ಲಿ ಬ್ಯುಸಿ ಆಗಿರುವ ರಾಜ ಮೌಳಿಯವರು ಮುಂದಿನ ವರ್ಷಗಳಲ್ಲಿ ಮಹಾಭಾರತ ಸಿನಿಮಾವನ್ನು ಮಾಡಿದರು ಕೂಡ ಮಾಡಬಹುದು ಅದರಲ್ಲಿ ಯಾರು ಕೂಡ ಆಶ್ಚರ್ಯ ಪಡಬೇಕಾದ ಅಗತ್ಯವಿಲ್ಲ ಎಂದು ನಾವೆಲ್ಲರೂ ಭಾವಿಸಬೇಕಾಗಿದೆ. ರಾಜ ಮೌಳಿ ಅವರ ಮಹಾಭಾರತ ಸಿನಿಮಾ ಬಗ್ಗೆ ನಿಮಗಿರುವಂತಹ ನಿರೀಕ್ಷೆಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.