ಭಾರತೀಯ ಕ್ರಿಕೆಟ್ ತಂಡದ ಅತ್ಯಂತ ಯಶಸ್ವಿ ಆಟಗಾರ ಹಾಗೂ ನಾಯಕರಲ್ಲಿ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ಹೆಸರು ಅಗ್ರಗಣ್ಯವಾಗಿ ಕೇಳಿಬರುತ್ತದೆ ಎನ್ನುವುದು ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಗಳಿಗೂ ಕೂಡ ತಿಳಿದಿರುವಂತಹ ವಿಚಾರವಾಗಿದೆ. ನಾಯಕನಾಗಿ ಕಾಣಿಸಿಕೊಂಡ ಮೊದಲ ಬಾರಿಯಲೇ 2007ರಲ್ಲಿ ಮೊದಲ ಟಿ ಟ್ವೆಂಟಿ ವಿಶ್ವ ಕಪ್ ಗೆಲ್ಲುವ ಮೂಲಕ ತನ್ನ ನಾಯಕತ್ವದ ಸಾಮರ್ಥ್ಯವನ್ನು ಇಡೀ ಕ್ರಿಕೆಟ್ ಜಗತ್ತಿಗೆ ಸಾಬೀತುಪಡಿಸಿದ್ದರು.
ಅದಾದ ನಾಲ್ಕೇ ವರ್ಷಕ್ಕೆ 28 ವರ್ಷಗಳ ನಂತರ ಭಾರತೀಯ ಕ್ರಿಕೆಟ್ ತಂಡದ ನಾಯಕನಾಗಿ ಏಕದಿನ ವಿಶ್ವಕಪ್ ಗೆಲ್ಲುವ ಮೂಲಕ ಭಾರತೀಯ ಕ್ರಿಕೆಟ್ ಇತಿಹಾಸ ಕಂಡಂತಹ ಅತ್ಯಂತ ಸರ್ವ ಶ್ರೇಷ್ಠ ನಾಯಕ ಎಂಬುದನ್ನು ಮಹೇಂದ್ರ ಸಿಂಗ್ ಧೋನಿ(Dhoni) ಸಾಬೀತುಪಡಿಸುತ್ತಾರೆ. ತಂಡದಲ್ಲಿ ಅವರಿಗಿಂತ ಸೀನಿಯರ್ ಆಟಗಾರರು ಇದ್ದರೂ ಕೂಡ ಮಾಹಿ ಅವರ ನಾಯಕತ್ವ ಅವರೆಲ್ಲರನ್ನು ಕೂಡ ತನ್ನ ನಿಯಂತ್ರಣದಲ್ಲಿ ಇಟ್ಟುಕೊಳ್ಳುವಷ್ಟರ ಮಟ್ಟಿಗೆ ಪರಿಣಾಮಕಾರಿ ಪ್ರಭಾವವನ್ನು ಹೊಂದಿತ್ತು.
ಎಲ್ಲಕ್ಕಿಂತ ಪ್ರಮುಖವಾಗಿ ಭಾರತೀಯ ಕ್ರಿಕೆಟ್ ತಂಡ ಅವರ ನಂತರ ಸಾಕಷ್ಟು ನಾಯಕರನ್ನು ಕಂಡಿರಬಹುದು ಆದರೆ ಮಹೇಂದ್ರ ಸಿಂಗ್ ಧೋನಿ(MS Dhoni) ಒಬ್ಬ ನಾಯಕನಾಗಿ ಭಾರತೀಯ ಕ್ರಿಕೆಟ್ ತಂಡಕ್ಕೆ ನೀಡಿರುವ ಕೊಡುಗೆಯನ್ನು ಸರಿಗಟ್ಟಲು ಯಾರಿಂದಲೂ ಕೂಡ ಸಾಧ್ಯವಾಗಿಲ್ಲ. ಇನ್ನು ಕೇವಲ ಸಾಧನೆಗಳ ವಿಚಾರದಲ್ಲಿ ಮಾತ್ರವಲ್ಲದೆ ಸಂಪತ್ತಿನ ವಿಚಾರದಲ್ಲಿ ಕೂಡ ಧೋನಿ ಎಲ್ಲರಿಗಿಂತ ಸದಾ ಮುಂದು. ಹಾಗಿದ್ರೆ ಬನ್ನಿ ಧೋನಿ ಅವರ ಒಟ್ಟಾರೆ ಆಸ್ತಿ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳೋಣ.
ಗೆಳೆಯರೇ ಮಹೇಂದ್ರ ಸಿಂಗ್ ಧೋನಿ ಅವರು ಕೇವಲ ಕ್ರಿಕೆಟ್ ಸಂಭಾವನೆ ಮಾತ್ರವಲ್ಲದೆ ಸಾಕಷ್ಟು ಕಂಪನಿಗಳಲ್ಲಿ ಹೂಡಿಕೆ ಮಾಡುವ ಮೂಲಕವೂ ಕೂಡ ಸಂಪಾದನೆಯನ್ನು ಮಾಡುತ್ತಿದ್ದಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಖರೀದಿಸಿ ಕೃಷಿಯನ್ನು ಕೂಡ ಮಾಡುತ್ತಿದ್ದಾರೆ. ಹೀಗಾಗಿ ಧೋನಿ ಅವರ ಒಟ್ಟಾರೆ ಆಸ್ತಿಯ ಮೌಲ್ಯ(Dhoni Total Net Worth) ಭರ್ಜರಿ 1200 ಕೋಟಿ ರೂಪಾಯಿಗೂ ಅಧಿಕ ಎಂಬುದಾಗಿ ತಿಳಿದು ಬಂದಿದೆ. ಬಡ ಕುಟುಂಬದಿಂದ ಬಂದಂತಹ ಧೋನಿ ಇಂದು ತಮ್ಮ ಬದುಕಿನ ಮೂಲಕ ಸಾವಿರಾರು ಯುವಕರಿಗೆ ಜೀವನದಲ್ಲಿ ದೊಡ್ಡದನ್ನು ಸಾಧಿಸುವ ಕನಸನ್ನು ಕಾಣುವಂತೆ ಪ್ರೇರೇಪಿಸುತ್ತಿದ್ದಾರೆ.