Kiccha Sudeep: Thums Up ಜಾಹೀರಾತಿಗಾಗಿ ಕಿಚ್ಚ ಸುದೀಪ್ ಪಡೆದ ಸಂಭಾವನೆಯ ವಿವರ ಕೊನೆಗೂ ಹೊರ ಬಂತು ನೋಡಿ.

Kiccha Sudeep ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Sudeep) ರವರು ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದ ಬಹುತೇಕ ಎಲ್ಲಾ ಪ್ರಮುಖ ಭಾಷೆಗಳಲ್ಲಿ ಕೂಡ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸುವ ಮೂಲಕ ತಮ್ಮ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಮತ್ತು ಅಭಿಮಾನಿ ಬಳಗವನ್ನು ಕೂಡ ಹೆಚ್ಚಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಭಾಷೆಯ ಪ್ರಮುಖ ಡೈರೆಕ್ಟರ್ ಹಾಗೂ ನಿರ್ಮಾಪಕರು ಕೂಡ ಅವರನ್ನು ತಮ್ಮ ಸಿನಿಮಾದಲ್ಲಿ ಹಾಕಿಕೊಳ್ಳಬೇಕು ಎನ್ನುವ ಆಸೆಯನ್ನು ವ್ಯಕ್ತಪಡಿಸುವವರು ಸಾಕಷ್ಟು ಮಂದಿ ಇದ್ದಾರೆ.

ಈಗಾಗಲೇ ರಾಜ ಮೌಳಿ(Rajamouli) ಅವರಂತಹ ನಿರ್ದೇಶಕರ ಕೈಯಲ್ಲಿ ಕೂಡ ಕಿಚ್ಚ ಸುದೀಪ್ ಅವರಂತಹ ಮತ್ತೊಬ್ಬ ಪ್ರತಿಭಾನ್ವಿತ ಕಲಾವಿದನನ್ನು ನಾನು ನೋಡಿಲ್ಲ ಎನ್ನುವ ರೀತಿಯಲ್ಲಿ ಹೊಗಳಿಸಿಕೊಂಡಿರುವ ಶ್ರೇಯ ಕಿಚ್ಚ ಸುದೀಪ್(Kiccha Sudeep) ರವರ ನಟನೆಗೆ ಸಲ್ಲುತ್ತದೆ. ಕೇವಲ ನಾಯಕ ನಟನಾಗಿ ಮಾತ್ರ ಬಲದ ನಿರ್ದೇಶಕ ನಿರ್ಮಾಪಕ ಇನ್ನೂ ಹಲವಾರು ಅಸಂಖ್ಯಾತ ಪ್ರತಿಭೆಗಳನ್ನು ಕಿಚ್ಚ ಸುದೀಪ್ ರವರು ಈಗಾಗಲೇ ಹೊಂದಿದ್ದಾರೆ ಎನ್ನುವುದು ಸಾಕಷ್ಟು ಬಾರಿ ಸಾಬೀತಾಗಿದೆ.

Kiccha Sudeep In Thums Up Ad

ಇನ್ನು ಇತ್ತೀಚಿಗೆ ರಾಜಕೀಯ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಕಿಚ್ಚ ಸುದೀಪ್ ರವರು ಹೊಸ ಅವತಾರದಲ್ಲಿ ಅಭಿಮಾನಿಗಳ ಎದುರಿಗೆ ಕಾಣಿಸಿಕೊಂಡಿದ್ದಾರೆ. ಹೌದು ನಾವು ಮಾತನಾಡುತ್ತಿರುವುದು ಕಿಚ್ಚ ಸುದೀಪ್ ರವರು ಲೇಟೆಸ್ಟ್ ಆಗಿ ಕಾಣಿಸಿಕೊಂಡಿರುವ Thums Up ಜಾಹೀರಾತಿನ ಬಗ್ಗೆ. ಈ ಜಾಹೀರಾತಿ ನಲ್ಲಿ ಸಖತ್ ಸ್ಟೈಲಿಶ್ ಹಾಗೂ ಮಾಸ್ ಆಗಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದಾರೆ. ಹಾಗಿದ್ರೆ ಇದಕ್ಕೆ ಅವರು ಎಷ್ಟು ಸಂಭಾವನೆಯನ್ನು ಪಡೆದಿರಬಹುದು ಎಂಬುದನ್ನು ತಿಳಿಯೋಣ ಬನ್ನಿ.

https://twitter.com/ThumsUpOfficial/status/1654384822112985088?t=u1U31ZaI-FJYu44NGOMz8A&s=19

ಬಹುತೇಕ ಎಲ್ಲಾ ಭಾಷೆಗಳಲ್ಲಿ ಕೂಡ ಚಿರಪರಿಚಿತರಾಗಿರುವ ಕಿಚ್ಚ ಸುದೀಪ್ ರವರು ಪ್ಯಾನ್ ಇಂಡಿಯಾ ಸ್ಟಾರ್ ಎಂದರು ಕೂಡ ತಪ್ಪಾಗಲಾರದು. ಇದಕ್ಕಾಗಿ ಪ್ರತಿಷ್ಠಿತ Thums Up ಕಂಪನಿ ಈ ಜಾಹೀರಾತಿಗಾಗಿ ಕಿಚ್ಚ ಸುದೀಪ್ ರವರಿಗೆ ಭರ್ಜರಿ 5 ರಿಂದ 6 ಕೋಟಿ ರೂಪಾಯಿ ಸಂಭಾವನೆ ನೀಡಿರಬಹುದು ಎಂಬುದಾಗಿ ಅಂದಾಜಿಸಲಾಗಿದೆ. ಈ ಮೂಲಕವೇ ನಾವು ಕಿಚ್ಚ ಸುದೀಪ್ ರವರ ಮಾರ್ಕೆಟ್ ವ್ಯಾಲ್ಯೂ ಜಾಹೀರಾತು ಜಗತ್ತಿನಲ್ಲಿ ಕೂಡ ಎಷ್ಟು ಅಗಾಧವಾಗಿ ಹರಡಿದೆ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *