Hindu Temples: ಹಿಂದುಗಳು ಭೇಟಿ ಮಾಡಲೇಬೇಕಾದ ದೇವಸ್ಥಾನಗಳು ಇಲ್ಲಿವೆ ನೋಡಿ. ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ.

Hindu Temples ನಮ್ಮ ಹಿಂದೂ ಧರ್ಮಕ್ಕೆ ಸಾವಿರಾರು ಲಕ್ಷಾಂತರ ವರ್ಷಗಳ ಇತಿಹಾಸವಿದೆ ಎಂದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಆದಿ ಹಾಗೂ ಅಂತ್ಯವಿಲ್ಲದ ಸನಾತನ ಧರ್ಮವನ್ನು ಸಾಕಷ್ಟು ವರ್ಷಗಳಿಂದಲೂ ಕೂಡ ಜನರು ಆಚರಿಸಿಕೊಂಡು ಮುಂದುವರಿಸಿಕೊಂಡು ಬರುತ್ತಿದ್ದಾರೆ. ನಮ್ಮ ಭಾರತ ದೇಶವನ್ನು ಪ್ರಮುಖವಾಗಿ ಹಿಂದೂ ಸಂಸ್ಕೃತಿಯನ್ನು ಆಚರಿಸಿಕೊಂಡು ಬಂದ ದೇಶವೆಂಬುದಾಗಿಯೇ ಕರೆಯಲಾಗುತ್ತದೆ. ಹಿಂದೂತನ(Hinduism) ಎನ್ನುವುದು ಧರ್ಮ ಎನ್ನುವುದಕ್ಕಿಂತ ಹೆಚ್ಚಾಗಿ ನಾವು ಬದುಕುವಂತಹ ಒಂದು ಜೀವನ ಶೈಲಿ ಎಂದರು ಕೂಡ ತಪ್ಪಾಗಲಾರದು. ಇನ್ನು ಹಿಂದುಗಳಾದ ನಾವು ಕೆಲವೊಂದು ದೇವಸ್ಥಾನಗಳನ್ನು ಜೀವನವನ್ನು ಮುಗಿಸಿಕೊಳ್ಳುವುದಕ್ಕಿಂತ ಮುಂಚೆ ಭೇಟಿ ಆಗಲೇಬೇಕು ಎಂಬುದಾಗಿ ನಮ್ಮ ಹಿರಿಯರು ಹೇಳುತ್ತಾರೆ. ಹಾಗಿದ್ದರೆ ಆ ಪುಣ್ಯಕ್ಷೇತ್ರಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಮೊದಲನೇದಾಗಿ ನಮ್ಮದೇ ರಾಜ್ಯದ ಪಕ್ಕದಲ್ಲಿರುವ ಆಂಧ್ರಪ್ರದೇಶದ ತಿರುಮಲ ಶ್ರೀ ವೆಂಕಟೇಶ್ವರನ(Tirumala Sri Venkateshwara) ದೇವಸ್ಥಾನಕ್ಕೆ ಭೇಟಿ ನೀಡಲೇಬೇಕು. ಹಿಂದುಗಳಿಗೆ ಅತ್ಯಂತ ಪವಿತ್ರ ದೇವಸ್ಥಾನಗಳಲ್ಲಿ ಇದು ಒಂದಾಗಿದೆ. ಎರಡನೇದಾಗಿ ಉತ್ತರಾಖಂಡದ ಶ್ರೀ ಕೇದಾರನಾಥ ಮಂದಿರ(Kedaranath Temple). ಪ್ರತಿಯೊಬ್ಬ ಶಿವಭಕ್ತರು ಕೂಡ ಹೋಗಲೇಬೇಕು ಎಂಬುದಾಗಿ ಪ್ರಾರ್ಥಿಸುವಂತಹ ಪುಣ್ಯಕ್ಷೇತ್ರ ಇದಾಗಿದೆ. ಅದೇ ಉತ್ತರಖಂಡದಲ್ಲಿರುವಂತಹ ಬದ್ರಿನಾಥ್ ಧಾಮ್(Badrinath Dham) ದೇವಸ್ಥಾನಕ್ಕೂ ಕೂಡ ಮರೆಯದ ಜೀವನದಲ್ಲಿ ಒಮ್ಮೆಯಾದರೂ ಭೇಟಿ ನೀಡಿ ಶಿವನ ಆಶೀರ್ವಾದವನ್ನು ಪಡೆಯಬೇಕು. ಗುಜರಾತಿನ ದ್ವಾರಕೆಯಲ್ಲಿರುವ ಶ್ರೀ ದ್ವಾರಕಾದೀಶ್(Dwarakadhish) ಮಂದಿರಕ್ಕೂ ಕೂಡ ಭೇಟಿ ನೀಡಲೇಬೇಕು. ಗುಜರಾತಿನಲ್ಲಿರುವ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಸೋಮನಾಥ ಜ್ಯೋತಿರ್ಲಿಂಗ ದೇವಸ್ಥಾನಕ್ಕೆ(Somanath Jyotirlinga Temple) ಕೂಡ ಭೇಟಿ ನೀಡಲೇಬೇಕು.

Must Visit Hindu Temples

ಉತ್ತರ ಪ್ರದೇಶದ ಕಾಶಿ ವಿಶ್ವನಾಥ ಮಂದಿರ(Kashi Vishwanath Mandir) ಕೂಡ ಹಿಂದುಗಳಿಗೆ ಅತ್ಯಂತ ಪವಿತ್ರ ಸ್ಥಳವಾಗಿದ್ದು ಇಲ್ಲಿ ಕೂಡ ಭೇಟಿ ನೀಡಬೇಕು. ಒಡಿಸ್ಸಾದ ಪುರಿ ಜಗನ್ನಾಥ್ ಮಂದಿರವೂ(Puri Jagannath Mandir) ಕೂಡ ಪ್ರತಿಯೊಬ್ಬ ಹಿಂದೂ ತನ್ನ ಜೀವನ ಮುಗಿಯುವುದರ ಒಳಗೆ ಒಮ್ಮೆಯಾದರೂ ಭೇಟಿ ನೀಡಲು ಬೇಕಾಗಿರುವಂತಹ ಪುಣ್ಯಕ್ಷೇತ್ರವಾಗಿದೆ. ಅಸ್ಸಾಂ ಗುವಾಹಟಿಯ ಕಾಮಾಕ್ಯದೇವಿ ಮಂದಿರವೂ ಕೂಡ ಅತ್ಯಂತ ಪ್ರಮುಖವಾದ ದೇವಸ್ಥಾನವಾಗಿದೆ. ಪಶ್ಚಿಮ ಬಂಗಾಳದ ಕಾಳಿ ಘಾಟ್ ನ ಕಾಳಿ ದೇವಸ್ಥಾನವು ಕೂಡ ಅತ್ಯಂತ ಪವಿತ್ರವಾದದ್ದು. ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ತಮಿಳುನಾಡಿನ ರಾಮೇಶ್ವರಂ ನ ರಾಮನಾಥ ಸ್ವಾಮಿ ಜ್ಯೋತಿರ್ಲಿಂಗವು(Ramanathswamy Jyotirlinga) ಕೂಡ ಅತ್ಯಂತ ಪವಿತ್ರ ಪುಣ್ಯಕ್ಷೇತ್ರವಾಗಿದೆ.

ಕೇರಳದ ತಿರುವನಂತಪುರಂ ನ ಶ್ರೀ ಪದ್ಮನಾಭಸ್ವಾಮಿ ದೇವಸ್ಥಾನವು ಕೂಡ ಈ ಲಿಸ್ಟಿನಲ್ಲಿ ಕಾಣಿಸಿಕೊಳ್ಳುತ್ತದೆ. ಅತ್ಯಂತ ಶ್ರೀಮಂತ ದೇವಸ್ಥಾನಗಳಲ್ಲಿ ಕೂಡ ಇದು ಒಂದಾಗಿ ಕಾಣಿಸಿಕೊಳ್ಳುತ್ತದೆ. ಉತ್ತರ ಪ್ರದೇಶದ ಮಥುರಾದ ಶ್ರೀ ಕೃಷ್ಣ ಜನ್ಮಭೂಮಿ ದೇವಸ್ಥಾನ(Shri Krishna Janma Bhoomi Temple) ಕೂಡ ಅತ್ಯಂತ ಪವಿತ್ರವಾದ ಹಿಂದೂ ದೇವಸ್ಥಾನವಾಗಿದೆ. ಮಧ್ಯಪ್ರದೇಶದ ಉಜ್ಜೈನಿಯ ಮಹಾಕಾಲೇಶ್ವರ ಜ್ಯೋತಿರ್ಲಿಂಗ ದೇವಸ್ಥಾನವು(Mahakaleshwara Jyotirlinga Temple) ಕೂಡ ಪ್ರಮುಖ ದೇವಸ್ಥಾನವಾಗಿದೆ. ತಮಿಳುನಾಡಿನ ಶ್ರೀ ರಂಗನಾಥ ಸ್ವಾಮಿ ದೇವಸ್ಥಾನವು ಕೂಡ ಹಿಂದುಗಳು ಭೇಟಿಯಾಗಬೇಕಾದ ಪ್ರಮುಖ ಪುಣ್ಯಕ್ಷೇತ್ರವಾಗಿದೆ. ಕರ್ನಾಟಕದ ಆದಿ ಶಂಕರಾಚಾರ್ಯರು ಸ್ಥಾಪಿಸಿರುವ ಶೃಂಗೇರಿ ದೇವಸ್ಥಾನವು ಕೂಡ ಹಿಂದುಗಳಿಗೆ ಅತ್ಯಂತ ಪವಿತ್ರವಾದ ದೇವಸ್ಥಾನವಾಗಿದೆ. ಇನ್ನು ಕೊನೆಯದಾಗಿ ತಮಿಳುನಾಡಿನ ಮಧುರೈ ಮೀನಾಕ್ಷಿ ಅಮ್ಮ ದೇವಸ್ಥಾನವು ಕೂಡ ಹಿಂದುಗಳು, ಜೀವನದಲ್ಲಿ ಒಮ್ಮೆಯಾದರೂ ಭೇಟಿ ಮಾಡಬೇಕಾದಂತಹ ಪುಣ್ಯ ಸ್ಥಳವಾಗಿದೆ.

Leave a Reply

Your email address will not be published. Required fields are marked *