Dhruva Sarja: ರಾಜಕೀಯಕ್ಕೆ ಬರ್ತೀರಾ ಎಂದಾಗ ಧ್ರುವ ಸರ್ಜಾ ನೀಡಿದ ಉತ್ತರ ಎಂಥದ್ದು?

Dhruva Sarja ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ವರ್ಷಗಳ ಹಿಂದೇನೆ ನಾಯಕ ನಟನಾಗಿ ಎಂಟ್ರಿ ನೀಡಿದರು ಕೂಡ ನಟಿಸಿರುವುದು ಮಾತ್ರ ಧ್ರುವ ಸರ್ಜಾ(Dhruva Sarja) ಅವರು ಕೆಲವೇ ಕೆಲವು ಸಿನಿಮಾಗಳಲ್ಲಿ ಮಾತ್ರ. ಅವರು ಒಂದು ಸಿನಿಮಾಗೆ ಮೂರರಿಂದ ನಾಲ್ಕು ವರ್ಷಗಳು ತೆಗೆದುಕೊಳ್ಳುವ ಕಾರಣದಿಂದಾಗಿಯೇ ಇಷ್ಟೊಂದು ನಿಧಾನವಾಗಿ ಅವರು ಸಿನಿಮಾ ಮಾಡುತ್ತಿದ್ದಾರೆ ಎನ್ನುವ ಆರೋಪ ಇದ್ದರೂ ಕೂಡ ಅವರ ಅಭಿಮಾನಿ ಬಳಗ ಹೆಚ್ಚುತ್ತಲೆ ಇದೆ.

ಅದಕ್ಕಾಗಿ ಅನಿಸುತ್ತೆ ಈ ವರ್ಷ ಅವರು ಎರಡೆರಡು ಸಿನಿಮಾಗಳಲ್ಲಿ ನಿರತರಾಗಿದ್ದಾರೆ. ಈಗಾಗಲೇ ಎಪಿ ಅರ್ಜುನ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಮಾರ್ಟಿನ್(Martin Kannada Film) ಸಿನಿಮಾ ಚಿತ್ರೀಕರಣವನ್ನು ಪೂರೈಸಿ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ಅದಾದ ನಂತರ ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವಂತಹ ಕೆಡಿ(KD Film) ಬಹುತೇಕ ಚಿತ್ರಿಕರಣವನ್ನು ಪೂರೈಸಿದೆ ಎಂಬುದಾಗಿ ಹೇಳಬಹುದಾಗಿದೆ.

ಇನ್ನು ಇತ್ತೀಚಿಗಷ್ಟೇ ರಾಜಕೀಯ ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ನಡೆಸಲು ಕೂಡ ಧ್ರುವ ಸರ್ಜಾ(Action Prince Dhruva Sarja) ಅವರು ಹೋಗಿದ್ದರು. ಒಂದು ಲಕ್ಷದಲ್ಲಿ ಬಹುತೇಕ ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಕೂಡ ರಾಜಕೀಯ ಅಭ್ಯರ್ಥಿಗಳ ಪರವಾಗಿ ಸದ್ಯದ ಮಟ್ಟಿಗೆ ಪ್ರಚಾರವನ್ನು ನಡೆಸುತ್ತಿದ್ದಾರೆ. ಇದರ ನಡುವೆ ಮಾಧ್ಯಮದವರು ಧ್ರುವ ಸರ್ಜಾ ಅವರ ಬಳಿ ರಾಜಕೀಯಕ್ಕೆ ಸೇರುತ್ತೀರ ಎಂಬುದಾಗಿ ಪ್ರಶ್ನೆಯನ್ನು ಕೇಳಿದಾಗ ಅವರು ನೀಡಿರುವ ಉತ್ತರವೇ ಬೇರೆಯಾಗಿತ್ತು.

ರಾಜಕೀಯ ಸೇರ್ಪಡೆಯ ಬಗ್ಗೆ ಪ್ರಶ್ನೆ ಕೇಳಿದಾಗ ಧ್ರುವ ಸರ್ಜಾ ಸಿನಿಮಾದಲ್ಲಿ ಇರುವ ರಾಜಕೀಯವೇ ಸಾಕಾಗಿ ಹೋಗಿದೆ ಇನ್ನೂ ಈ ರಾಜಕೀಯ ಬೇರೆ ಮಾಡಬೇಕಾ ಎಂಬುದಾಗಿ ತಮಾಷೆಯ ಉತ್ತರವನ್ನು ನೀಡಿದ್ದಾರೆ. ಸದ್ಯಕ್ಕೆ ಇತ್ತೀಚಿಗಷ್ಟೇ ಹೆಣ್ಣು ಮಗುವಿನ ತಂದೆಯಾಗಿರುವ ಧ್ರುವ ಸರ್ಜಾ ಅವರು ತಮ್ಮ ಮಗಳ ನಾಮಕರಣಕ್ಕಾಗಿ ಅದ್ದೂರಿಯ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಕೂಡ ಇದೆ. ಧ್ರುವ ಸರ್ಜಾ ಅವರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *