ಪ್ರತಿಯೊಬ್ಬರ ಜೀವನದಲ್ಲಿ ಕೂಡ ಒಂದಲ್ಲ ಒಂದು ಕಷ್ಟಗಳು ಖಂಡಿತವಾಗಿ ಇದ್ದೇ ಇರುತ್ತವೆ ಆದರೆ ಅವುಗಳನ್ನು ದೂರ ಮಾಡಿಕೊಳ್ಳಲು ಅಥವಾ ನಮ್ಮ ಜೀವನವನ್ನು ನಾವು ಸರಿಯಾಗಿ ನಡೆಸಲು ಕೆಲವೊಂದು ವಿಚಾರಗಳನ್ನು ನಾವು ದೈನಂದಿನ ಜೀವನದಲ್ಲಿ(Daily Life) ಮಾಡಿಕೊಂಡು ಹೋಗುವುದು ಅತ್ಯಂತ ಪ್ರಮುಖವಾಗಿರುತ್ತದೆ. ಹಾಗಿದ್ದರೆ ಬನ್ನಿ ಆ ಕೆಲಸಗಳೇನು ಎಂಬುದನ್ನು ತಿಳಿಯೋಣ.
ಮೊದಲಿಗೆ ಬೆಳಗ್ಗೆ ಎದ್ದ ತಕ್ಷಣ ಆದಷ್ಟು ಬೇಗ ಸ್ನಾನ(Early Shower) ಮಾಡಿಕೊಂಡು ಶುಚಿಯಾಗುವುದು. ಬೆಳಗ್ಗೆ ಆದಷ್ಟು ಬೇಗ ಸ್ನಾನ ಮಾಡುವುದರಿಂದ ನಿಮ್ಮಲ್ಲಿ ತಾಜಾ ಅನುಭವ ಪ್ರಾರಂಭವಾಗಿ ನಿಮ್ಮ ದಿನ ಅತ್ಯುತ್ತಮವಾಗಿ ಆರಂಭವಾಗುತ್ತದೆ ಹಾಗೂ ಇಡೀ ದಿನವನ್ನು ಅದು ಉತ್ತಮಗೊಳಿಸುತ್ತದೆ ಎನ್ನುವುದು ಒಂದು ಮಾನಸಿಕ ಲೆಕ್ಕಾಚಾರವಾಗಿರುತ್ತದೆ. ಹೀಗಾಗಿ ಬೆಳಗ್ಗೆ ಎದ್ದ ತಕ್ಷಣ ಬೇಗನೆ ಸ್ನಾನ ಮಾಡುವುದು ಕೂಡ ನಿಮ್ಮ ದಿನವನ್ನು ಒಳ್ಳೆಯದು ಮಾಡುತ್ತದೆ.
ಎರಡನೇದಾಗಿ ಸ್ನಾನ ಮಾಡಿ ಶುಚಿಯಾದ ನಂತರ ಮೊದಲಿಗೆ ದೇವರಿಗೆ ಕೈಮುಗಿದು ಪ್ರಾರ್ಥನೆ(God Prayers) ಮಾಡುವ ಅಭ್ಯಾಸವನ್ನು ಬೆಳೆಸಿಕೊಳ್ಳಿ ಹಾಗೂ ಅದರಲ್ಲೂ ವಿಶೇಷವಾಗಿ ಪವಿತ್ರವಾದ ತುಳಸಿ ಗಿಡಕ್ಕೆ ಪೂಜೆ ಮಾಡುವ ಪರಿಪಾಠವನ್ನು ಬೆಳೆಸಿಕೊಳ್ಳುವುದು ನಿಮ್ಮ ಮನಸ್ಸಿಗೆ ಇನ್ನಷ್ಟು ಶಾಂತಿಯನ್ನು ತಂದು ಕೊಡುತ್ತದೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಅರಿತುಕೊಳ್ಳಬೇಕಾಗಿದೆ. ಇದು ನಿಮ್ಮ ಇಡೀ ದಿನ ಚೆನ್ನಾಗಿರುವುದಕ್ಕೆ ಪ್ರಮುಖ ಕಾರಣವಾಗಿರುತ್ತದೆ.
ಕೊನೆಯದಾಗಿ ಪ್ರತಿಯೊಬ್ಬರ ಜೊತೆಗೆ ಕೂಡ ಪ್ರೀತಿಯಿಂದ ವರ್ತಿಸಬೇಕು. ಹಿರಿಯರ ಆಶೀರ್ವಾದವನ್ನು(Elders Blessing) ಪಡೆದುಕೊಳ್ಳಿ ಹಾಗೂ ಕಿರಿಯರಿಗೆ ಪ್ರೀತಿಯ ಮಾತುಗಳನ್ನು ಆಡಿ. ಪುರಾಣ ಗ್ರಂಥಗಳ ಪ್ರಕಾರ ಹೇಳಿರುವ ವಿಚಾರವೇನಂದರೆ ನೀವು ಉಳಿದವರಿಗೆ ಏನು ನೀಡುತ್ತಿರೋ ಅದೇ ನಿಮಗೆ ಪುನಃ ವಾಪಾಸು ಸಿಗುತ್ತದೆ ಎಂಬುದು. ಹೀಗಾಗಿ ಪ್ರತಿಯೊಬ್ಬರನ್ನು ಕೂಡ ಪ್ರೀತಿಯಿಂದ ಹಾಗೂ ಗೌರವದಿಂದ ನೋಡಿಕೊಳ್ಳುವ ಮೂಲಕ ದಿನವನ್ನು ಆದಷ್ಟು ಸಂತೋಷಮಯವಾಗಿ ಇರಿಸಿಕೊಳ್ಳಲು ನೋಡಿ ಖಂಡಿತವಾಗಿ ಒಂದು ದಿನದ ಒಳ್ಳೆಯ ಪರಿಣಾಮ ಎನ್ನುವುದು ಇನ್ನಷ್ಟು ದಿನಗಳಿಗೆ ವಿಸ್ತರಿಸಿ ನಿಮ್ಮ ಜೀವನವೇ ಚೆನ್ನಾಗಿರುವಂತೆ ನಿಮ್ಮ ಕೈಯಾರೆ ನೀವೇ ಮಾಡಿಕೊಳ್ಳಬಹುದು.