Deepika Padukone ಕರ್ನಾಟಕ ಮೂಲದ ಬಾಲಿವುಡ್ ನಾಯಕ ನಟಿ ಆಗಿರುವಂತಹ ದೀಪಿಕಾ ಪಡುಕೋಣೆ(Deepika Padukone) ಅವರ ಕುರಿತಂತೆ ಕೆಲವೊಂದು ವಿಚಾರಗಳನ್ನು ಇಂದಿನ ಲೇಖನಿಯಲ್ಲಿ ನಾವು ನಿಮಗೆ ಹೇಳಲು ಹೊರಟಿದ್ದೇವೆ. ಅದರಲ್ಲಿ ವಿಶೇಷವಾಗಿ ಅವರ ವೈಯಕ್ತಿಕ ಜೀವನದ ಕುರಿತಂತೆ. ಹೌದು ಮದುವೆ ಆಗುವುದಕ್ಕೂ ಮುನ್ನ ಅವರು ರಿಲೇಷನ್ಶಿಪ್ ನಲ್ಲಿ ಇದ್ದಂತಹ ಬಾಯ್ ಫ್ರೆಂಡ್ಗಳು ಯಾರೆಲ್ಲ ಎಂಬ ವಿಚಾರದ ಕುರಿತಂತೆ ವಿವರವಾಗಿ ತಿಳಿಯಲು ಹೊರಟಿದ್ದೇವೆ ಬನ್ನಿ.
Siddharth Mallya ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸೇರಿದಂತೆ ಇನ್ನೂ ಹಲವಾರು ಐಷಾರಾಮಿ ಕಂಪನಿಗಳ ಒಡೆಯ ಆಗಿರುವಂತಹ ವಿಜಯ್ ಮಲ್ಯ ಅವರ ಪುತ್ರ ಸಿದ್ದಾರ್ಥ್ ಮಲ್ಯ(Siddharth Mallya) ಅವರ ಜೊತೆಗೂ ಕೂಡ ದೀಪಿಕಾ ಪಡುಕೋಣೆ ಸಾಕಷ್ಟು ಸಮಯಗಳ ಕಾಲ ಡೇಟಿಂಗ್ ಮಾಡುತ್ತಿದ್ದರು ಹಾಗೂ ಆರ್ಸಿಬಿ(RCB) ಪರವಾಗಿ ಬೆಂಬಲ ನೀಡಲು ಕೂಡ ಕ್ರೀಡಾಂಗಣಕ್ಕೆ ಆಗಾಗ ಬರುತ್ತಿದ್ದದ್ದನ್ನು ನೀವು ನೋಡಿರಬಹುದು. ಇವರಿಬ್ಬರ ನಡುವೆ ನಡೆದಂತಹ ಚಿಕ್ಕ ಭಿನ್ನಾಭಿಪ್ರಾಯದಿಂದಾಗಿ ಇಬ್ಬರೂ ಕೂಡ ಬೇರಾಗಬೇಕಾಗಿ ಬಂದಿತು. MS Dhoni ಈ ಹೆಸರನ್ನು ಖಂಡಿತವಾಗಿ ನೀವು ನಂಬೋದಿಲ್ಲ ಆದರೂ ಕೂಡ ನೀವು ನಂಬಲೇಬೇಕು. ಇದು ಎಷ್ಟರಮಟ್ಟಿಗೆ ಸತ್ಯ ಅಥವಾ ಸುಳ್ಳು ಎನ್ನುವುದನ್ನು ಚರ್ಚಿಸಲು ನಿಂತರೆ ಪರ ವಿರೋಧವಾದಗಳು ಕಂಡು ಬರಬಹುದು ಆದರೆ ಮಹೇಂದ್ರ ಸಿಂಗ್ ಧೋನಿ(Mahendra Singh Dhoni) ಅವರ ಜೊತೆಗೂ ಕೂಡ ದೀಪಿಕಾ ಪಡುಕೋಣೆ ಅವರ ಹೆಸರು ಕೇಳಿ ಬಂದಿತ್ತು.
Yuvaraj Singh ಭಾರತೀಯ ಕ್ರಿಕೆಟ್ ತಂಡದ ಸಿಕ್ಸರ್ ಕಿಂಗ್ ಆಗಿರುವ ಯುವರಾಜ್ ಸಿಂಗ್ ರವರು ಕೂಡ ಹಲವಾರು ಬಾರಿ ದೀಪಿಕಾ ಪಡುಕೋಣೆ ಅವರ ಜೊತೆಗೆ ಕ್ಯಾಮರಾ ಕಣ್ಣಿಗೆ ಕಾಣಿಸಿಕೊಂಡಿದ್ದು ಅವರಿಬ್ಬರ ನಡುವೆ ಡೇಟಿಂಗ್ ನಡೆಯುತ್ತಿದೆ ಎಂಬ ಸುದ್ದಿಗಳು ಓಡಾಡುವಂತೆ ಮಾಡಿದ್ದು ಸುಳ್ಳಲ್ಲ. Ranbir Kapoor ಈ ಹೆಸರಂತೂ ದೀಪಿಕಾ ಪಡುಕೋಣೆ ಅವರ ಸಿನಿಮಾ ಜೀವನದಲ್ಲಿ ಸಾಕಷ್ಟು ದೊಡ್ಡ ಮಟ್ಟದ ಪರಿಣಾಮವನ್ನು ಬೀರಿದಂತಹ ಹೆಸರು ಎಂದು ಹೇಳಬಹುದಾಗಿದೆ. ಇವರಿಬ್ಬರ ಲವ್ ಸ್ಟೋರಿ ಯಾವ ರೀತಿಯಲ್ಲಿ ದೊಡ್ಡಮಟ್ಟದ ಜನಪ್ರಿಯತೆಯನ್ನು ಪಡೆದುಕೊಂಡಿತ್ತು ಎಂದರೆ ಇವರಿಬ್ಬರು ಮದುವೆ ಆಗುವ ಹಂತಕ್ಕೂ ಕೂಡ ಹೋಗಿದ್ದರು ಎಂಬುದಾಗಿ ತಿಳಿದು ಬಂದಿದೆ. ಆದರೆ ರಣಬೀರ್ ಕಪೂರ್(Ranbir Kapoor) ಅವರ ತಾಯಿಗೆ ದೀಪಿಕಾ ಪಡುಕೋಣೆ ಇಷ್ಟ ಇರಲಿಲ್ಲ ಎನ್ನುವ ಕಾರಣಕ್ಕಾಗಿ ಈ ಮದುವೆ ಮುರಿದು ಬಿತ್ತು ಹಾಗೂ ಇವರಿಬ್ಬರು ಬ್ರೇಕಪ್ ಮಾಡಿಕೊಂಡಿದ್ದರು ಎಂಬುದಾಗಿ ಸುದ್ದಿ ಇದೆ.
ಇದಾದ ನಂತರ ಕೊನೆಯದಾಗಿ ಅವರು ಕಾಣಿಸಿಕೊಂಡಿದ್ದು ರಣವೀರ್ ಸಿಂಗ್(Ranveer Singh) ಅವರ ಜೊತೆಗೆ. ರಾಮಲೀಲಾ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ಇವರಿಬ್ಬರ ನಡುವೆ ಪ್ರೀತಿ ಪ್ರಾರಂಭವಾಗಿ ನಂತರ ಇಬ್ಬರೂ ಕೂಡ ಮನೆಯವರ ಒಪ್ಪಿಗೆಯ ಮೇರೆಗೆ ಅದ್ದೂರಿಯಾಗಿ ಮದುವೆ ಆಗಿರುವುದು ನಿಮಗೆಲ್ಲರಿಗೂ ತಿಳಿದೇ ಇದೆ. ದೀಪಿಕಾ ಪಡುಕೋಣೆ(Deepika Padukone) ಅವರ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳುವುದನ್ನು ಮಾತ್ರ ಮರೆಯಬೇಡಿ.