Darshan Thoogudeepa ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ನಾಯಕ ನಟರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಾರೆ. ಕನ್ನಡ ಚಿತ್ರರಂಗದ ಖ್ಯಾತ ಖಳನಾಯಕನ ಮಗನಾಗಿದ್ದರೂ ಕೂಡ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಸಾಕಷ್ಟು ಕಷ್ಟ ಪಡಬೇಕಾಯಿತು ಎಂಬುದು ಕೂಡ ಪ್ರತಿಯೊಬ್ಬರಿಗೂ ಕೂಡ ತಿಳಿದಿದ್ದು, ಅವರ ಜೀವನ ಒಂದು ಸ್ಪೂರ್ತಿದಾಯಕ ಪುಸ್ತಕ ಎಂದರು ಕೂಡ ತಪ್ಪಾಗಲಾರದು.
ಇಂದಿಗೂ ಕೂಡ ಚಿತ್ರರಂಗದಲ್ಲಿ ಹಿರಿಯ ಸ್ಟಾರ್ ನಟ ಆಗಿದ್ದರೂ ಕೂಡ ಯುವ ಪ್ರತಿಭೆಗಳಿಗೆ ಅವರು ನೀಡುವಂತಹ ಪ್ರೋತ್ಸಾಹ ನಿಜಕ್ಕೂ ಕೂಡ ಪ್ರಶಾಂಸಾರ್ಹವಾದದ್ದು. ಆದರೆ ಇತ್ತೀಚಿನ ದಿನಗಳಲ್ಲಿ ನೀವು ಗಮನಿಸಬಹುದು ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ರವರು ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭರದಿಂದ ಭಾಗಿಯಾಗಿದ್ದರು.
ಇನ್ನು ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿಯಾಗಿರುವಂತಹ ಸತೀಶ್ ರೆಡ್ಡಿ ಅವರ ಪರವಾಗಿ ತಮ್ಮ ರಾಬರ್ಟ್ ಸಿನಿಮಾದ ನಿರ್ಮಾಪಕರಾಗಿರುವಂತಹ ಉಮಾಪತಿ ಶ್ರೀನಿವಾಸಗೌಡ(Umapathy Srinivas Gowda) ಅವರ ವಿರುದ್ಧವಾಗಿ ದರ್ಶನ್(Darshan) ಪ್ರಚಾರ ಮಾಡಿದ್ದರು. ಈ ಸಂದರ್ಭದಲ್ಲಿ ಇಬ್ಬರ ನಡುವೆಯೂ ಕೂಡ ಸಾಕಷ್ಟು ವೈಯಕ್ತಿಕವಾದ ವಿಚಾರಗಳು ಹಾಗೂ ಟೀಕೆ ಟಿಪ್ಪಣಿಗಳು ಹೊರಬಂದಿದ್ದನ್ನು ಕೂಡ ಇಡೀ ಕರ್ನಾಟಕ ಜನತೆ ಸಾಕ್ಷಿಕರಿಸಿದೆ.
ಒಟ್ಟಾರೆಯಾಗಿ ದರ್ಶನ್(Darshan Thoogudeepa) ರವರ ಮಾತಿಗೆ ಉಮಾಪತಿ ಶ್ರೀನಿವಾಸ ಗೌಡ ಅವರು ಚುನಾವಣೆ ಫಲಿತಾಂಶ ಬಂದ ನಂತರ ನಾನು ಉತ್ತರ ನೀಡುತ್ತೇನೆ ಎಂಬುದಾಗಿ ನೇರವಾಗಿ ಹೇಳಿದ್ದಾರೆ. ಇದು ಮುಂದಿನ ದಿನಗಳಲ್ಲಿ ಯಾವ ತಿರುವನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ. ಇವರಿಬ್ಬರ ಈ ಮನಸ್ಥಾಪದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.