Darshan Thoogudeepa: ಡಿ ಬಾಸ್ ಜೀವನದಲ್ಲಿ ನಡೆದಿರುವ ಈ ಕಣ್ಣೀರ ಕಹಾನಿಯ ಬಗ್ಗೆ ಎಷ್ಟು ಜನರಿಗೆ ಗೊತ್ತು?

Darshan Thoogudeepa ಕನ್ನಡ ಚಿತ್ರರಂಗದ ಸದ್ಯದ ಮಟ್ಟಿಗಿನ ಅತ್ಯಂತ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan). ಕೇವಲ ತಮ್ಮ ಸಿನಿಮಾ ನಟನೆಯಿಂದ ಮಾತ್ರವಲ್ಲದೆ ನಿಜ ಜೀವನದಲ್ಲಿ ಅವರು ಅಭಿಮಾನಿಗಳ ಜೊತೆಗೆ ಹಾಗೂ ಅಭಿಮಾನಿಗಳಿಗಾಗಿ ಮಾಡುವಂತಹ ಹಲವಾರು ಕೆಲಸಗಳಿಂದಾಗಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ರವರು ಕುಟುಂಬಕ್ಕಿಂತ ಹೆಚ್ಚಾಗಿ ಅಭಿಮಾನಿಗಳನ್ನು ತಮ್ಮ ಕುಟುಂಬ ಎಂಬುದಾಗಿ ಭಾವಿಸುತ್ತಾರೆ. ಸ್ನೇಹಿತರಿಗೂ ಕೂಡ ಕುಟುಂಬಕ್ಕಿಂತ ಹೆಚ್ಚಾಗಿ ಸಮಯವನ್ನು ನೀಡುತ್ತಾರೆ ಅದಕ್ಕಾಗಿ ಎಲ್ಲರಿಗೂ ಅವರು ಇಷ್ಟ ಆಗುವುದು. ಯಾಕೆಂದರೆ ಕಷ್ಟದ ಸಂದರ್ಭದಲ್ಲಿ ಅವರ ಕೈ ಹಿಡಿದವರು ಯಾರು ಎನ್ನುವ ಸತ್ಯ ದರ್ಶನ್ ರವರಿಗೆ ಮಾತ್ರ ತಿಳಿದಿದೆ. ಅದಕ್ಕಾಗಿ ತಮ್ಮ ಎದೆಯ ಮೇಲೆ ಹಚ್ಚೆಯನ್ನು ಕೂಡ ಹಾಕಿಸಿಕೊಂಡಿದ್ದಾರೆ ಡಿ ಬಾಸ್.

ಇನ್ನು ಧರ್ಮಸ್ಥಳದ ಧರ್ಮಾಧಿಕಾರಿಯಾಗಿರುವಂತಹ ವೀರೇಂದ್ರ ಹೆಗ್ಗಡೆಯವರು(Veerendra Heggade) ಇಲ್ಲದೆ ಹೋದಲ್ಲಿ ನಮ್ಮ ಜೀವನವೇ ಮುಗಿದು ಹೋಗುತ್ತಿತ್ತು ಎನ್ನುವ ಸತ್ಯವನ್ನು ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಹಂಚಿಕೊಂಡಿದ್ದಾರೆ. ಹೌದು ತೂಗುದೀಪ್ ಶ್ರೀನಿವಾಸ್ ಅವರ ಕಾಲ ನಂತರ ಮನೆಯಲ್ಲಿ ಆದಾಯದ ಮೂಲವೇ ಇರಲಿಲ್ಲ ಹೀಗಾಗಿ ಮಕ್ಕಳ ಜೊತೆಗೆ ಧರ್ಮಸ್ಥಳಕ್ಕೆ ಹೋಗಿ ಅಲ್ಲಿಯ ಜೀವನವನ್ನು ಕಳೆದುಕೊಳ್ಳುವ ನಿರ್ಧಾರವನ್ನು ಮೀನಾ ತೂಗುದೀಪ್ ಮಾಡಿದ್ರಂತೆ. ಆದರೆ ಆ ಸಂದರ್ಭದಲ್ಲಿ ಧರ್ಮಾಧಿಕಾರಿಗಳು ಪ್ರಮುಖ ಬೆಂಬಲವಾಗಿ ನಿಲ್ಲುತ್ತಾರಂತೆ.

ಇಬ್ಬರು ಗಂಡು ಮಕ್ಕಳನ್ನು ಹೆತ್ತಿದ್ದೀರಾ ನಿಮಗೆ ಯಾಕೆ ಚಿಂತೆ ಹೋಗಿ ನಿಮಗೆ ಒಳ್ಳೆಯದಾಗುತ್ತದೆ ಎಂಬುದಾಗಿ ಧರ್ಮಸ್ಥಳದ ವೀರೇಂದ್ರ ಹೆಗಡೆಯವರು ಧೈರ್ಯ ತುಂಬಿದ ನಂತರ ತಮ್ಮ ಮಕ್ಕಳನ್ನು ಕರೆದುಕೊಂಡು ಮತ್ತೆ ವಾಪಾಸ್ಸು ಬರುತ್ತಾರಂತೆ. ಅದಕ್ಕಾಗಿ ಇಂದಿಗೂ ಕೂಡ ದರ್ಶನ್(Darshan) ಅವರು ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರನ್ನು ನೆನಪಿಸಿಕೊಳ್ಳುತ್ತಾರೆ. ಈ ಘಟನೆಯ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Reply

Your email address will not be published. Required fields are marked *