KA Congress ಈ ಬಾರಿಯ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಯನ್ನು ಕಾಂಗ್ರೆಸ್ ಪಕ್ಷದ ಬಲಿಷ್ಠ ನಾಯಕರಾಗಿರುವಂತಹ ಸಿದ್ದರಾಮಯ್ಯ(Siddharamaiah) ಹಾಗೂ ಡಿಕೆ ಶಿವಕುಮಾರ್(DK Shivakumar) ನೇತೃತ್ವದಲ್ಲಿ ಪಕ್ಷ 135 ಸೀಟುಗಳನ್ನು ಗೆಲ್ಲುವ ಮೂಲಕ ಅಧಿಕಾರಯುತವಾಗಿ ಅಧಿಕಾರವನ್ನು ಪಡೆದುಕೊಂಡು ಈಗಾಗಲೇ ದೊಡ್ಡ ಮಟ್ಟದಲ್ಲಿ ಅದ್ದೂರಿಯಾಗಿ ಪ್ರಮಾಣವಚನ ಕಾರ್ಯಕ್ರಮ ಕೂಡ ನಡೆದು ಹೋಗಿದೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿ ಆಗಿ ಅಧಿಕಾರವನ್ನು ಸ್ವೀಕರಿಸಿದರೆ ಡಿಕೆ ಶಿವಕುಮಾರ್ ಅವರು ಉಪಮುಖ್ಯಮಂತ್ರಿ ಆಗಿ ಅಧಿಕಾರವನ್ನು ಕೈಗೆ ತೆಗೆದುಕೊಂಡಿದ್ದಾರೆ.
ಇವರಿಬ್ಬರು ಅಧಿಕಾರಕ್ಕೆ ಇರುವ ಮುನ್ನ ಇವರಿಬ್ಬರ ನಡುವೆ ಮುಖ್ಯಮಂತ್ರಿ ಸ್ಥಾನಕ್ಕೆ ಗಲಾಟೆ ನಡೆಯುತ್ತಿದೆ ಎಂಬುದಾಗಿ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿತ್ತು. ಕೊನೆಗೂ ಕೂಡ ಇವೆಲ್ಲ ಕೇವಲ ಗಾಳಿ ಸುದ್ದಿಗಳು ಮಾತ್ರ ನಾವು ಪಕ್ಷದಲ್ಲಿ ಎಲ್ಲರೂ ಕೂಡ ಒಗ್ಗಟ್ಟಾಗಿದ್ದೇವೆ ಎಂಬುದಾಗಿ ಸಾಂಕೇತಿಕವಾಗಿ ಸಾಬೀತುಪಡಿಸುವ ಮೂಲಕ ಎಲ್ಲಾ ಗಾಳಿ ಮಾತುಗಳನ್ನು ದೂರ ಹೋಗುವಂತೆ ಮಾಡಿದ್ದಾರೆ.
ಇನ್ನು ನಿಮಗೆಲ್ಲರಿಗೂ ನೆನಪಿರಬಹುದು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೂ ಬರುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ಐದು ಜನಪ್ರಿಯ ಭಾಗಗಳನ್ನು ಜನರಿಗೆ ಅಧಿಕಾರಕ್ಕೆ ಬಂದರೆ ನೀಡುವುದಾಗಿ ಹೇಳಿಕೊಂಡಿತ್ತು. ಈಗ ಅಧಿಕಾರಕ್ಕೆ ಬರುತ್ತಿದ್ದಂತೆ ಮೊದಲ ಸಂಪುಟ ಸಭೆ ನಡೆಸಿದ ನಂತರ ಕೂಡಲೇ ಹೇಳಿರುವಂತಹ ಭಾಗ್ಯಗಳನ್ನು ಕಾರ್ಯರೂಪಕ್ಕೆ ತರುವಂತಹ ಪ್ರಯತ್ನವನ್ನು ಮಾಡುತ್ತೇವೆ ಎಂಬುದಾಗಿ ಕಾಂಗ್ರೆಸ್ ಪಕ್ಷ ಅಧಿಕೃತವಾಗಿ ಹೇಳಿಕೊಂಡಿದೆ.
ಅದರಲ್ಲಿಯೂ ವಿಶೇಷವಾಗಿ 200 ಯೂನಿಟ್ ವಿದ್ಯುತ್ ಉಚಿತ, ಉಚಿತ ರೇಶನ್ ವಿತರಣೆ ಮತ್ತು ಮಹಿಳೆಯರಿಗೆ ಉಚಿತ ಬಸ್ ಪಾಸ್ ವಿತರಣೆ ಜೊತೆಗೆ ಕೆಲಸವಿಲ್ಲದ ಪದವೀಧರರಿಗೆ ಕೆಲವು ಸಮಯಗಳ ಕಾಲ ಸಹಾಯಧನವನ್ನು ನೀಡುವಂತಹ ಯೋಜನೆಯನ್ನು ಕೂಡ ಈಗಾಗಲೇ ಕಾಂಗ್ರೆಸ್ ಸರ್ಕಾರ (Congress Government)ತನ್ನ ಮ್ಯಾನಿಫೆಸ್ಟ್ ನಲ್ಲಿ ಘೋಷಿಸಿದ್ದು ಅದನ್ನು ಪೂರೈಸುವಂತಹ ಕೆಲಸವನ್ನು ಜವಾಬ್ದಾರಿಯುತವಾಗಿ ನಿರ್ವಹಿಸುತ್ತೇವೆ ಎಂಬುದಾಗಿ ಭರವಸೆಯನ್ನು ನೀಡಿದ್ದಾರೆ.