Bahubali ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗವನ್ನು ಜಾಗತಿಕವಾಗಿ ಗುರುತಿಸಿಕೊಳ್ಳುವಂತೆ ಮಾಡಿದ್ದು ರಾಜ ಮೌಳಿ. ರಾಜ ಮೌಳಿ(SS Rajamouli) ಅವರ ಬಾಹುಬಲಿ ಸಿನಿಮಾ ಎನ್ನುವುದು ಯಾವ ಮಟ್ಟದಲ್ಲಿ ಜಾಗತಿಕವಾಗಿ ಪರಿಣಾಮವನ್ನು ಬೀರಿದೆ ಹಾಗೂ ಭಾರತೀಯ ಚಿತ್ರರಂಗದ ಮಾರುಕಟ್ಟೆಯನ್ನು ಯಾವ ರೀತಿ ವಿಸ್ತರಿಸಿದೆ ಎನ್ನುವುದನ್ನು ನಿಮಗೆ ವಿಶೇಷವಾಗಿ ವಿವರಿಸಿ ಹೇಳಬೇಕಾದ ಅಗತ್ಯ ಇಲ್ಲ ಎಂಬುದಾಗಿ ಭಾವಿಸುತ್ತೇನೆ. ರಾಜ ಮೌಳಿ ಎಂದಾಕ್ಷಣ ಎಂದಿಗೂ ಕೂಡ ಪ್ರತಿಯೊಬ್ಬರಿಗೂ ನೆನಪಿಗೆ ಬರುವುದು ಬಾಹುಬಲಿ(Bahubali) ಸಿನಿಮಾ.
ರಾಜ ಮೌಳಿ ನಿರ್ದೇಶನದಲ್ಲಿ ಮೂಡಿ ಬಂದಿರುವ ಬಾಹುಬಲಿ ಸಿನಿಮಾದಲ್ಲಿ ಬಾಹುಬಲಿ ಪಾತ್ರವನ್ನು ನಿರ್ವಹಿಸಿರುವುದು ರೆಬೆಲ್ ಸ್ಟಾರ್ ಪ್ರಭಾಸ್(Prabhas). ಈ ಪಾತ್ರವನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ ಮಾತ್ರವಲ್ಲದೆ ಈ ಸಿನಿಮಾದಲ್ಲಿ ಬಲ್ಲಾಳದೇವ ಪಾತ್ರವನ್ನು ರಾಣಾದಗ್ಗುಬಾಟಿ(Rana Daggubati) ಕೂಡ ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಬಹುತೇಕ ಎಲ್ಲರೂ ಕೂಡ ಈ ಸಿನಿಮಾದಲ್ಲಿ ನಟಿಸಿದವರು ತಮ್ಮ ಪಾತ್ರಕ್ಕೆ ನ್ಯಾಯ ನೀಡುವಂತಹ ನಟನೆಯನ್ನು ತೋರ್ಪಡಿಸಿರುವುದನ್ನು ಇಡೀ ಜಗತ್ತೇ ಒಪ್ಪಿಕೊಂಡಿದೆ. ಆದರೆ ಈ ಸಿನಿಮಾದ ಬಗ್ಗೆ ಕೆಲವೊಂದು ಗೊತ್ತಿರದೆ ಇರುವಂತಹ ರಹಸ್ಯವನ್ನು ಇಂದಿನ ಲೇಖನಿಯಲ್ಲಿ ಹೇಳಲು ಹೊರಟಿದ್ದೇವೆ.
ಬಾಹುಬಲಿ ಪಾತ್ರದ ಮೂಲಕ ಪ್ರಭಾಸ್ ರವರು ಇಂದು ಇಡೀ ಭಾರತ ಚಿತ್ರರಂಗದಲ್ಲಿಯೇ ಪರ್ಫೆಕ್ಟ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ನಿಮಗೆ ಒಂದು ವಿಚಾರ ಗೊತ್ತಿರದೆ ಇರುವುದು ಏನೆಂದರೆ, ಬಾಹುಬಲಿ(Bahubali) ಪಾತ್ರ ಮೊದಲು ಪ್ರಭಾಸ್ ಅವರನ್ನು ಹುಡುಕಿಕೊಂಡು ಬಂದಿರಲಿಲ್ಲ. ಈ ಸಿನಿಮಾದಲ್ಲಿ ಬಾಹುಬಲಿ ಪಾತ್ರದಲ್ಲಿ ಮತ್ತೊಬ್ಬ ನಟ ನಟಿಸಬೇಕಾಗಿತ್ತು ಆದರೆ ಅವರು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಪ್ರಭಾಸ್ ಈ ಸಿನಿಮಾಗೆ ಮತ್ತೊಬ್ಬ ಆಯ್ಕೆಯಾಗಿ ಚಿತ್ರದ ಒಳಗೆ ಬರುತ್ತಾರೆ. ಹಾಗಿದ್ದರೆ ಬಾಹುಬಲಿ ಪಾತ್ರಕ್ಕೆ ಮೊದಲ ಆಯ್ಕೆ ಯಾರು ಎಂಬುದನ್ನು ತಿಳಿಯೋಣ ಬನ್ನಿ.
ಹೌದು ನಾವು ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ಗ್ರೀಕ್ ಗಾಡ್ ಆಗಿರುವ ಹೃತಿಕ್ ರೋಷನ್(Hrithik Roshan) ಅವರ ಬಗ್ಗೆ. ಈಗಾಗಲೇ ಜೋಧಾ ಅಕ್ಬರ್ ಸಿನಿಮಾದಲ್ಲಿ ಐತಿಹಾಸಿಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಕಾರಣಕ್ಕಾಗಿ ಹೃತಿಕ್ ರೋಷನ್ ಬಾಹುಬಲಿ ಸಿನಿಮಾವನ್ನು ನಿರಾಕರಿಸುತ್ತಾರೆ ಎಂಬುದಾಗಿ ತಿಳಿದು ಬರುತ್ತದೆ. ಒಂದು ವೇಳೆ ಹೃತಿಕ್ ರೋಷನ್ ಬಾಹುಬಲಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರೆ ಖಂಡಿತವಾಗಿ ಇಂದು ಭಾರತೀಯ ಚಿತ್ರರಂಗದಲ್ಲಿ ಯಾರು ಮುಟ್ಟಲಾಗದ ಸ್ಥಾನವನ್ನು ತಲುಪುತ್ತಿದ್ದರು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಖಂಡಿತವಾಗಿ ಇದೊಂದು ಅವರ ಜೀವನದಲ್ಲೇ ತಪ್ಪು ಆಯ್ಕೆಯಾಗಿತ್ತು ಎಂದರೆ ತಪ್ಪಾಗಲಾರದು.