Rocking Star Yash: ಕೆಜಿಎಫ್ ಚಾಪ್ಟರ್ 2 ಸಿನಿಮಾದ ನಂತರ ಯಶ್ ಪಡೆಯುತ್ತಿರುವ ಸಂಭಾವನೆ ಕೇಳಿದ್ರೆ ನೀವು ಕೂಡ ಬೆರಗಾಗ್ತೀರಾ!

Rocking Star Yash ಮೊಗ್ಗಿನ ಮನಸ್ಸು ಸಿನಿಮಾದ ಮೂಲಕ ನಾಯಕ ನಟನಾಗಿ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಯಶ್ ಅವರು ಮೊದಲ ಸಿನಿಮಾದಲ್ಲಿಯೇ ಎಲ್ಲರ ಮನಸ್ಸನ್ನು ಗೆಲ್ಲುವಲ್ಲಿ ಹಾಗೂ ಕನ್ನಡ ಚಿತ್ರರಂಗದ ಭರವಸೆಯ ನಾಯಕ ನಟನಾಗಿ ಕಾಣಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದರು. ತಮ್ಮ ಕರಿಯರ್ ನಲ್ಲಿ ಸೋಲು ಹಾಗೂ ಗೆಲುವುಗಳನ್ನು ಸಮಾನವಾಗಿ ಸ್ವೀಕರಿಸಿದ್ದ ಪ್ರತಿಭೆ ಯಶ್(Yash). ಅದಕ್ಕಾಗಿಯೇ ಇಂದು ಯಾರ ಬೆಂಬಲ ಇಲ್ಲದೆ ಸೆಲ್ಫ್ ಮೇಡ್ ಸ್ಟಾರ್ ಆಗಿ ಭಾರತೀಯ ಚಿತ್ರರಂಗದ ಭೂಪಟದಲ್ಲಿ ಮಿಂಚಿ ಮೆರೆಯುತ್ತಿದ್ದಾರೆ.

ಕೆಜಿಎಫ್ ಚಾಪ್ಟರ್ 2(Kgf Chapter 2) ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಈಗಾಗಲೇ ಬಿಡುಗಡೆಯಾಗಿ ವಿಶ್ವಾದ್ಯಂತ250 ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಮೂಲಕ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರ ಮಾರುಕಟ್ಟೆಯ ಜೊತೆಗೆ ಕನ್ನಡ ಚಿತ್ರರಂಗದ ಮಾರುಕಟ್ಟೆಯನ್ನು ಕೂಡ ಜಾಗತಿಕವಾಗಿ ತೆರೆದಿಟ್ಟಿದೆ ಎಂದು ಹೇಳಬಹುದಾಗಿದೆ. ಕನ್ನಡ ಚಿತ್ರರಂಗವನ್ನು ಬಾನೆತ್ತರಕ್ಕೆ ಕೊಂಡೊಯ್ಯಬೇಕು ಎನ್ನುವಂತಹ ಯಶ್ ಅವರ ಆಸೆ ಅವರಿಂದಲೇ ಪೂರ್ತಿ ಗೊಂಡಿರುವುದು ನಿಜಕ್ಕೂ ಕೂಡ ಹೆಮ್ಮೆ ಪಡುವ ವಿಚಾರ.

Rocking Star Yash

ಇನ್ನು ಈಗಾಗಲೇ ನಿಮಗೆ ತಿಳಿದಿರುವ ಹಾಗೆ ಸದ್ಯದ ಮಟ್ಟಿಗೆ ತಮ್ಮ ಮುಂದಿನ ಸಿನಿಮಾಗಾಗಿ ರಾಕಿಂಗ್ ಸ್ಟಾರ್ ಯಶ್ ರವರು ಸಾಕಷ್ಟು ದೊಡ್ಡ ಮಟ್ಟದ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ. ಅದು ಅಲ್ಲದೆ ಕೆಜಿಎಫ್ ಯಶಸ್ವಿ ಎನ್ನುವುದು ಅವರ ಬೇಡಿಕೆ ಹಾಗೂ ಮಾರುಕಟ್ಟೆ ಮೌಲ್ಯವನ್ನು ಕೂಡ ಹೆಚ್ಚಿಸಿದೆ. ಹಾಗಿದ್ದರೆ ರಾಕಿಂಗ್ ಸ್ಟಾರ್ ಯಶ್ ರವರು ತಮ್ಮ ಮುಂದಿನ ಸಿನಿಮಾಗಳಿಗೆ ಎಷ್ಟು ಕೋಟಿ ಸಂಭಾವನೆಯನ್ನು ಪಡೆದುಕೊಳ್ಳಬಹುದು ಎನ್ನುವ ಕುರಿತಂತೆ ಕೂಡ ಅಭಿಮಾನಿಗಳು ಹಾಗೂ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ಗೊಂದಲ ಇದೆ. ಇಂದಿನ ಲೇಖನಿಯಲ್ಲಿ ರಾಕಿಂಗ್ ಸ್ಟಾರ್ ಯಶ್(Yash) ರವರು ಎಷ್ಟು ಸಂಭಾವನೆ ಪಡೆಯಬಹುದು ಎಂಬುದನ್ನು ತಿಳಿಯೋಣ ಬನ್ನಿ.

ಸದ್ಯದ ಮಟ್ಟಿಗೆ ಪ್ರತಿಯೊಂದು ಭಾಷೆಗಳಲ್ಲಿ ಕೂಡ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿರುವಂತಹ ರಾಕಿಂಗ್ ಸ್ಟಾರ್ ಯಶ್(Rocking Star Yash) ಅವರು ಪಕ್ಕಾ ಪ್ರತಿಯೊಂದು ಭಾಷೆಯಲ್ಲಿ ಕೂಡ ದೊಡ್ಡ ಮಟ್ಟದ ಓಪನಿಂಗ್ ಪಡೆದುಕೊಳ್ಳುವ ಜನಪ್ರಿಯತೆಯನ್ನು ಹೊಂದಿದ್ದಾರೆ. ಹೀಗಾಗಿ ಕಂಡಿತವಾಗಿ ಪ್ರತಿಯೊಂದು ಸಿನಿಮಾಗೆ 50 ಕೋಟಿ ಯಿಂದ ಹೆಚ್ಚಿಗೆ ಸಂಭಾವನೆಯನ್ನು ಹಾಗೂ ಕೊನೆಗೆ ಸಿನಿಮಾ ಬಿಡುಗಡೆಯಾದ ಮೇಲೆ ಲಾಭದಲ್ಲಿ ಕೂಡ ಪಾಲನ್ನು ಪಡೆಯಬಹುದು ಎಂಬುದಾಗಿ ಅಂದಾಜಿಸಲಾಗಿದೆ.

Leave a Reply

Your email address will not be published. Required fields are marked *