Sai Pallavi: ಇಂದು ಜನ್ಮದಿನವನ್ನು ಆಚರಿಸಿಕೊಳ್ಳುತ್ತಿರುವ ನಟಿ ಸಾಯಿ ಪಲ್ಲವಿ ಅವರ ವಯಸ್ಸೆಷ್ಟು?

Sai Pallavi ನಟಿ ಸಾಯಿ ಪಲ್ಲವಿ ಎಂದಾಗ ಅವರ ಗುಣಗಳನ್ನು ವಿವರಿಸಲು ಕೇಳಿದಾಗ ನಮಗೆ ತಲೆಯಲ್ಲಿ ಮೊದಲಿಗೆ ಹೊಡೆದು ಬರುವಂತಹ ವಿಚಾರಗಳು ಏನೆಂದರೆ ಅತ್ಯಂತ ಸರಳ ಉತ್ತಮ ಮನಸುಳ್ಳ ಪ್ರತಿಭಾನ್ವಿತ ಸೌಂದರ್ಯವತಿ ನಟಿ ಎಂಬುದಾಗಿ. ನಿಜಕ್ಕೂ ಕೂಡ ನಾವು ಈ ಮೇಲೆ ಹೇಳಿರುವಂತಹ ಪ್ರತಿಯೊಂದು ಗುಣಗಳು ಕೂಡ ಸಾಯಿ ಪಲ್ಲವಿ(Sai Pallavi) ಅವರಲ್ಲಿದೆ.

ಇಡೀ ಭಾರತೀಯ ಚಿತ್ರರಂಗದಲ್ಲಿ ನಟನೆ ಹಾಗೂ ಸ್ವಾಭಾವಿಕ ಸೌಂದರ್ಯದ ಮೇಲೆ ಯಾರಾದರೂ ಜನಪ್ರಿಯ ರಾಗಿದ್ದಾರೆ ಎಂದರೆ ಅದು ಖಂಡಿತವಾಗಿ ಸಾಯಿ ಪಲ್ಲವಿ(Sai Pallavi) ಎಂದು ಹೇಳಬಹುದಾಗಿದೆ. ಯಾವುದೇ ಪಾತ್ರವನ್ನು ನೀಡಿದರೂ ಕೂಡ ಅದಕ್ಕೆ ಸರಿಯಾಗಿ ನ್ಯಾಯವಾದ ನಟನೆಯನ್ನು ತೋರಿಸಬಲ್ಲಂತಹ ಸಾಮರ್ಥ್ಯ ಅವರಲ್ಲಿದೆ. ಇದಕ್ಕಾಗಿಯೇ ಭಾಷೆಯ ಎಲ್ಲೆಯನ್ನು ಮೀರಿ ಸಾಕಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ.

Sai Pallavi

ಈಗಾಗಲೇ ತಮಿಳು ಹಾಗೂ ತೆಲುಗು ಸಿನಿಮಾ ರಂಗದಲ್ಲಿ ನಟಿ ಸಾಯಿ ಪಲ್ಲವಿ ಅವರ ಬೇಡಿಕೆ ಎನ್ನುವುದು ಸಾಕಷ್ಟು ಹೆಚ್ಚಿದ್ದು ಮಲಯಾಳಂ ಚಿತ್ರರಂಗದ ಮೂಲಕ ಅವರು ಕಾಲಿಟ್ಟಿರುತ್ತಾರೆ. ಇನ್ನು ಇಂದು ಜನ್ಮದಿನಾಚರಣೆಯನ್ನು ಆಚರಿಸಿಕೊಳ್ಳುತ್ತಿರುವ ನಟಿ ಸಾಯಿ ಪಲ್ಲವಿ ಅವರ ನಿಜವಾದ ವಯಸ್ಸೆಷ್ಟು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ನಟಿಸುವ ಮೂಲಕ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹಾಗೂ ಸಿನಿಮಾಗಳ ಅವಕಾಶವನ್ನು ಹೊಂದಿರುವಂತಹ ನಟಿ ಸಾಯಿ ಪಲ್ಲವಿ(Sai Pallavi) ಅವರಿಗೆ 31 ವರ್ಷ ವಯಸ್ಸಾಗಿದೆ. ಈಗಾಗಲೇ ದಕ್ಷಿಣ ಭಾರತ ಚಿತ್ರರಂಗದಲ್ಲಿ ಮನೋಜ್ಞವಾದ ನಟನೆಗೆ ಹೆಸರುವಾಸಿಯಾಗಿರುವ ಸಾಯಿ ಪಲ್ಲವಿ ಅವರು ಸಾಕಷ್ಟು ದೊಡ್ಡ ಬಜೆಟ್ ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂಬುದಾಗಿ ಸುದ್ದಿ ಇದೆ.

Leave a Reply

Your email address will not be published. Required fields are marked *