Narendra Modi 2014ರಲ್ಲಿ ಪ್ರಧಾನಮಂತ್ರಿಯಾಗಿ ಮೊದಲ ಬಾರಿ ಆಯ್ಕೆಯಾದ ನಂತರದಿಂದ ಇಂದಿನವರೆಗೂ ಕೂಡ ಭಾರತದ ಸಾರ್ವಕಾಲಿಕ ಶ್ರೇಷ್ಠ ಪ್ರಧಾನಮಂತ್ರಿಗಳ ಸಾಲಿನಲ್ಲಿ ನರೇಂದ್ರ ಮೋದಿಯವರ ಹೆಸರು ಕಂಡು ಬರುತ್ತದೆ. ನರೇಂದ್ರ ಮೋದಿ(Narendra Modi) ಅವರ ಅಧಿಕಾರದ ಅವಧಿಯಲ್ಲಿ ಜಾಗತಿಕವಾಗಿ ಭಾರತ ದೇಶ ವಿಶ್ವಗುರು ಸ್ಥಾನವನ್ನು ಸಂಪಾದಿಸಲು ಪರಿಣಾಮಕಾರಿ ಪ್ರಯತ್ನವನ್ನು ನಡೆಸುತ್ತಿದೆ ಎನ್ನುವುದು ನಿಮ್ಮ ಕಣ್ಣ ಮುಂದೆ ಕಾಣುತ್ತಿದೆ. ಜಾಗತಿಕ ಮಟ್ಟದ ನಾಯಕರು ಕೂಡ ನರೇಂದ್ರ ಮೋದಿ ಒಬ್ಬ ಸಮರ್ಥ ನಾಯಕ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ನರೇಂದ್ರ ಮೋದಿ(Modi) ಅವರ ಅಧಿಕಾರ ಅವಧಿಯಲ್ಲಿ ಸಾಕಷ್ಟು ಜನಪ್ರಿಯ ಯೋಜನೆಗಳು ಕೂಡ ಬಂದಿದ್ದಾವೆ. ಇದರಿಂದಾಗಿ ಮಧ್ಯಮ ಹಾಗೂ ಬಡವರ್ಗದ ಜನರಿಗೆ ಸಾಕಷ್ಟು ಉಪಯೋಗಗಳು ಕೂಡ ಸಿಕ್ಕಿವೆ. ಎಲ್ಲಕ್ಕಿಂತ ಪ್ರಮುಖವಾಗಿ ಅವರ ನೇರ ಹಾಗೂ ದಿಟ್ಟ ನಡೆಯಕಾರಣದಿಂದಾಗಿ ಗಡಿ ಭಾಗಗಳಲ್ಲಿ ಕೂಡ ಭಾರತ ಈಗ ಬಲಿಷ್ಠವಾಗಿ ಕಾಣಿಸಿಕೊಳ್ಳುತ್ತಿರುವುದು ಎಲ್ಲರೂ ಪ್ರಮುಖವಾಗಿ ಗಮನಿಸಬೇಕಾಗಿರುವ ವಿಚಾರ. ಚೀನಾ ಹಾಗೂ ಪಾಕಿಸ್ತಾನ ದೇಶಗಳು ಕೂಡ ಭಾರತದ ಕುರಿತಂತೆ ಮಾತನಾಡಲು ನೂರಾರು ಬಾರಿ ಯೋಚಿಸುವಂತಹ ಕಾಲ ನಿರ್ಮಾಣವಾಗಿದೆ.
ಲಾಕ್ಡೌನ್ ಸಮಯದಲ್ಲಿ ಅವರು ತೆಗೆದುಕೊಂಡಂತಹ ನಿರ್ಧಾರಗಳು ಇಂದಿಗೂ ಕೂಡ ಭಾರತ ದೇಶವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವನ್ನಾಗಿ ಮಾಡಲು ಕಾರಣವಾಗಿದೆ ಎಂದರೆ ತಪ್ಪಾಗಲಾರದು. ಇಡೀ ವಿಶ್ವದಲ್ಲೇ ಅತ್ಯಂತ ಜನಪ್ರಿಯ ಪ್ರಧಾನಮಂತ್ರಿಯಾಗಿ ಕೂಡ ಪ್ರಧಾನಿ ಮೋದಿ(Prime Minister Modi) ಅವರನ್ನು ಗುರುತಿಸಲಾಗಿದೆ. ಇಷ್ಟೆಲ್ಲಾ ಹೆಗ್ಗಳಿಕೆಗೆ ಪಾತ್ರವಾಗಿರುವ ನರೇಂದ್ರ ಮೋದಿ ಅವರ ಆಸ್ತಿ ಎಷ್ಟು ಹಾಗೂ ಅವರು ಪಡೆದುಕೊಳ್ಳುವ ಪ್ರತಿ ತಿಂಗಳ ಸಂಭಾವನೆ ಎಷ್ಟು ಎಂಬುದನ್ನು ತಿಳಿಯೋಣ ಬನ್ನಿ.
ಅಧಿಕೃತ ದಾಖಲೆಗಳ ಪ್ರಕಾರ ಪ್ರಧಾನಿ ನರೇಂದ್ರ ಮೋದಿಯವರು(Namo) ಪ್ರತಿ ತಿಂಗಳಿಗೆ 1.6 ಲಕ್ಷ ರೂಪಾಯಿ ಸಂಭಾವನೆಯನ್ನು ಪಡೆಯುತ್ತಾರೆ ಎಂಬುದಾಗಿ ತಿಳಿದುಬಂದಿದೆ. ಇನ್ನು ಅವರ ಒಟ್ಟಾರೆ ಆಸ್ತಿ, ಮೂರು ಕೋಟಿಯ ಆಸು ಪಾಸಿನಲ್ಲಿ ಇದೆ ಎಂಬುದಾಗಿ ತಿಳಿದು ಬಂದಿದೆ. ಕೆಲವು ರಾಜಕಾರಣಿಗಳನ್ನು ನೀವು ನೋಡಿರಬಹುದು ಚಿಕ್ಕ ಗ್ರಾಮ ಪಂಚಾಯಿತಿ ಪ್ರೆಸಿಡೆಂಟ್ ಆದರೂ ಕೂಡ ಲಕ್ಷಗಟ್ಟಲೆ ಹಣವನ್ನು ಹೊಡೆಯುತ್ತಾರೆ ಆದರೆ ಕಳೆದ ಹಲವಾರು ವರ್ಷಗಳಿಂದ ರಾಷ್ಟ್ರದ ಪ್ರಧಾನ ಮಂತ್ರಿ ಆಗಿದ್ದರೂ ಕೂಡ ನರೇಂದ್ರ ಮೋದಿಯವರು ಕೇವಲ ಸಂಭಾವನೆಯನ್ನು ಮಾತ್ರ ಹೊಂದಿದ್ದಾರೆ ಎಂದರೆ, ನಿಜಕ್ಕೂ ಕೂಡ ಮೆಚ್ಚಲೇಬೇಕು.