Rachita Ram ಮೊದಲು ಧಾರವಾಹಿಗಳಲ್ಲಿ ಬಿಂದ್ಯಾ ರಾಮ್ ಆಗಿ ಕಾಣಿಸಿಕೊಂಡಿದ್ದ ನಟಿ ನಂತರ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಬುಲ್ ಬುಲ್ ಸಿನಿಮಾದ ಮೂಲಕ ರಚಿತಾರಾಮ್(Rachita Ram) ಆಗಿ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಚಾರವಾಗಿದೆ ಎಂಬುದಾಗಿ ಭಾವಿಸುತ್ತೇವೆ. ಬುಲ್ ಬುಲ್ ಸಿನಿಮಾದ ಮೂಲಕ ನಾಯಕ ನಟಿಯಾಗಿ ಕಾಲಿಟ್ಟ ರಚಿತಾ ರಾಮ್ ರವರು ಮತ್ತೆ ಸಿನಿಮಾ ರಂಗದಲ್ಲಿ ಹಿಂದಿರುಗಿ ನೋಡಿದ್ದೇ ಇಲ್ಲ. ಒಂದಾದ ಮೇಲೊಂದರಂತೆ ಸೂಪರ್ ಹಿಟ್ ಸಿನಿಮಾಗಳನ್ನು ನೀಡುತ್ತಲೇ ಹೋಗಿದ್ದಾರೆ.
ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ಗಳ ಆಗಿರುವಂತಹ ಎಲ್ಲಾ ನಟರ ಜೊತೆಗೂ ಕೂಡ ಕಾಣಿಸಿಕೊಂಡಿರುವ ಏಕೈಕ ನಟಿ ರಚಿತರಾಮ್ ಎಂದರು ಕೂಡ ತಪ್ಪಾಗಲಾರದು. ಅವರ ಗುಳಿಕನ್ನೇಯ ಕಾರಣದಿಂದಾಗಿ ಅವರನ್ನು ಕನ್ನಡ ಚಿತ್ರರಂಗದಲ್ಲಿ ಡಿಂಪಲ್ ಕ್ವೀನ್(Dimple Queen) ಎಂಬುದಾಗಿ ಕೂಡ ಕರೆಯಲಾಗುತ್ತದೆ. ಈಗಾಗಲೇ ರಚಿತಾ ರಾಮ್ ರವರು ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಿನಿಮಾಗಳನ್ನು ಹೊಂದಿರುವ ನಾಯಕನಟಿ ಎಂಬ ಬಿರುದಿಗೂ ಕೂಡ ಪಾತ್ರರಾಗಿದ್ದಾರೆ.
ಸದ್ಯದ ಮಟ್ಟಿಗೆ ದಶಕಗಳ ಸಿನಿಮಾ ಅನುಭವವನ್ನು ಹೊಂದಿರುವಂತಹ ಹಾಗೂ ಯಾವುದೇ ಪಾತ್ರವನ್ನು ನೀಡಿದರು ಕೂಡ ನಟಿಸಬಲ್ಲಂತಹ ಸಾಮರ್ಥ್ಯವಿರುವ ಏಕೈಕ ಕನ್ನಡದ ನಟಿ ರಚಿತಾ ರಾಮ್(Rachitha Ram) ಎಂದು ಹೇಳಬಹುದಾಗಿದೆ. ಇನ್ನು ಅವರು ಒಂದು ಸಿನಿಮಾಗೆ ಪಡೆದುಕೊಳ್ಳುವಂತಹ ಸಂಭಾವನೆ ಎಷ್ಟು ಎಂಬುದರ ಬಗ್ಗೆ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ.
ಸದ್ಯದ ಮಟ್ಟಿಗೆ ಅತ್ಯಂತ ಹೆಚ್ಚು ಬೇಡಿಕೆಯನ್ನು ಹೊಂದಿರುವಂತಹ ನಟಿ ರಚಿತರಾಮ್ ಆಗಿದ್ದು ಸಾಕಷ್ಟು ಸಿನಿಮಾಗಳು ಕೂಡ ಅವರ ಕೈಯಲ್ಲಿದೆ. ಒಂದು ಸಿನಿಮಾಗೆ 50 ರಿಂದ 60 ಲಕ್ಷ ರೂಪಾಯಿ ಸಂಬಾವನೆಯನ್ನು ರಚಿತಾ ರಾಮ್ ಪಡೆದುಕೊಳ್ಳುತ್ತಾರೆ ಎಂಬುದಾಗಿ ಸಿನಿಮಾ ಮೂಲಗಳು ಹೇಳುತ್ತವೆ. ಯಾವುದೇ ಸ್ಟಾರ್ ನಟರಿಗೂ ಕೂಡ ಕಡಿಮೆ ಇಲ್ಲದಂತೆ ಕನ್ನಡ ಚಿತ್ರರಂಗದಲ್ಲಿ ಅವರು ಬೇಡಿಕೆ ಹೊಂದಿದ್ದಾರೆ. ಹೀಗಾಗಿ ಸದ್ಯದ ಮಟ್ಟಿಗೆ ಕನ್ನಡ ಚಿತ್ರರಂಗದಲ್ಲಿ ಅವರಿಗಿಂತ ಹೆಚ್ಚು ಸಂಭಾವನೆಯನ್ನು ಪಡೆಯುವಂತಹ ಮತ್ತೊಬ್ಬ ನಟಿ ಇಲ್ಲ ಎಂದು ಹೇಳಬಹುದಾಗಿದೆ.