Maharana Prathap ರಜಪೂತ ಮನೆತನದ ರಾಜರಲ್ಲಿ ಮಹಾರಾಣಾ ಪ್ರತಾಪ್(Maharana Prathap) ಜನಪ್ರಿಯ ರಾಜರಲ್ಲಿ ಪ್ರಮುಖರಾಗಿ ಕಾಣಿಸಿಕೊಳ್ಳುತ್ತಾರೆ. 7.5 ಅಡಿಯ ಎತ್ತರವನ್ನು ಹೊಂದಿದ್ದ ಈ ಅಜಾನುಬಾಹು ವ್ಯಕ್ತಿ ಇಡೀ ಭಾರತದ ಇತಿಹಾಸದಲ್ಲಿ ಎಂದು ಅಳಿಸಲಾಗದಂತಹ ಅಧ್ಯಾಯವನ್ನು ಬರೆದು ಹೋಗಿದ್ದಾರೆ. ಇಡೀ ಭಾರತವನ್ನು ಅಕ್ಬರ್ ಆಕ್ರಮಿಸಿದ ಸಂದರ್ಭದಲ್ಲಿ ರಾಜಸ್ಥಾನದ ಮೇವಾಡದಲ್ಲಿ ಒಬ್ಬನೇ ಯಾರಿಗೂ ಬಗ್ಗದೇ ಬಲವಾಗಿ ನಿಂತಿದ್ದ. ಹಳದಿ ಘಾಟ್ ಕದನ ನಡೆದಾಗ 80000 ಸೈನಿಕರನ್ನು ಹೊಂದಿದ್ದ ಬಲಿಷ್ಠ ಅಕ್ಬರನ(Akbar) ಸೈನ್ಯದಿಂದ 15000 ಸೈನಿಕರ ಜೊತೆಗೆ ಮಹಾರಾಣಾ ಪ್ರತಾಪ್ ಕದನಕಲಿಯಾಗಿ ನಿಂತು ಒಬ್ಬೊಬ್ಬರು ಐದೈದು ಜನರನ್ನು ಮುಗಿಸಿ ಎಂಬುದಾಗಿ ಹೇಳುತ್ತಿದ್ದ.
ಇದು ಮಹಾರಾಣಾ ಪ್ರತಾಪನ(Maharana Prathap) ಧೈರ್ಯಕ್ಕೆ ನಾವು ನೀಡಬಹುದಾದಂತಹ ನಿದರ್ಶನವಾಗಿದ್ದು ಇಡೀ ಭಾರತದ ಚಕ್ರಾಧಿಪತಿಯಾಗಿದ್ದ ಅಕ್ಬರ್ ಎಂದಿಗೂ ಮಹಾರಾಣಾ ಪ್ರತಾಪನ ಎದುರು ಬರುವಂತಹ ಧೈರ್ಯ ಮಾಡಿರಲಿಲ್ಲ. ಅಷ್ಟರ ಮಟ್ಟಿಗೆ ಮಹಾರಾಣ ಪ್ರತಾಪನನ್ನು ನೋಡಲು ಅಥವಾ ಆತನ ಬಗ್ಗೆ ಕೇಳಲು ಅಕ್ಬರನಿಗೆ ಅಂಜಿಕೆಯಾಗುತ್ತಿತ್ತು. ಮಹಾರಾಣಾ ಪ್ರತಾಪನ ಬಗ್ಗೆ ಮೊದಲಿನಿಂದ ತಿಳಿದುಕೊಳ್ಳೋಣ ಬನ್ನಿ. ಜನನ ಆಗಿದ್ದು 1540ರ ಮೇ 9ರಂದು ಕುಂಬಳಗಡದ ರಾಜ ಮಹಾರಾಣಾ ಉದಯ್ ಸಿಂಗ್ ಹಾಗೂ ರಾಣಿ ಜಯವಂತಿ ಬಾಯಿ ದಂಪತಿಗಳ ಪುತ್ರನಾಗಿ ಮಹಾರಾಣ ಪ್ರತಾಪ್ ಜನಿಸುತ್ತಾನೆ.
ಮಹಾರಾಣಾ ಉದಯ್ ಸಿಂಗ್ ಗೆ ಹಲವಾರು ಪತ್ನಿಯರು ಇದ್ದ ಕಾರಣ ಅವರು ಕೂಡ ತಮ್ಮ ಮಕ್ಕಳು ರಾಜ್ಯದ ರಾಜರಾಗಬೇಕೆಂಬುದಾಗಿ ಬಯಸುತ್ತಾರೆ. ಅಕ್ಬರ್ ಇದಕ್ಕಾಗಿ ರಜಪೂತರಲಿಯೇ ಬಿರುಕು ಮೂಡುವಂತೆ ಮಾಡಿ ಮಹಾರಣ ಪ್ರತಾಪ್ ಒಬ್ಬನೇ ಉಳಿಯುವಂತೆ ಮಾಡುತ್ತಾನೆ ಹೀಗಿದ್ದರೂ ಕೂಡ ಮಹಾರಾಣಾ ಪ್ರತಾಪ್ ಕಾಡಿನ ಜನರನ್ನೇ ಒಟ್ಟುಗೂಡಿಸಿ ಅವರಿಗೆ ಯು’ ದ್ಧ ತರಬೇತಿಯನ್ನು ನೀಡಿ ಮೊಘಲರ ಸೈನ್ಯದ ಮೇಲೆ ಮಹಾರಾಣಾ ಪ್ರತಾಪ್ ಎರುಗುತ್ತಿದ್ದ. 7.5 ಅಡಿಯ ಎತ್ತರ ಅವರ ಧರಿಸುತ್ತಿದ್ದ ಕವಚ 70 ಕೆಜಿ ಪಾದರಕ್ಷೆ 10 ಕೆಜಿ ತಲ್ವಾರ್ 10 ಕೆಜಿ ಭರ್ಜಿ 80 ಕೆಜಿ. ಇದನ್ನು ಕೇಳಿದ್ರೇನೇ ಸಾಕು ಮಹಾರಾಣಾ ಪ್ರತಾಪ್ ಹೇಗಿರಬಹುದು ಎಂಬುವ ಅಂದಾಜು ಲೆಕ್ಕಾಚಾರವನ್ನು ನೀವು ಮನಸ್ಸಿನಲ್ಲಿ ಮಾಡಬಹುದಾಗಿದೆ.
ಮಹಾರಾಣಾ ಪ್ರತಾಪ್ ಹಳದಿ ಘಾಟ್ ಕದನದಲ್ಲಿ ಅಕ್ಬರನ ಸೇನಾಪತಿಯಾಗಿದ್ದ ಬೆಹ್ಲೋಲ್ ಖಾನ್ ನನ್ನು ತನ್ನ 10 ಕೆಜಿಯ ತ’ ಲ್ವಾರ್ ನಿಂದ ಕುದುರೆ ಸಮೇತ ಬೇರ್ಪಡಿಸಿದ್ದ. ಇದು ಮಹಾರಾಣಾ ಪ್ರತಾಪನ ಪರಾಕ್ರಮಕ್ಕೆ ನೀಡುವಂತಹ ಒಂದು ಒಳ್ಳೆಯ ಉದಾಹರಣೆಯನ್ನು ಬಹುದಾಗಿದ್ದು ಮಹಾರಾಣಾ ಪ್ರತಾಪ್ ಬೇರೆ ರಾಜರ ಹಾಗೆ ವಿಲಾಸಿಯಾಗಿರಲಿಲ್ಲ. ಕಾಡಿನಲ್ಲಿ ಜನರ ಜೊತೆಗೆ ಬೇಯಿಸಿದ ಗೆಡ್ಡೆ ಗೆಣಸುಗಳನ್ನು ತಿಂದು ಪಾದರಕ್ಷೆ ಇಲ್ಲದೆ ಓಡಾಡಿಕೊಂಡು ನೆಲದಲ್ಲಿಯೇ ಸಾಮಾನ್ಯರಂತೆ ಮಲಗಿ ಪ್ರಜೆ ನಿಜವಾದ ರಾಜ ಆಗಿದ್ದ ಮಹಾರಾಣ ಪ್ರತಾಪ್. ಮೇವಾಡ ಅಕ್ಬರನಿಗೆ ಪಶ್ಚಿಮ ಕರಾವಳಿ ತೀರವನ್ನು ವ್ಯಾಪಾರಕ್ಕಾಗಿ ಸಂಪರ್ಕಿಸಲು ಪ್ರಮುಖವಾಗಿ ಬೇಕಾಗಿತ್ತು ಹೀಗಾಗಿ ಹೇಗಾದರೂ ಮಾಡಿ ಮೇವಾಡವನ್ನು ಗೆಲ್ಲಲೇ ಬೇಕೆಂದು ಹಠ ಹಿಡಿದು ಕುಳಿತ್ತಿದ್ದ.
ಆದರೆ ಇಡೀ ಭಾರತವನ್ನು ಗೆದ್ದಿದ್ದ ಅಕ್ಬರನಿಗೆ ಚಿಕ್ಕ ರಾಜ್ಯ ಮೇವಾಡವನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಯಾಕೆಂದರೆ ಅಲ್ಲಿ ಇದ್ದಿದ್ದು ವೀರ ಮಹಾರಾಣಾ ಪ್ರತಾಪ್. ಅಕ್ಬರ್ ಹಲವಾರು ಹಿಂದೂ ರಾಜರನ್ನು ಕಳುಹಿಸಿದರು ಕೂಡ ಮಹಾರಾಣ ಪ್ರತಾಪ್ ತನ್ನ ರಾಜ್ಯವನ್ನು ಬಿಟ್ಟು ಕೊಡುವುದಿಲ್ಲ ಎನ್ನುವುದಾಗಿ ಸ್ವಾಭಿಮಾನದಿಂದಲೇ ಹೇಳುತ್ತಿದ್ದ. ಅರ್ಧ ರಾಜ್ಯವನ್ನು ನೀಡುತ್ತೇನೆ ಈಗಲಾದರೂ ನಿನ್ನ ನೇ ಮಾಡು ರಾಜ್ಯವನ್ನು ನೀಡು ಎಂದಾಗಲು ಕೂಡ ಮಹಾರಾಣ ಪ್ರತಾಪ್ ನಿರಾಕರಿಸಿದ್ದ ಅಷ್ಟು ಸ್ವಾಭಿಮಾನಿಯಾಗಿದ್ದ. 1576 ರಲ್ಲಿ ನಡೆದಂತಹ ಹಳದಿ ಘಾಟ್ ಕದನದಲ್ಲಿ ಮಹಾರಾಣಾ ಪ್ರತಾಪ್ ಕಡಿಮೆ ಸೈನ್ಯ ಇದ್ದರೂ ಕೂಡ ಅಕ್ಬರನ ಮೊಘಲ್ ಸೈನ್ಯದ ಎದುರು ಹೋರಾಡಿದ ರೀತಿ ನಿಜಕ್ಕೂ ಪ್ರಶಂಸಾರ್ಹವಾಗಿತ್ತು. ಅದರಲ್ಲೂ ವಿಶೇಷವಾಗಿ ಮಹಾರಾಣ ಪ್ರತಾಪನ ಕುದುರೆ ಆಗಿರುವ ಚೇತಕ್ ಇತಿಹಾಸದಲ್ಲಿ ದೊಡ್ಡ ಇತಿಹಾಸವನ್ನೇ ಹೊಂದಿದೆ.
ಮಹಾರಾಣಾ ಪ್ರತಾಪ್ ಚೇತಕ್ ಎನ್ನುವ ನೀಲಿ ಬಣ್ಣದ ಕುದುರೆಗೆ ಮುಖಕ್ಕೆ ಸೊಂಡಿಲನ್ನು ಕಟ್ಟಿ ಕದನ ಮಾಡುತ್ತಿದ್ದ. ಆಗ ಎದುರಾಳಿ ಸೈನ್ಯದ ಆನೆಗಳು, ಚೇತಕ್ನನ್ನು ನೋಡಿ ಇದು ಆನೆಯೋ ಕುದುರೆಯೋ ಎನ್ನುವುದಾಗಿ ಗೊಂದಲಕ್ಕೀಡಾಗುತ್ತಿದ್ದವು. ರಾಣಾ ಪ್ರತಾಪ ಚೇತಕ್ ಕುದುರೆಯನ್ನು ತನ್ನ ಸ್ವಂತ ಮಗನಂತೆ ಸಾಕಿದ್ದ. ಅಂದಿನ ದಿನದಲ್ಲಿ ಕದನದ ಸಂದರ್ಭದಲ್ಲಿ ಆನೆಗಳ ಸೊಂಡಲಿಗೆ ಖ’ ಡ್ಗವನ್ನು ಕಟ್ಟಲಾಗುತ್ತಿತ್ತು. ಆಗ ಚೇತಕ್ ನ ಕಾಲಿಗೆ ತಾಗಿ ಗಾ’ ಯವಾಗುತ್ತದೆ ಆಗ 28 ಅಡಿಗು ದೂರ ಇರುವ ಕಂದಕವನ್ನು ಹಾರಿ ಮಹಾರಾಣಾ ಪ್ರತಾಪನ ಪ್ರಾಣವನ್ನು ರಕ್ಷಿಸಿ ತನ್ನ ಪ್ರಾಣವನ್ನು ತ್ಯಾಗ ಮಾಡುತ್ತದೆ. ಇದೇ ರೀತಿ ಮಹಾರಾಣಾ ಪ್ರತಾಪನ ಆನೆಯಾಗಿರುವ ರಾಮಪ್ರಸಾದ್ ಆನೆ ಕೂಡ ಮೊಘಲ್ ಸೈನ್ಯವನ್ನು ಕಂಗಡಿಸಿತ್ತು ಆಗ ಅದನ್ನು ಸೆರೆಹಿಡಿದು ಅಕ್ಬರನ ಬಳಿ ತಂದಾಗ ಅದು ಆತನ ಅಧೀನವನ್ನು ಒಪ್ಪಿಕೊಳ್ಳದೆ ಅನ್ನ ಹಾರಗಳನ್ನು ತಿಳಿಸಿ ತನ್ನ ಯಜಮಾನ ಇಲ್ಲದ ದುಃಖವನ್ನು ತಡೆಯಲಾಗದೆ ಪ್ರಾಣವನ್ನು ಕಳೆದುಕೊಂಡಿತ್ತು.
ಈ ಸಂದರ್ಭದಲ್ಲಿ ನೇರವಾಗಿ ಮಹಾರಾಣಾ ಪ್ರತಾಪನನ್ನು ಸೋಲಿಸಲು ಸಾಧ್ಯವಿಲ್ಲ ಎಂಬುದಾಗಿ ತಿಳಿದ ಅಕ್ಬರನು ಮಹಾರಾಣಾ ಪ್ರತಾಪ್ ನನ್ನ ಅಧಿಪತ್ಯವನ್ನು ಸ್ವೀಕರಿಸಿದ್ದಾನೆ ಎನ್ನುವ ಗಾಳಿ ಸುದ್ದಿಯನ್ನು ಹರಿಬಿಡುತ್ತಾನೆ. ಇದನ್ನು ತಿಳಿದಂತಹ ಮಹಾರಾಣಾ ಪ್ರತಾಪ ನನ್ನನ್ನು ಸೆರೆಹಿಡಿಯುವಂತಹ ಅಥವಾ ಸೋಲಿಸುವಂತಹ ಶಕ್ತಿ ಯಾರಿಗೆ ಇದೆ ಎಂಬುದಾಗಿ ಘರ್ಜಿಸಿದ್ದ. ಕೊನೆತನಕವೂ ಕೂಡ ಮಹಾರಾಣಾ ಪ್ರತಾಪ್ ಎನ್ನುವಂತಹ ಮೇವಾಡದ ರಾಜಪೂತ ಶಕ್ತಿಯನ್ನು ಅಕ್ಬರನಿಗೆ ಗೆಲ್ಲಲು ಸಾಧ್ಯವಾಗಲಿಲ್ಲ. ನಂತರದ ದಿನಗಳಲ್ಲಿ ಆತನನ್ನು ಗೆಲ್ಲಲು ಸಾಧ್ಯವಿಲ್ಲ ಎಂಬುದಾಗಿ ತಿಳಿದ ಅಕ್ಬರ್ ಬೇರೆ ಕಡೆ ತನ್ನ ಗಮನವನ್ನು ಹರಿಸುತ್ತಾನೆ ಈ ಸಂದರ್ಭದಲ್ಲಿ ಬೇಟೆಗೆ ಹೋಗಿದ್ದ ಸಂದರ್ಭದಲ್ಲಿ ಹುಲಿಯ ದಾಳಿಯಿಂದಾಗಿ ಮ’ ರಣ ಹೊಂದಿದ್ದಾನೆ. ಅಕ್ಬರನು ಕೂಡ ಮಹಾರಾಣಾ ಪ್ರತಾಪನ ಮರಣದ ಸುದ್ದಿಯನ್ನು ಕೇಳಿ ನನ್ನ ಜೀವಮಾನದಲ್ಲಿ ಆತನನ್ನು ಸೋಲಿಸಲು ಸಾಧ್ಯವಾಗಲಿಲ್ಲ ಎನ್ನುವ ಕೊರಗು ನನ್ನ ಬಳಿ ಖಂಡಿತವಾಗಿ ಇದ್ದೇ ಇರುತ್ತದೆ ಎಂಬುದಾಗಿ ಹೇಳಿಕೊಂಡಿದ್ದನಂತೆ. ಆ ರೀತಿಯಲ್ಲಿ ಶತ್ರುವಿನ ಕೈಯಲ್ಲಿ ಕೂಡ ಹೊಗಳಿಸಿಕೊಂಡಂತಹ ಮಹಾವೀರ ಮಹಾರಾಣಾ ಪ್ರತಾಪ.