Darshan Thoogudeepa: ಚಾಲೆಂಜಿಂಗ್ ಸ್ಟಾರ್ ಡಿ ಬಾಸ್ ರವರ ಒಟ್ಟು ಆಸ್ತಿಯ ಮೌಲ್ಯದ ವಿವರ ಇಲ್ಲಿದೆ ನೋಡಿ.

Darshan Thoogudeepa ಕನ್ನಡ ಚಿತ್ರರಂಗದ ಖ್ಯಾತ ಖಳನಟ ಆಗಿರುವಂತಹ ತೂಗುದೀಪ್ ಶ್ರೀನಿವಾಸ್(Thoogudeepa Srinivas) ರವರ ಮಗನಾಗಿ ಜನಿಸುವ ಹೇಮಂತ್ ಮುಂದಿನ ದಿನಗಳಲ್ಲಿ ದರ್ಶನ್ ಆಗಿ ಬದಲಾಗುತ್ತಾರೆ. ಅದರಲ್ಲೂ ವಿಶೇಷವಾಗಿ ಚಿಕ್ಕವಯಸ್ಸಿನಿಂದಲೇ ನಟನೆಯ ಕುರಿತಂತೆ ಆಸಕ್ತಿ ಹೊಂದಿದ್ದರೂ ಕೂಡ ತಂದೆಯ ಅಕಾಲಿಕ ಮರಣ ಎನ್ನುವುದು ಅವರನ್ನು ಕಷ್ಟಕ್ಕೆ ತಳ್ಳುತ್ತದೆ ಎಂದು ಹೇಳಬಹುದು. ಚಿಕ್ಕವಯಸ್ಸಿನಲ್ಲಿ ಸಾಕಷ್ಟು ಕಷ್ಟವನ್ನು ಪಡುವ ದರ್ಶನ್(Darshan) ನಂತರ ನೀನಾಸಂ ನಲ್ಲಿ ತಮ್ಮ ನಟನೆಯ ಅಧ್ಯಯನವನ್ನು ಮುಗಿಸುತ್ತಾರೆ.

ಎಲ್ಲಕ್ಕಿಂತ ಪ್ರಮುಖವಾಗಿ ಹಿರಿಯ ನಟನ ಮಗನಾಗಿದ್ದರೂ ಕೂಡ ದರ್ಶನ್(Darshan) ಅವರಿಗೆ ಕನ್ನಡ ಚಿತ್ರರಂಗ ಕೈಬೀಸಿ ಕರೆದು ಅವಕಾಶ ನೀಡಲಿಲ್ಲ. ಸಾಕಷ್ಟು ಕಷ್ಟಪಟ್ಟು ಅವಮಾನಗಳನ್ನು ಸಹಿಸಿಕೊಂಡು ತಿರಸ್ಕಾರಗಳನ್ನು ನುಂಗಿಕೊಂಡು ಚಿತ್ರರಂಗಕ್ಕೆ ಮೆಜೆಸ್ಟಿಕ್ ಸಿನಿಮಾದ ಮೂಲಕ ಅವರು ನಾಯಕ ನಟನಾಗಿ ಕಾಲಿಟ್ಟ ಕಷ್ಟ ಅವರಿಗೇ ಗೊತ್ತು. ಹೀಗಿದ್ದರೂ ಕೂಡ ಮೆಜೆಸ್ಟಿಕ್ ಸಿನಿಮಾದ ಮೂಲಕ ನಾಯಕ ನಟನಾಗಿ ತಮ್ಮ ಸಿನಿಮಾ ಪ್ರಯಾಣವನ್ನು ಪ್ರಾರಂಭಿಸಿ ಮತ್ತೆ ನಮ್ಮೆಲ್ಲರ ನೆಚ್ಚಿನ ದಾಸ ಹಿಂದಿರುಗಿ ನೋಡಿದ್ದೇ ಇಲ್ಲ.

Darshan Thoogudeepa

ಕೇವಲ ನಾಯಕ ನಟನಾಗಿ ಮಾತ್ರ ಬಲ್ಲದೆ ನಿರ್ಮಾಪಕ ಹಾಗೂ ವಿತರಕನಾಗಿ ಕೂಡ ಹಲವಾರು ಸಿನಿಮಾಗಳನ್ನು ಬಿಡುಗಡೆ ಮಾಡಿಸುವ ಮೂಲಕ ಹಲವಾರು ಪ್ರತಿಭೆಗಳಿಗೆ ಒಂದೊಳ್ಳೆ ಅವಕಾಶವನ್ನು ನೀಡಿರುವಂತಹ ಹೃದಯವಂತ ನಮ್ಮೆಲ್ಲರ ನೆಚ್ಚಿನ ಡಿ ಬಾಸ್(Dboss). ಇನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಬಳಿ ಯಾವೆಲ್ಲ ರೀತಿಯ ಐಷಾರಾಮಿ ಕಾರುಗಳು ಹಾಗೂ ಬೈಕುಗಳು ಸೇರಿದಂತೆ ಅಪರೂಪದ ಪ್ರಾಣಿಗಳು ಕೂಡ ಇವೆ ಎಂಬುದು ನಿಮಗಲ್ಲರಿಗೂ ತಿಳಿದಿದೆ. ಹಾಗಿದ್ರೆ ಬನ್ನಿ ಇಂದಿನ ಲೇಖನದಲ್ಲಿ ನಾವು ಅವರ ಒಟ್ಟಾರೆ ಆಸ್ತಿಯ ಮೌಲ್ಯ ಎಷ್ಟು ಎಂಬುದನ್ನು ತಿಳಿಯೋಣ.

ಮೂಲಗಳ ಪ್ರಕಾರ ಹಾಗೂ ಗೂಗಲ್ ನಲ್ಲಿ ನೋಡಿದಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಅವರ ಒಟ್ಟಾರೆ ಆಸ್ತಿಯ ಮೌಲ್ಯ 220 ಕೋಟಿಗೂ ಹೆಚ್ಚು ಎಂಬುದಾಗಿ ತಿಳಿದು ಬಂದಿದ್ದು, ಕೇವಲ ಹಣವನ್ನು ಗಳಿಸುವ ವಿಚಾರದಲ್ಲಿ ಮಾತ್ರವಲ್ಲದೆ ಅದನ್ನು ಸಮಾಜಕ್ಕಾಗಿ ವಿನಯೋಗಿಸುವ ವಿಚಾರದಲ್ಲಿ ಕೂಡ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಬೇರೆಲ್ಲ ನಟರಿಗಿಂತ ಸದಾ ಕಾಲ ಮುಂದಿದ್ದಾರೆ ಎಂಬುದನ್ನು ಕೂಡ ನಾವು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಬೇಕಾಗುತ್ತದೆ. ಈ ವಿಚಾರದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *