Meghana Raj ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಒಬ್ಬರಾಗಿರುವ ನಟಿ ಮೇಘನ ರಾಜ್(Meghana Raj) ಅವರ ಸಿನಿಮಾ ಜೀವನದ ಐದು ಟಾಪ್ ಸಿನಿಮಾಗಳು ಯಾವುವು ಎನ್ನುವುದರ ಬಗ್ಗೆ ಇಂದಿನ ಲೇಖನಿಯಲ್ಲಿ ಸಂಪೂರ್ಣ ವಿವರವಾಗಿ ತಿಳಿಯೋಣ ಬನ್ನಿ. ಮೊದಲನೇದಾಗಿ ರಾಜಾಹುಲಿ(Rajahuli). 2013ರಲ್ಲಿ ಬಿಡುಗಡೆಯಾದ ಈ ಸಿನಿಮಾ ತಮಿಳಿನ ಸುಂದರಪಾಂಡಿಯನ್ ಸಿನಿಮಾದ ರಿಮೇಕ್ ಆಗಿತ್ತು. ಮೊದಲ ಬಾರಿಗೆ ಕನ್ನಡ ಸಿನಿಮಾದಲ್ಲಿ ಕಾಣಿಸಿಕೊಂಡ ಮೇಘನಾ ರಾಜ್ ಅವರ ಜೋಡಿಯಾಗಿ ರಾಕಿಂಗ್ ಸ್ಟಾರ್ ಯಶ್(Rocking Star Yash) ಕಾಣಿಸಿಕೊಂಡಿದ್ದರು. ಈ ಸಿನಿಮಾ ಭರ್ಜರಿ ಆರು ಕೋಟಿ ಬಜೆಟ್ ನಲ್ಲಿ ಮೂಡಿ ಬಂದಿದ್ದು ಸೂಪರ್ ಹಿಟ್ ಆಗಿತ್ತು.
ಎರಡನೆಯದಾಗಿ ಬಹುಪರಾಕ್(Bahu Paraak). ಬಹುಪರಾಕ್ ಸಿನಿಮಾದಲ್ಲಿ ಮೇಘನಾ ರಾಜ್ ಎರಡು ಶೇಡ್ ಗಳಲ್ಲಿ ಕಾಣಿಸಿಕೊಂಡಿದ್ದರು. ಶ್ರೀನಗರ ಕಿಟ್ಟಿ ನಾಯಕನಾಗಿ ಕಾಣಿಸಿಕೊಂಡಿದ್ದು ಸಿನಿಮಾ ರಕ್ಷಿತ್ ಶೆಟ್ಟಿ(Rakshit Shetty) ಅವರನ್ನು ಕೂಡ ಅತಿಥಿ ಪಾತ್ರದಲ್ಲಿ ಕಂಡಿತ್ತು. ಸಿನಿಮಾ ಅಸಾಧಾರಣ ಆಗಿಲ್ಲದಿದ್ದರೂ ಕೂಡ ಒಂದು ಬಾರಿ ನೋಡುವಂತಹ ಮನೋರಂಜನೆಯನ್ನು ಹೊಂದಿತ್ತು. ಮೂರನೇದಾಗಿ ಆಟಗಾರ(Aatagara). ಈ ಸಿನಿಮಾದಲ್ಲಿ ಸಾಕಷ್ಟು ಕನ್ನಡ ಚಿತ್ರರಂಗದ ಖ್ಯಾತ ಕಲಾವಿದರು ನಟಿಸಿದ್ದರು ಹಾಗೂ ಮೊದಲ ಬಾರಿಗೆ ಮೇಘನಾ ರಾಜ್ ಚಿರು ಸರ್ಜಾ(Chiru Sarja) ಅವರ ಜೊತೆಗೆ ಕಾಣಿಸಿಕೊಂಡಿದ್ದ ಸಿನಿಮಾ ಆಗಿತ್ತು.
ನಾಲ್ಕನೇದಾಗಿ ಇರುವುದೆಲ್ಲವ ಬಿಟ್ಟು. ಉಗ್ರಂ ಖ್ಯಾತಿಯ ತಿಲಕ್(Tilak Actor) ನಾಯಕ ನಟನಾಗಿ ಕಾಣಿಸಿಕೊಂಡಿದ್ದ ಈ ಸಿನಿಮಾದಲ್ಲಿ ಮೇಘನಾ ರಾಜ್ ಅವರು ನಾಯಕಿಯಾಗಿ ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಸಿನಿಮಾ ಕೂಡ ಕಲಾತ್ಮಕವಾಗಿ ಮೂಡಿಬಂದಿತ್ತು. ಐದನೇದಾಗಿ ಕುರುಕ್ಷೇತ್ರ(Kurukshetra). ಚಾಲೆಂಜಿಂಗ್ ಸ್ಟಾರ್ ದರ್ಶನ್(Darshan) ಅಂಬರೀಶ್ ಸೇರಿದಂತೆ ಕನ್ನಡ ಚಿತ್ರರಂಗದ ಹಲವಾರು ಗಣ್ಯರು ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಮೇಘನ ರಾಜ್ ಅವರು ಭಾನುಮತಿ ಪಾತ್ರದಲ್ಲಿ ಈ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು.
ಒಟ್ಟಾರೆಯಾಗಿ ಮೇಘನಾ ರಾಜ್(Meghana Raj) ತಮ್ಮ ಸಿನಿಮಾ ಕರಿಯರ್ ನಲ್ಲಿ ಈಗಾಗಲೇ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದು ಇನ್ನೂ ಕೂಡ ಇನ್ನಷ್ಟು ಯಶಸ್ವಿ ಸಿನಿಮಾಗಳಲ್ಲಿ ಮೇಘನಾ ರಾಜ್ ಅವರು ಕಾಣಿಸಿಕೊಳ್ಳಲು ಎಂಬುದಾಗಿ ನಾವು ಹಾರೈಸೋಣ. ಮೇಘನಾ ರಾಜ್ ನಟನೆಯ ಯಾವ ಸಿನಿಮಾ ನಿಮ್ಮ ನೆಚ್ಚಿನ ಸಿನಿಮಾ ಎಂಬುದನ್ನು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.