Rashmika Mandanna: ಹೇಳದೆ ಕೇಳದೆ ಜಪಾನೀಸ್ ಆದ ರಶ್ಮಿಕ ಮಂದಣ್ಣ! ಆಶ್ಚರ್ಯದಲ್ಲಿ ಅಭಿಮಾನಿಗಳು.

Rashmika Mandanna ಕೊಡಗಿನ ಕುವರಿಯಾಗಿರುವ ರಶ್ಮಿಕ ಮಂದಣ್ಣ(Rashmika Mandanna) ಇಂದು ಇಡೀ ಭಾರತೀಯ ಚಿತ್ರರಂಗದಲ್ಲಿ ಅತ್ಯಂತ ಹೆಚ್ಚು ಸಂಭಾವನೆ ಪಡೆಯುವ ನಾಯಕ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾವುದೇ ಸಿನಿಮಾ ಹಿನ್ನೆಲೆ ಇಲ್ಲದಿದ್ದರೂ ಕೂಡ ಚಿತ್ರರಂಗದಲ್ಲಿ ಅವರು ಗಳಿಸಿರುವಂತಹ ಯಶಸ್ಸು ನಿಜಕ್ಕೂ ಕೂಡ ಸಾಕಷ್ಟು ಜನ ಸಿನಿಮಾ ಹಿನ್ನೆಲೆಯಿಂದ ಬಂದ ಕಲಾವಿದರಿಗೂ ಕೂಡ ಕನಸಿನ ಮಾತಾಗಿದೆ ಎಂದು ಹೇಳಬಹುದಾಗಿದೆ. ಈ ವಿಚಾರದಲ್ಲಿ ನಾವು ಅವರಿಗೆ ಮೆಚ್ಚುಗೆಯನ್ನು ಸಲ್ಲಿಸಬೇಕು.

ಕೇವಲ ಕನ್ನಡದಲ್ಲಿ ಮಾತ್ರವಲ್ಲದೆ ತೆಲುಗು ತಮಿಳು ಹಾಗೂ ಹಿಂದಿ ಭಾಷೆಯಲ್ಲಿ ಕೂಡ ಈಗಾಗಲೇ ಹಲವಾರು ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವಂತಹ ರಶ್ಮಿಕ ಮಂದಣ್ಣ ಫ್ಯಾನ್ ಇಂಡಿಯಾ ಪರ್ಫೆಕ್ಟ್ ನಾಯಕ ನಟಿ ಎಂದು ಹೇಳಬಹುದಾಗಿದೆ. ಅಮಿತಾಬ್ ಬಚ್ಚನ್(Amitabh Bacchan) ಅವರಂತಹ ಲೆಜೆಂಡರಿ ನಟರ ಜೊತೆಗೂ ಕೂಡ ಎಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುವಂತಹ ಅವಕಾಶವನ್ನು ಪಡೆದಿರುವುದು ರಶ್ಮಿಕ ಮಂದಣ್ಣ ಅವರ ಅದೃಷ್ಟ ಎಂದು ಹೇಳಬಹುದಾಗಿದೆ.

ಇನ್ನು ಆಗಾಗ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ರಶ್ಮಿಕ ಮಂದಣ್ಣ(Rashmika Mandanna) ಅವರು ಸುದ್ದಿ ಆಗುತ್ತಲೇ ಇರುತ್ತಾರೆ. ಕೆಲವೊಮ್ಮೆ ಅವರು ನೀಡುವಂತಹ ಹೇಳಿಕೆಗಳಿಂದ ಅವರು ಸುದ್ದಿ ಆದರೆ ಇನ್ನು ಕೆಲವೊಮ್ಮೆ ಚಿತ್ರ ವಿಚಿತ್ರವಾದ ಬಟ್ಟೆಯನ್ನು ಹಾಕಿಕೊಳ್ಳುವ ಮೂಲಕ ಕೂಡ ರಶ್ಮಿಕ ಮಂದಣ್ಣ ನೆಟ್ಟಿಗರ ಟೀಕೆಗೆ ಒಳಗಾಗುತ್ತಾರೆ. ಸದ್ಯಕ್ಕೆ ಈಗ ಎಲ್ಲರೂ ಕೂಡ ಅವರನ್ನು ಜಪಾನೀಸ್ ಜಪಾನೀಸ್ ಎಂಬುದಾಗಿ ಕರೆಯುತ್ತಿದ್ದಾರೆ ಇದರ ಹಿಂದಿನ ನಿಜವಾದ ಕಾರಣ ಏನೆಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಇತ್ತೀಚಿಗಷ್ಟೇ ಲೇಟೆಸ್ಟ್ ಆಗಿ ರಶ್ಮಿಕ(Rashmika) ಮಂದಣ್ಣ ಜಪಾನ್ ಮೂಲದ ಕಂಪನಿ ಆಗಿರುವಂತಹ onitsuketiger ಕಂಪನಿಯ ಬಟ್ಟೆಗಳನ್ನು ಪ್ರಮೋಟ್ ಮಾಡುವಂತಹ ಕೆಲಸವನ್ನು ಫೋಟೋ ಶೂಟ್ ಮೂಲಕ ಮಾಡಿದ್ದರು. ಇದರಲ್ಲಿ ಅವರು ನೋಡೋದಕ್ಕೆ ಥೇಟ್ ಜಪಾನೀಸ್ ರೀತಿಯಲ್ಲೇ ಕಾಣಿಸುತ್ತಿದ್ದರು ಹೀಗಾಗಿ ಎಲ್ಲರೂ ಕೂಡ ಅವರನ್ನು ಜಪಾನೀಸ್ ಎಂಬುದಾಗಿ ಕರೆಯುತ್ತಿದ್ದರು‌. ರಶ್ಮಿಕ ಮಂದಣ್ಣ ಅವರ ಈ ಫೋಟೋಗಳನ್ನು ನೋಡಿದ ನಂತರ ನಿಮಗೂ ಕೂಡ ಹಾಗೆ ಅನ್ನಿಸಿತಾ ಎಂಬುದನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.

Leave a Reply

Your email address will not be published. Required fields are marked *