Asaduddin Owaisi ಸದ್ಯಕ್ಕೆ ಇದೇ ಮೇ ಹತ್ತರಂದು ಅಂದರೆ ಇನ್ನು ಕೆಲವೇ ದಿನಗಳಲ್ಲಿ ರಾಜ್ಯ ವಿಧಾನ ಸಭೆಯ ಚುನಾವಣೆಯಲ್ಲಿ(Karnataka Assembly Election) ಯಾರು ಗೆದ್ದು ರಾಜ್ಯದ ಅಧಿಕಾರವನ್ನು ಇನ್ನೂ ಐದು ವರ್ಷಗಳ ಕಾಲ ಹಿಡಿಯುತ್ತಾರೆ ಎನ್ನುವಂತಹ ಭವಿಷ್ಯ ನಿರ್ಧಾರವಾಗಲಿದೆ. ಇದರ ನಡುವೆ ಸಾಕಷ್ಟು ಆರೋಪ ಪ್ರತ್ಯಾರೋಪಗಳು ಕೂಡ ಕಂಡುಬರುತ್ತವೆ.
ಅದರಲ್ಲೂ ವಿಶೇಷವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕಾಂಗ್ರೆಸ್ ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಬಜರಂಗದಳವನ್ನು(Bajarang Dal) ನಿಷೇಧಿಸುವಂತಹ ಬೇಡಿಕೆಯನ್ನು ಈಡೇರಿಸಲಿದೆ ಎಂಬುದಾಗಿ ಸುದ್ದಿಯಾಗಿತ್ತು. ಎಲ್ಲರೂ ಕೂಡ ಕಾಂಗ್ರೆಸ್ ಪಕ್ಷದ ಈ ನೀತಿಯನ್ನು ವಿರೋಧಿಸಿದ್ದರು ಹಾಗೂ ರಾಜ್ಯ ವ್ಯಾಪಿಯಾಗಿ ಎಲ್ಲರೂ ಕೂಡ ಕಾಂಗ್ರೆಸ್ ಪಕ್ಷದ ಈ ಪ್ರಣಾಳಿಕೆಯ ಹೇಳಿಕೆಯನ್ನು ಪಕ್ಷಭೇದವನ್ನು ಮರೆತು ಖಂಡಿಸಿದ್ದರು. ನ್ಯಾಷನಲ್ ನ್ಯೂಸ್ ಆಗಿ ಕೂಡ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಗೆ ಒಳಗಾಗಿತ್ತು.
ಈಗ ಇದಕ್ಕೆ ಮು’ ಸ್ಲಿಂ ವಿವಾದಿತ ನಾಯಕ ಆಗಿರುವ AIMIM ನ ಮುಖ್ಯಸ್ಥ ಆಗಿರುವಂತಹ ಅಸಾದುದ್ದೀನ್ ಓವೈಸಿ(Asaduddin Owaisi) ಕೂಡ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಪಕ್ಷವನ್ನು ಈ ವಿಚಾರದಲ್ಲಿ ಟೀಕೆ ಮಾಡಿದ್ದಾರೆ ನಿಜ ಹಾಗೆಂದ ಮಾತ್ರಕ್ಕೆ ಹಿಂದೂ ಸಂಘಟನೆಗಳಿಗೆ ಬೆಂಬಲ ನೀಡಿದ್ದಾರೆ ಎಂದಲ್ಲ. ಹಾಗಿದ್ದರೆ ಬನ್ನಿ ನಿಜಕ್ಕೂ ಒವೈಸಿ ಈ ವಿಚಾರದ ಬಗ್ಗೆ ಯಾವ ಮಾತುಗಳನ್ನಾಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ.
ಓವೈಸಿ(Owaisi) ಈ ಕುರಿತಂತೆ ಮಾತನಾಡುತ್ತಾ ಈ ಹಿಂದೆ ಬಾಬರಿ ಮಸೀದಿ ಬೀಳಿಸಿದಾಗಲೂ ಕೂಡ ಕಾಂಗ್ರೆಸ್ ಪಕ್ಷ ಹೊಸ ಮಸ್ಜಿದ್ ಅನ್ನು ನಿರ್ಮಿಸಿ ಕೊಡುತ್ತೇವೆ ಎಂಬುದಾಗಿ ಅಭಯವನ್ನು ನೀಡಿದ್ದರು ಆದರೆ ಆ ಮಾತನ್ನು ಕೂಡ ಅವರು ನೆರವೇರಿಸಲು ಸಾಧ್ಯವಾಗಲಿಲ್ಲ ಹೀಗಾಗಿ ಕಾಂಗ್ರೆಸ್ ಹೇಳುವಂತಹ ಪ್ರತಿಯೊಂದು ಭರವಸೆಯನ್ನು ಕೂಡ ನೀವು ನಂಬಿಕೊಳ್ಳುವುದು ನಿಮ್ಮ ಮೂರ್ಖತನ ಎಂಬುದಾಗಿ ಕಾಂಗ್ರೆಸ್ ವಿರುದ್ಧ ತಮ್ಮ ಟೀಕಾ ಪ್ರಹಾರವನ್ನು ಮಾಡಿದ್ದಾರೆ. ಓವೈಸಿ ಆಡಿರುವ ಮಾತುಗಳ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.