Virat Kohli ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿ ಭಾರತದಿಂದ ಅತ್ಯಂತ ಹೆಚ್ಚು ಜನಪ್ರಿಯವಾಗಿರುವಂತಹ ಕ್ರೀಡಾಪಟು ಯಾರಾದರೂ ಇದ್ದಾರೆ ಎಂದರೆ ನಿಸ್ಸಂಕೋಚವಾಗಿ ಅದು ವಿರಾಟ್ ಕೊಹ್ಲಿ(Virat Kohli) ಎಂದು ಹೇಳಬಹುದಾಗಿದೆ. ಸದ್ಯದ ಮಟ್ಟಿಗೆ ಇಡೀ ವಿಶ್ವದಲ್ಲಿಯೇ ಇನ್ಸ್ಟಾಗ್ರಾಮ್ ವಿಚಾರಕ್ಕೆ ಬಂದರೆ ಮೂರನೇ ಅತ್ಯಂತ ಹೆಚ್ಚು ಫಾಲ್ಲೋವರ್ಸ್ ಹೊಂದಿರುವಂತಹ ಕ್ರೀಡಾಪಟು ವಿರಾಟ್ ಕೊಹ್ಲಿ ಆಗಿದ್ದಾರೆ.
ಇನ್ನು ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸದ್ಯಕ್ಕೆ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಅನುಷ್ಕಾ ಶರ್ಮ(Anushka Sharma) ಅವರನ್ನು ಪ್ರೀತಿಸಿ ಮದುವೆಯಾಗಿ ಈಗಾಗಲೇ ವಮಿಕ(Vamika) ಎನ್ನುವ ಹೆಣ್ಣು ಮಗುವಿಗೆ ತಂದೆ ಕೂಡ ಆಗಿದ್ದಾರೆ ನಮ್ಮೆಲ್ಲರ ನೆಚ್ಚಿನ ವಿರಾಟ್ ಕೊಹ್ಲಿ. ಯಶಸ್ವಿ ಕ್ರೀಡಾಪಟುವಾಗಿ ಹಾಗೂ ಪರ್ಫೆಕ್ಟ್ ಫ್ಯಾಮಿಲಿ ಮ್ಯಾನ್ ಕೂಡ ಆಗಿ ಅತ್ಯಂತ ಸಂತೋಷದ ಜೀವನ ನಡೆಸುತ್ತಿರುವ ವಿರಾಟ್ ಕೊಹ್ಲಿ ಅವರ ಹಿಂದಿನ ಜೀವನವನ್ನು ನೆನೆಸಿಕೊಂಡರೆ ಖಂಡಿತವಾಗಿ ನೀವು ಕೂಡ ಆಶ್ರಯ ಪಡ್ತೀರಾ. ಹೌದು ನಾವು ಮಾತನಾಡಲು ಹೊರಟಿರುವುದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ ಅವರ ಬ್ರೇಕ್ ಅಪ್ ವಿಚಾರದ ಕುರಿತಂತೆ.
2013ರಲ್ಲಿ ಮೊದಲ ಬಾರಿಗೆ ಇಬ್ಬರೂ ಕೂಡ ಒಂದು ಶಾಂಪೂ ಜಾಹೀರಾತಿನ ಚಿತ್ರೀಕರಣದ ಸೆಟ್ನಲ್ಲಿ ಭೇಟಿಯಾಗುತ್ತಾರೆ. ಆ ಸಂದರ್ಭದಲ್ಲಿ ವಿರಾಟ್ ಕೊಹ್ಲಿ(Virat Kohli) ನರ್ವಸ್ ಆಗಿದ್ದನ್ನು ನೋಡಿ ನಟಿ ಅನುಷ್ಕಾ ಶರ್ಮ ಜೋಕ್ಸ್ ಗಳನ್ನು ಹೇಳುತ್ತಾ ಅಲ್ಲಿ ಎಲ್ಲರೂ ಕೂಡ ನಗುವಂತೆ ಮಾಡುತ್ತಾರೆ. ಇಲ್ಲಿಂದಲೇ ಇವರಿಬ್ಬರ ಸ್ನೇಹ ಪ್ರಾರಂಭವಾಗಿ ಪರಸ್ಪರ ಭೇಟಿಯಾಗುವುದು ಕೂಡ ನಡೆಯುತ್ತಲೇ ಹೋಗುತ್ತದೆ. ಆದರೆ 2016ರ ವರ್ಷ ಎನ್ನುವುದು ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮ(Anushka Sharma) ಇಬ್ಬರ ಪ್ರೀತಿಯ ನಡುವೆ ಕೂಡ ಸಾಕಷ್ಟು ಬಿರುಕುಗಳು ಮೂಡುವಂತೆ ಮಾಡುತ್ತದೆ.
ಪರಸ್ಪರ ಒಬ್ಬರನ್ನೊಬ್ಬರು instagram ನಲ್ಲಿ ಅನ್ ಫಾಲೋ ಮಾಡುತ್ತಾರೆ. ನಂತರ ಅದೇ ವರ್ಷ ಯುವರಾಜ್ ಸಿಂಗ್(Yuvaraj Singh) ಅವರ ಮದುವೆಗೂ ಇಬ್ಬರು ಜೊತೆಯಾಗಿ ಕಾಣಿಸಿಕೊಂಡು ಅಲ್ಲಿ ತಮ್ಮ ಮುನಿಸನ್ನು ಮರೆಯುತ್ತಾರೆ. ಅಲ್ಲಿಂದಲೇ ಇವರಿಬ್ಬರ ಮದುವೆ ವಿಚಾರ ಕೂಡ ಹರಡಲು ಪ್ರಾರಂಭವಾಗಿ ಡಿಸೆಂಬರ್ 11 2017 ಅದ್ದೂರಿಯಾಗಿ ಇಟಲಿ ದೇಶದಲ್ಲಿ ಮದುವೆಯಾಗುವ ಮೂಲಕ ದಾಂಪತ್ಯ ಜೀವನಕ್ಕೆ ಕಾಲಿಡುತ್ತಾರೆ. ಇಂದು ಇಬ್ಬರು ಕೂಡ ಪತಿ-ಪತ್ನಿಯರಾಗಿದ್ದಾರೆ ಎಂದರೆ ಅಂದು ಅವರಿಬ್ಬರೂ ತಮ್ಮ ರಿಲೇಷನ್ಶಿಪ್ ನಲ್ಲಿ ತೋರಿಸಿದ ತಾಳ್ಮೆಯೇ ಕಾರಣ ಎಂದು ಹೇಳಬಹುದಾಗಿದೆ.