Virat Kohli Fine: ಗೌತಮ್ ಗಂಭೀರ್ ಜೊತೆಗೆ ಜಗಳವಾಡಿದ್ದಕ್ಕೆ 1 ಕೋಟಿ ಫೈನ್ ಬಿದ್ದರೂ, ವಿರಾಟ್ ಕೊಹ್ಲಿ ಕಟ್ಟೋದಿಲ್ವಂತೆ!

Virat Kohli Fine ಇತ್ತೀಚಿಗಷ್ಟೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್(Gautam Gambhir) ಅವರ ನಡುವೆ ಮಾತಿನ ಚಕಮಕಿ ಲಕ್ನೋದ ಎಕಾನಾ ಸ್ಟೇಡಿಯಂನಲ್ಲಿ ಜೋರಾಗಿ ನಡೆದಿತ್ತು. ಪ್ರತಿಯೊಬ್ಬರೂ ಕೂಡ ಈ ವಿಚಾರದ ಕುರಿತಂತೆ ಇಂದಿಗೂ ಕೂಡ ಚರ್ಚೆ ಮಾಡುತ್ತಿದ್ದಾರೆ. ಇನ್ನು ಈ ಸಂದರ್ಭದಲ್ಲಿ ಈ ಮಾತಿನ ಚಕಮಕಿಯಲ್ಲಿ ಒಳಗೊಂಡಂತಹ ಪ್ರತಿಯೊಬ್ಬರಿಗೂ ಕೂಡ ಐಪಿಎಲ್ ದಂಡವನ್ನು ವಿಧಿಸಿತ್ತು.

ಅದರಲ್ಲೂ ವಿಶೇಷವಾಗಿ ವಿರಾಟ್ ಕೊಹ್ಲಿ(Virat Kohli) ಅವರಿಗೆ ಭರ್ಜರಿ 100 ಪ್ರತಿಶತ ಮ್ಯಾಚಿನ ಫೀಸ್ ಅಂದರೆ, 1.07 ಕೋಟಿ ರೂಪಾಯಿ ತಂಡವನ್ನು ಬಿಸಿಸಿಐ ವಿಧಿಸಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರವೂ ಕೂಡ ಸಾಕಷ್ಟು ದೊಡ್ಡ ಮಟ್ಟದ ಚರ್ಚೆ ಹಾಗೂ ಪರ ವಿರೋಧ ಅಭಿಪ್ರಾಯಗಳಿಗೂ ಕೂಡ ಕಾರಣವಾಗಿತ್ತು. ಆದರೆ ಇದರ ನಡುವೆ ಮತ್ತೊಂದು ಆಶ್ಚರ್ಯಕರ ಎನಿಸುವಂತಹ ವಿಚಾರ ಕೂಡ ಹೊರಬಂದಿದೆ.

Virat Kohli Vs Gautam Gambhir

ಹೌದು ನಿಮಗೆಲ್ಲರಿಗೂ ವಿರಾಟ್ ಕೊಹ್ಲಿ ಅವರ ಮೇಲೆ ಒಂದು ಕೋಟಿ ಅಧಿಕ ಫೈನ್ ಬಿದ್ದಿರುವುದು ಗೊತ್ತು ಆದರೆ ಅದನ್ನು ಇದುವರೆಗೆ ಅವರು ಕಟ್ಟಿಲ್ಲ ಎನ್ನುವುದು ಮಾತ್ರ ತಿಳಿದಿಲ್ಲ. ಇದುವರೆಗೆ ಕಟ್ಟಿಲ್ಲ ಎನ್ನುವುದು ಅಷ್ಟೇ ಅಲ್ಲದೆ ಅವರು ಇನ್ನು ಮುಂದೆ ಕಟ್ಟೋದು ಇಲ್ಲ ಎನ್ನುವುದನ್ನು ಕೂಡ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು ಅದಕ್ಕೆ ಒಂದು ಕಾರಣ ಕೂಡ ಇದೆ. ಹೌದು ಒಬ್ಬ ಆಟಗಾರನಾಗಿ ಐಪಿಎಲ್(IPL) ಫೈನ್ ಅನ್ನು ವಿರಾಟ್ ಕೊಹ್ಲಿ ಅವರು ಕಟ್ಟುವುದಿಲ್ಲ.

ಹೌದು, ಇದರ ಕುರಿತಂತೆ ಅಧಿಕೃತವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore) ತಂಡದ ಒಫಿಷಿಯಲ್ ಮೂಲಗಳೇ ತಿಳಿಸಿರುವಂತೆ ಆಟಗಾರರು ಯಾವುದೇ ಫೈನ್ ಅನ್ನು ಕಟ್ಟುವುದಿಲ್ಲ. ಇಂತಹ ಫೈನ್‌ಗಳನ್ನು ಟೀಮ್ ಮ್ಯಾನೇಜ್ಮೆಂಟ್ ಐಪಿಎಲ್ ಟೂರ್ನಮೆಂಟ್ ಮುಗಿದ ನಂತರ ಬಿಸಿಸಿಐಗೆ ಕೊನೆಯಲ್ಲಿ ಕಟ್ಟಲಿವೆ ಎಂಬುದಾಗಿ ತಿಳಿದು ಬಂದಿದೆ. ಈ ವಿಚಾರ ತಿಳಿದ ಮೇಲೆ ಪ್ರತಿಯೊಬ್ಬರೂ ಕೂಡ ಕೊಹ್ಲಿ(Kohli) ಅವರ ಒಂದು ಕೋಟಿ ರೂಪಾಯಿ ಉಳೀತು ಎಂಬುದಾಗಿ ನಿಟ್ಟುಸಿರು ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *