iPhone Store: ಚೀನಾ ಬಿಟ್ಟು ಭಾರತದಲ್ಲಿ iphone ಸ್ಟೋರ್ ಅನ್ನು ಓಪನ್ ಮಾಡಿದ್ಯಾಕೆ ಗೊತ್ತಾ?

iPhone Store ಐಫೋನ್ ಅನ್ನು ಪ್ರತಿಷ್ಠೆಯ ವಸ್ತುವನ್ನಾಗಿ ಪ್ರತಿಯೊಬ್ಬರೂ ಕೂಡ ನೋಡುತ್ತಾರೆ. ಒಬ್ಬರ ಬಳಿ ಹಣ ಇದೆ ಎಂದರೆ ಖಂಡಿತವಾಗಿ ಐಫೋನ್ ಇರಲೇಬೇಕು ಎಂಬುದು ಕೂಡ ಅಲಿಖಿತ ನಿಯಮವಾಗಿದೆ. ಐಫೋನ್(iPhone) ಸಂಸ್ಥೆಯ ಭಾರತದ ಪಯಣವನ್ನು ಗಮನಿಸೋಣ ಬನ್ನಿ. ಮೊದಲಿಗೆ 2008ರಲ್ಲಿ ಐಫೋನ್ 3G ಭಾರತಕ್ಕೆ ಪಾದಾರ್ಪಣೆ ಮಾಡುತ್ತದೆ.

ಮೊದಲ ಆವೃತ್ತಿಯಲ್ಲಿ ಭರ್ಜರಿ 1.8 ಬಿಲಿಯನ್ ಮೌಲ್ಯದ ಐಫೋನ್ ಯೂನಿಟ್ ಗಳನ್ನು ಮಾರಾಟ ಮಾಡುತ್ತದೆ. ನಂತರ 2016ರಲ್ಲಿ ಭಾರತದಲ್ಲಿ ಸ್ಟೋರ್ ಅನ್ನು ಸ್ಥಾಪಿಸಲು ಭಾರತದ ಸರ್ಕಾರದ ಬಳಿ ಐಫೋನ್ ಸಂಸ್ಥೆ ಅಪ್ಲಿಕೇಶನ್ ಅಪ್ಲೈ ಮಾಡುತ್ತದೆ. ಆದರೆ ಭಾರತ ಸರ್ಕಾರ(Indian Govt) ಸಂಪೂರ್ಣವಾಗಿ ತಿರಸ್ಕರಿಸುತ್ತದೆ ಯಾಕೆಂದರೆ ಆ ಸಂದರ್ಭದಲ್ಲಿ ಐಫೋನ್ ಸಂಸ್ಥೆ ಚೀನಾದಲ್ಲಿ ಬಿಡಿ ಭಾಗಗಳನ್ನು ಅಸ್ಸೆಂಬಲ್ ಮಾಡಿ ಭಾರತದಲ್ಲಿ ಮಾರಾಟ ಮಾಡುತ್ತಿತ್ತು. ಆಗ ಭಾರತ ಸರ್ಕಾರ ಐಫೋನ್ ಸಂಸ್ಥೆಗೆ ಒಂದು ಶರತ್ತನ್ನು ವಿಧಿಸುತ್ತದೆ.

Tim Cook With Modi

ಅದೇನೆಂದರೆ 30% ಕ್ಕೂ ಅಧಿಕ ಬಿಡಿ ಭಾಗಗಳನ್ನು ಭಾರತದಲ್ಲಿ ತಯಾರಿಸುವ ಮೂಲಕ ಇಲ್ಲಿನ ಜನರಿಗೆ ಉದ್ಯೋಗಾವಕಾಶ ನೀಡಿದರೆ ಮಾತ್ರ ಸ್ಟೋರ್ ಅನ್ನು ಭಾರತದಲ್ಲಿ ತೆರೆಯಲು ಅವಕಾಶ ಮಾಡಿಕೊಡಲಾಗುತ್ತದೆ ಎಂಬುದು. ಅದಕ್ಕೆ ಒಪ್ಪಿದಂತಹ ಐಫೋನ್(iPhone) ಸಂಸ್ಥೆ ಭಾರತದಲ್ಲಿ ಮೊದಲ ಬಾರಿಗೆ 2017ರಲ್ಲಿ ಬೆಂಗಳೂರಿನಲ್ಲಿ ಮೊದಲ ಆಪಲ್ ಸ್ಟೋರ್ ಅನ್ನು ತೆರೆಯುತ್ತದೆ. ಇದಕ್ಕೆ ಮುಖ್ಯ ಕಾರಣ ಎಂದರೆ ಐಫೋನ್ ಸಂಸ್ಥೆಗೆ ಅತ್ಯಧಿಕ ಗ್ರಾಹಕರು ಭಾರತದಿಂದಲೇ ಇದ್ದು ಇಲ್ಲಿ ಸಾಕಷ್ಟು ಲಾಭದಾಯಕ ವ್ಯವಹಾರವನ್ನು ಮಾಡುವ ಅವಕಾಶಗಳಿದ್ದು ಅದನ್ನು ಕೈಯಿಂದ ಬಿಡಲು ಐಫೋನ್ ಸಂಸ್ಥೆ ತಯಾರಿರಲಿಲ್ಲ.

ಸದ್ಯಕ್ಕೆ ಈಗ ಭಾರತದಲ್ಲಿ ಮೂರು ಕಡೆಗಳಲ್ಲಿ ಅಂದರೆ ಬೆಂಗಳೂರು ದೆಹಲಿ ಹಾಗೂ ಮುಂಬೈನಲ್ಲಿ ಆಪಲ್ ಸ್ಟೋರ್(Apple Store) ನಿರ್ಮಿತವಾಗಿದೆ. ಅಧಿಕೃತ ಮೂಲಗಳ ಪ್ರಕಾರ ಭಾರತದಲ್ಲಿ ಆಪಲ್ ಸಂಸ್ಥೆ ತನ್ನ ಸ್ಟೋರ್ ಅನ್ನು ಓಪನ್ ಮಾಡಿರುವ ಬೆನ್ನಲ್ಲೇ ಒಂದು ಲಕ್ಷಕ್ಕೂ ಅಧಿಕ ಉದ್ಯೋಗಾವಕಾಶಗಳು ಭಾರತದಲ್ಲಿ ನಿರ್ಮಿತವಾಗಿದೆ. ಈ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಬಹುದಾಗಿದೆ.

Leave a Reply

Your email address will not be published. Required fields are marked *