Philosophy ಪ್ರತಿಯೊಬ್ಬರೂ ಕೂಡ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎನ್ನುವ ಹಂಬಲವನ್ನು ಹೊಂದಿರುತ್ತಾರೆ ಇಲ್ಲವೇ ಪರಿಸ್ಥಿತಿ ಅವರನ್ನು ಏನನ್ನಾದರೂ ಸಾಮಾನ್ಯಕ್ಕಿಂತ ಹೆಚ್ಚಾಗಿ ವಿಶೇಷವಾಗಿ ಇರುವಂತಹ ಕೆಲಸವನ್ನು ಮಾಡು ಎಂಬುದಾಗಿ ಪ್ರೇರೇಪಿಸುತ್ತದೆ. ಹೀಗಾಗಿ ಜೀವನದಲ್ಲಿ ಏನನ್ನಾದರೂ ವಿಶೇಷವನ್ನು ಸಾಧಿಸಲು ಕೆಲವೊಂದು ಶಿಸ್ತು ಬದ್ಧ(Discipline) ಕ್ರಮಗಳನ್ನು ನೀವು ಅನುಸರಿಸಬೇಕಾದಂತಹ ಅವಶ್ಯಕತೆ ಇರುತ್ತದೆ ಹಾಗಿದ್ದರೆ ಬನ್ನಿ ಇಂದಿನ ಲೇಖನಿಯಲ್ಲಿ ನಾವು ಅಂತಹ ಕೆಲವೊಂದು ಕ್ರಮಗಳು ಯಾವುವು ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿದುಕೊಳ್ಳೋಣ.
ಮೊದಲನೇದಾಗಿ ನಿಮ್ಮ ಸುತ್ತಮುತ್ತಲು ನಡೆಯುತ್ತಿರುವಂತಹ ಘಟನೆಗಳಿಂದ ನೀವು ವಿಚಲಿತರಾಗುವುದಕ್ಕೆ ಹೋಗಬೇಡಿ. ಪ್ರತಿಯೊಂದು ವಿಚಾರಗಳಲ್ಲಿ ಕೂಡ ಸಿಗುವಂತಹ ಸಕಾರಾತ್ಮಕ(Positivity) ವಿಚಾರಗಳನ್ನೇ ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಿ. ಆಗಿದ್ದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ನಿಮ್ಮ ಜೀವನದಲ್ಲಿ ಎಷ್ಟೇ ಕಷ್ಟಗಳು ಬಂದರೂ ಕೂಡ ಅದರಲ್ಲಿಯೂ ಗೆಲ್ಲುವ ಮಾರ್ಗ ಹೇಗೆ ಎಂಬುದನ್ನು ನೀವು ಹುಡುಕಿಕೊಳ್ಳಲು ಸಾಧ್ಯವಿದೆ.
ಎರಡನೇದಾಗಿ ಯಾವುದೇ ಕೆಲಸ ಪ್ರಾರಂಭ ಮಾಡುವುದಕ್ಕೂ ಮುನ್ನ ಅದರ ಸಾಧಕ ಬಾದಕಗಳನ್ನು ಲೆಕ್ಕಾಚಾರ ಹಾಕುವುದು ಒಳ್ಳೆಯದು ಯಾಕೆಂದರೆ ಕೇವಲ ಗೆದ್ದರಷ್ಟೇ ಅದನ್ನು ಆನಂದಿಸುವುದು ಮಾತ್ರವಲ್ಲದೆ ಸೋತರು ಕೂಡ ಅದರಿಂದ ಹೇಗೆ ಹೊರಗೆ ಬರುವುದು ಹಾಗೂ ಇನ್ನಷ್ಟು ಒಳ್ಳೆಯ ರೀತಿಯಲ್ಲಿ ಅದನ್ನು ಹೇಗೆ ಮಾಡಬಹುದು ಎಂಬ ಯೋಚನೆಗಳು ಕೂಡ ನಿಮ್ಮ ಬಳಿ ಇರಬೇಕು. ಮುಂದಾಲೋಚನೆ(Forethought) ಇದ್ದಲ್ಲಿ ಮಾತ್ರ ಯಾವುದೇ ಪರಿಸ್ಥಿತಿಯಿಂದಲೂ ಕೂಡ ನೀವು ಅದನ್ನು ಪ್ರಾರಂಭಿಸಿದಾಗ ಎಂತಹ ಪರಿಸ್ಥಿತಿ ಬಂದರೂ ಎದುರಿಸಬಹುದು.
ಮೂರನೇದಾಗಿ ಜೀವನದಲ್ಲಿ ರಿಸ್ಕ್(Risk) ತೆಗೆದುಕೊಳ್ಳಲೇಬೇಕು. ಬೇರೆಯವರ ಬಳಿ ಕೆಲಸ ಮಾಡಿ ಆದರೆ ನೀವು ನಿಮ್ಮ ಸ್ವಂತ ಗುರುತನ್ನು ಸ್ಥಾಪಿಸುವಂತಹ ನಿಮ್ಮ ಸ್ವಂತದ್ದೇ ಆದಂತಹ ಕೆಲಸವನ್ನು ಕೂಡ ಪ್ರಾರಂಭಿಸಬೇಕು. ಹಾಗಿದ್ದಲ್ಲಿ ಮಾತ್ರ ನೀವು ನಿಮ್ಮ ಸ್ವಾವಲಂಬಿ ಜೀವನವನ್ನು ಮಾಡಲು ಸಾಧ್ಯ. ಸ್ವಾವಲಂಬಿ ಜೀವನ ನಿಮಗೆ ಜೀವನದಲ್ಲಿ ಇನ್ನಷ್ಟು ದೃಢ ವಿಶ್ವಾಸವನ್ನು(Confidence) ನೀಡುವ ಸಾಧ್ಯತೆ ಹೆಚ್ಚಾಗಿರುತ್ತದೆ ಹೀಗಾಗಿ ಈ ಕುರಿತಂತೆ ಹೆಚ್ಚಿನ ಗಮನವನ್ನು ವಹಿಸಿ.