Pratap Simha: ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರಕ್ಕಾಗಿ ಬಂದ ಶಿವಣ್ಣನಿಗೆ ಪ್ರತಾಪ್ ಸಿಂಹ ಹೀಗಾ ಹೇಳೋದು?

Pratap Simha ಈಗ ರಾಜ್ಯದಾದ್ಯಂತ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ರಾಜ್ಯ ವಿಧಾನಸಭೆ ಚುನಾವಣೆಯ(Assembly Election) ಕಾರ್ಯತಂತ್ರಗಳು ಹಾಗೂ ತಯಾರಿಗಳು ಅದ್ದೂರಿಯಾಗಿ ನಡೆಯುತ್ತಿದೆ. ರಾಜಕೀಯ ಅಭ್ಯರ್ಥಿಗಳು ಪರಸ್ಪರ ಆರೋಪ ಪ್ರತ್ಯಾರೋಪಗಳನ್ನು ಕೂಡ ಮಾಡುತ್ತಿರುವುದು ನಿಮಗೆಲ್ಲರಿಗೂ ಸುದ್ದಿ ಮಾಧ್ಯಮಗಳ ಮೂಲಕ ತಿಳಿದು ಬರುತ್ತದೆ. ಅವುಗಳಲ್ಲಿ ಹೆಚ್ಚಾಗಿ ಇಂತಹ ಘಟನೆಗಳು ಕಂಡುಬರುತ್ತಿವೆ.

ಅದರಲ್ಲೂ ವಿಶೇಷವಾಗಿ ಲೋಕಸಭಾ ಸದಸ್ಯರಾಗಿರುವಂತಹ ಪ್ರತಾಪ್ ಸಿಂಹ(Pratap Simha) ಅವರು ಈ ಬಾರಿಯ ರಾಜಕೀಯದಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದಾರೆ. ನಿಮಗೆಲ್ಲರಿಗೂ ತಿಳಿದಿರಬಹುದು ಕರುನಾಡ ಚಕ್ರವರ್ತಿ ಶಿವಣ್ಣ(Shivanna) ಅವರ ಪತ್ನಿ ಆಗಿರುವ ಗೀತಕ್ಕ ಇತ್ತೀಚಿಗಷ್ಟೇ ತಮ್ಮ ಸಹೋದರನ ಸಲುವಾಗಿ ಕಾಂಗ್ರೆಸ್ ಪಕ್ಷವನ್ನು ಸೇರುತ್ತಾರೆ. ಇದು ಕೂಡ ಸಾಕಷ್ಟು ಜನರ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ಹೇಳಬಹುದಾಗಿದೆ.

ಇನ್ನು ವರುಣ ವಿಧಾನಸಭಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ(Siddaramaiah) ಅವರ ಪರವಾಗಿ ಶಿವಣ್ಣ ಪ್ರಚಾರಕ್ಕಾಗಿ ಬಂದಿರುವುದನ್ನು ಪ್ರತಾಪ್ ಸಿಂಹ ಸೋಶಿಯಲ್ ಮೀಡಿಯಾದಲ್ಲಿ ಅಸಮಾಧಾನವನ್ನು ಕೆಲವು ಬರಹಗಳನ್ನು ಹಂಚಿಕೊಳ್ಳುವ ಮೂಲಕ ವ್ಯಕ್ತಪಡಿಸಿದ್ದಾರೆ. ವಿ ಸೋಮಣ್ಣ ಅವರು ಪುನೀತ್ ರಾಜಕುಮಾರ್(Puneeth Rajkumar) ಅವರ ಹೆಸರಿನಲ್ಲಿ ಆಸ್ಪತ್ರೆಯನ್ನು ಕಟ್ಟಿಸಿದಾಗ ಅವರ ಸಹೋದರ ರಾಘಣ್ಣ ಬಂದು ಹೊಗಳಿದ್ದರು. ಆದರೆ ಈಗ ಶಿವಣ್ಣ ಸಿದ್ದರಾಮಯ್ಯ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದ್ದಾರೆ.

https://twitter.com/mepratap/status/1654047412258832386?t=3c2dvQuGxfB7fuKGnJWlBA&s=19

ರಾಜಕೀಯದ ನಡುವೆ ಅಪ್ಪು(Appu) ಅವರ ಹೆಸರನ್ನು ತರಬೇಡಿ ಎಂಬುದಾಗಿ ಕೂಡ ಅಪ್ಪು ಅಭಿಮಾನಿಗಳು ಕೂಡ ಈ ಸಂದರ್ಭದಲ್ಲಿ ಆಗ್ರಹಿಸಿದ್ದಾರೆ. ರಾಜಕೀಯದ ನಡುವೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ತನ್ನ ಸಿನಿಮಾ ಹಾಗೂ ಸಾಮಾಜಿಕ ಸೇವಾ ಕ್ಷೇತ್ರದ ಕೊಡುಗೆಗಳಿಗಾಗಿ ಪಡೆದಿರುವಂತಹ ಪುನೀತ್ ರಾಜಕುಮಾರ್ ಅವರ ಹೆಸರನ್ನು ತರುವುದು ಎಷ್ಟರ ಮಟ್ಟಿಗೆ ಸರಿ ಈ ಬಗ್ಗೆ ನೀವೇ ಕಾಮೆಂಟ್ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Leave a Reply

Your email address will not be published. Required fields are marked *