Tech Knowledge ಇಂದಿನ ದಿನಗಳಲ್ಲಿ ಪ್ರತಿಯೊಬ್ಬರೂ ಕೂಡ ಅದರಲ್ಲೂ ವಿಶೇಷವಾಗಿ ತಂತ್ರಜ್ಞಾನದ(Technology) ಕೆಲಸದಲ್ಲಿ ಇರುವಂತಹ ಪ್ರತಿಯೊಬ್ಬರು ಹಲವಾರು ಅಪ್ಲಿಕೇಶನ್ಗಳನ್ನು ಮತ್ತು ವೆಬ್ಸೈಟ್ ಗಳನ್ನು ತಮ್ಮ ಕೆಲಸವನ್ನು ಇನ್ನಷ್ಟು ಸುಲಭವಾಗಿಸುವ ಕಾರಣದಿಂದಾಗಿ ಉಪಯೋಗಿಸುತ್ತಿರುತ್ತಾರೆ. ಅಂತಹುದೇ ಅಪ್ಲಿಕೇಶನ್ ಕುರಿತಂತೆ ಇಂದಿನ ಲೇಖನಿಯಲ್ಲಿ ನಾವು ಮಾತನಾಡಲು ಹೊರಟಿರುವುದು. ಹೌದು ದೊಡ್ಡ ಮಟ್ಟದ ಗಾತ್ರದ ಫೈಲ್ ಅನ್ನು ಶೇರ್ ಮಾಡುವುದು ಹೇಗೆ ಎನ್ನುವ ಬಗ್ಗೆ.
ಪ್ರತಿಯೊಬ್ಬರೂ ಕೂಡ ಚಿಕ್ಕ ಪುಟ್ಟ ಫೋಟೋ ಹಾಗೂ ವಿಡಿಯೋ ಫೈಲ್ಗಳನ್ನು ಮೊಬೈಲ್ ನಲ್ಲಿ ವಾಟ್ಸಪ್ ಮೂಲಕ ಕಳುಹಿಸಬಹುದು. ಆದರೆ ದೊಡ್ಡ ಗಾತ್ರದ ಫೈಲ್ಗಳನ್ನು ವಾಟ್ಸಾಪ್ನಲ್ಲಿ ಕಳುಹಿಸುವ ಹಾಗಿಲ್ಲ ಯಾಕೆಂದರೆ ಅಲ್ಲಿ ಕೂಡ ಆ ಬಗ್ಗೆ ಕಟುನಿಟ್ಟಿನ ನಿಯಮಗಳು ಇದೆ. ಹಾಗಿದ್ದರೆ ಇಂತಹ ದೊಡ್ಡ ಮಟ್ಟದ ಫೈಲ್(Big File) ಅನ್ನು ಕಳುಹಿಸುವುದಕ್ಕೆ ಇರುವಂತಹ ಸುಲಭ ಮಾರ್ಗ ಏನು ಎಂಬುದನ್ನು ತಿಳಿಯೋಣ ಬನ್ನಿ.
ಸೋಶಿಯಲ್ ಮೀಡಿಯಾದಲ್ಲಿ ಅಂದರೆ ಇಂಟರ್ನೆಟ್ ನಲ್ಲಿ ಸರ್ಚ್ ಮಾಡಿದರೆ ನಿಮಗೆ Toffeshare ಎನ್ನುವಂತಹ ವೆಬ್ಸೈಟ್ ಸಿಗುತ್ತದೆ. ಇದರ ಮೂಲಕ ನೀವು ದೊಡ್ಡ ದೊಡ್ಡ ಗಾತ್ರದ ಫೈಲ್ಗಳನ್ನು ಕೂಡ ಶೇರ್ ಮಾಡಿಕೊಳ್ಳಬಹುದಾಗಿದೆ ಹಾಗಿದ್ದರೆ ಅದನ್ನು ಹೇಗೆ ಉಪಯೋಗಿಸುವುದು ಎನ್ನುವುದರ ಕುರಿತಂತೆ ಸಂಪೂರ್ಣ ವಿವರ ಇಲ್ಲಿದೆ ನೋಡಿ.
ಈ ವೆಬ್ ಸೈಟಿಗೆ ಹೋದ ನಂತರ ನೀವು ಯಾವ ಫೈಲ್ ಅನ್ನು ಕಳಿಸಬೇಕು ಎಂದುಕೊಂಡಿದ್ದಿರೋ ಅದನ್ನು ಇಲ್ಲಿ ಅಪ್ಲೋಡ್ ಮಾಡಿ. ನಂತರ ಇದರ ಲಿಂಕ್ ಅನ್ನು ಜನರೇಟ್ ಮಾಡಿ ನಿಮ್ಮ ಸ್ನೇಹಿತರಿಗೆ ಇದನ್ನು ಡೈರೆಕ್ಟ್ ಡೌನ್ಲೋಡ್ ಮಾಡಲು ಹೇಳಿ ಇಲ್ಲವೇ QR Scan ಮಾಡುವ ಮೂಲಕವೂ ಕೂಡ ಪಡೆಯಬಹುದಾಗಿದೆ. ಇದೇ ರೀತಿ ದೊಡ್ಡ ಮಟ್ಟದ ಫೈಲ್ಗಳನ್ನು ಕಳುಹಿಸುವುದಕ್ಕೆ ಇಂಟರ್ನೆಟ್ ನಲ್ಲಿ ಇನ್ನೂ ಹಲವಾರು ಸುರಕ್ಷಿತ ಅಪ್ಲಿಕೇಶನ್ಗಳು ಕೂಡ ನಿಮಗೆ ಸಿಗುತ್ತದೆ.