Travel Without Visa: ವೀಸಾ ಇಲ್ಲದೆ ಭಾರತೀಯರು ತಿರುಗಬಹುದಾದ ಪ್ರಪಂಚದ 10 ರಾಷ್ಟ್ರಗಳು.

ನಮ್ಮಲ್ಲಿ ಚಿಕ್ಕವರಿಂದ ಪ್ರತಿಯೊಬ್ಬರೂ ಕೂಡ ದೇಶ ಸುತ್ತಿ ನೋಡು ಕೋಶ ಓದಿ ನೋಡು ಎನ್ನುವ ವಾಕ್ಯವನ್ನು ಓದುತ್ತಲೆ ಬಂದಿದ್ದಾರೆ ಆದರೆ ಕೋಶವನ್ನು ಓದಿದ್ದಾರೆಯೇ ವಿನಹ ದೇಶವನ್ನು ಸುತ್ತುವಂತಹ ಅವಕಾಶ ಅವರಿಗೆ ಇನ್ನೂ ಕೂಡ ಸಿಕ್ಕಿಲ್ಲ. ಇಂದಿನ ಲೇಖನಿಯಲ್ಲಿ ನಾವು ಭಾರತೀಯರು ವೀಸಾ(Visa) ಇಲ್ಲದೆ ತಿರುಗಬಹುದಾದಂತಹ ಪ್ರಪಂಚದ ಹತ್ತು ದೇಶಗಳ ಕುರಿತಂತೆ ಸಂಪೂರ್ಣ ವಿವರವಾಗಿ ನಿಮಗೆ ತಿಳಿಸಲು ಹೊರಟಿದ್ದೇವೆ. ಹಾಗಿದ್ದರೆ ಬನ್ನಿ ಈ ಸಾಲಿನಲ್ಲಿ ಯಾವೆಲ್ಲ ದೇಶಗಳು ಇದ್ದಾವೆ ಎಂಬುದನ್ನು ಸಂಪೂರ್ಣ ವಿವರವಾಗಿ ತಿಳಿಯೋಣ.

ಮೊದಲನೇದಾಗಿ ಈ ಸಾಲಿನಲ್ಲಿ ನಮ್ಮ ನೆರೆಯ ದೇಶವಾಗಿರುವ ನೇಪಾಳ(Nepal) ಕಂಡು ಬರುತ್ತದೆ. ಸಾಕಷ್ಟು ಪ್ರೇಕ್ಷಣೀಯ ಸ್ಥಳಗಳನ್ನು ಕೂಡ ಹೊಂದಿರುವ ಈ ದೇಶ ಕೇವಲ ವೀಸಾ ಇಲ್ಲದೆ ಮಾತ್ರವಲ್ಲದೆ ನಮ್ಮ ಬಜೆಟ್ ಗೂ ಕೂಡ ಒಳ್ಳೆಯ ದೇಶವಾಗಿ ಕಾಣಿಸಿಕೊಳ್ಳುತ್ತದೆ. ಎರಡನೇದಾಗಿ ಮಾರಿಷಸ್(Mauritius). ಇಲ್ಲಿ ಕೂಡ ನಿಮಗೆ ಏರ್ಪೋರ್ಟ್ ನಲ್ಲಿ ಇಳಿದ ತಕ್ಷಣ ಅರವತ್ತು ದಿನಗಳ ಕಾಲ ಇರಲು ಪರ್ಮಿಷನ್ ದೊರೆಯುತ್ತದೆ. ಮೂರನೇದಾಗಿ ನಮ್ಮ ನೆರೆಯ ದೇಶವಾಗಿರುವ ಭೂತಾನ್(Bhutan). ಸಾಕಷ್ಟು ಕಣಿವೆ ಪ್ರದೇಶಗಳನ್ನು ಹೊಂದಿರುವಂತಹ ಈ ರಮಣೀಯ ದೇಶವನ್ನು ನೋಡಲು ಕೂಡ ವೀಸಾದ ಅಗತ್ಯವಿಲ್ಲ.

ನಾಲ್ಕನೇದಾಗಿ ಹೈಟಿ(Haiti). ಇಲ್ಲಿನ ಏರ್ಪೋರ್ಟ್ ನಲ್ಲಿ ಇಳಿದು ಕೇವಲ 10$ ಕೊಟ್ಟರೆ ಸಾಕು ವೀಸಾ ಇಲ್ಲದೆ ಎಲ್ಲಿ ಕೂಡ ಓಡಾಡಬಹುದು. ಐದನೇದಾಗಿ ಟ್ರಿನಿಡಾಡ್ ಆಂಡ್ ಟೊಬಾಗೋ(Trinidad & Tobago). ರಿಟರ್ನ್ ಟಿಕೆಟ್ ಹಾಗೂ ಪಾಸ್ಪೋರ್ಟ್ ಇದ್ದರೆ ಸಾಕು ಇಲ್ಲಿ ಕೂಡ ನೀವು ಯಾವುದೇ ವೀಸಾ ಇಲ್ಲದೆ 90 ದಿನಗಳಿಗೂ ಅಧಿಕಕಾಲ ಓಡಾಡಬಹುದು. ಜಮೈಕಾ(Jamaica). ಈ ದೇಶದಲ್ಲಿ ಕೂಡ ವೀಸಾ ಇಲ್ಲದೇ ಕೇವಲ ಪಾಸ್ಪೋರ್ಟ್ ಆಧಾರದಲ್ಲಿ ಒಂದು ಅಧಿಕೃತ ಸ್ಟಾಂಪ್ ಒತ್ತಿಸಿಕೊಂಡ ಮೇಲೆ 30 ದಿನಗಳ ಕಾಲ ಓಡಾಡಬಹುದು ಆದರೆ ಇಲ್ಲಿನ ಜನರು ಸ್ವಲ್ಪಮಟ್ಟಿಗೆ ಸ್ನೇಹಜೀವಿಗಳು ಅಲ್ಲ ಎಂದು ಹೇಳಬಹುದು.

ಇಕ್ವಿಡರ್ ದ್ವೀಪ(Equador) ಅಮೆರಿಕಾದ ದಕ್ಷಿಣ ಭಾಗದಲ್ಲಿರುವಂತಹ ಈ ದೇಶ ಅಮೆಜಾನ್ ಅರಣ್ಯ ಪ್ರದೇಶಗಳನ್ನು ಕೂಡ ಒಳಗೊಂಡಿದೆ. ಇಲ್ಲೂ ಕೂಡ ನೀವು ವೀಸಾ ಇಲ್ಲದೆ ಮೂರು ತಿಂಗಳುಗಳ ಕಾಲ ಓಡಾಡಬಹುದು ಆದರೆ ನಿಮ್ಮ ಪಾಸ್ಪೋರ್ಟ್ ಆರು ತಿಂಗಳಿಗೂ ಅಧಿಕ ವ್ಯಾಲಿಡಿಟಿಯನ್ನು ಹೊಂದಿರಬೇಕು. ಮೈಕ್ರೋನೇಷಿಯಾ(Micronesia). ಈ ದೇಶದಲ್ಲಿ 400ಕ್ಕೂ ಅಧಿಕ ದ್ವೀಪಗಳು ಇದ್ದು ಮೂರು ತಿಂಗಳುಗಳ ಕಾಲ ಕೇವಲ ಪಾಸ್ಪೋರ್ಟ್ ಆಧಾರದ ಮೇಲೆ ವೀಸಾ ಇಲ್ಲದೆ ತಿರುಗಾಡಬಹುದು. ನಂತರ ನೀವು ಯುರೋಪ್ ಖಂಡದ ರೋಮನ್ ಸಾಮ್ರಾಜ್ಯದ ಭಾಗವಾಗಿರುವ ಸೆರ್ಬಿಯ(Serbia) ದೇಶದಲ್ಲಿ ಕೂಡ ಓಡಾಡಬಹುದು. ಕೊನೆಯದಾಗಿ ವೀಸಾ ಇಲ್ಲದೆ ಭಾರತದ ಸ್ನೇಹ ಆಗಿರುವ ಇಂಡೋನೇಷ್ಯಾದಲ್ಲಿ(Indonesia) ಕೂಡ ವೀಸಾ ಇಲ್ಲದೆ ಓಡಾಡಬಹುದು ಹಾಗೂ ಇಲ್ಲಿ ಬಜೆಟ್ ಫ್ರೆಂಡ್ಲಿ ವಾತಾವರಣ ಕೂಡ ಇದೆ.

Leave a Reply

Your email address will not be published. Required fields are marked *