ಕನ್ನಡ ಚಿತ್ರರಂಗದಿಂದ ಈ ಜನರೇಶನ್ ನಲ್ಲಿ ಮೊದಲ ಬಾರಿಗೆ ಕನ್ನಡ ಚಿತ್ರರಂಗದಿಂದ ಹೊರಗೆ ಹೋಗಿ ನಾಯಕನಟನಾಗಿ ದೊಡ್ಡಮಟ್ಟದಲ್ಲಿ ಜನಪ್ರಿಯತೆ ಹಾಗೂ ಬೇಡಿಕೆಯನ್ನು ಪಡೆದಂತಹ ನಟ ಎಂಬುದಾಗಿ ನಾವು ಮೊದಲಿಗೆ ನೆನಪಿಸಿಕೊಳ್ಳುವುದು ನಮ್ಮೆಲ್ಲರ ನೆಚ್ಚಿನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(Kiccha Sudeep) ಅವರನ್ನು. ನಿಜಕ್ಕೂ ಕೂಡ ಅವರಂತಹ ಪ್ರತಿಭಾನ್ವಿತ ಮತ್ತೊಬ್ಬ ಸವ್ಯಸಾಚಿ ಕಲಾವಿದ ಕೇವಲ ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗಕ್ಕೆ ಸಿಗುವುದೇ ಅನುಮಾನ ಎಂಬುದನ್ನು ಕೂಡ ನಾವು ಒಪ್ಪಿಕೊಳ್ಳಬೇಕಾಗಿರುವಂತಹ ಮಾತಾಗಿದೆ.
ಕಿಚ್ಚ(Kiccha) ಕೇವಲ ನಾಯಕನಟನಾಗಿ ಮಾತ್ರವಲ್ಲದೆ ನಿರ್ದೇಶಕ ನಿರ್ಮಾಪಕ ಮತ್ತು ಟಿವಿ ಹೋಸ್ಟ್ ಹೀಗೆ ಹೇಳಿದಂತೆ ಮುಂದೆ ಸಾಗುವಂತಹ ಹಲವಾರು ಅಸಂಖ್ಯಾತ ಪ್ರತಿಭೆಗಳನ್ನು ಹೊಂದಿರುವಂತಹ ಸಕಲಕಲಾವಲ್ಲಭ. ಚಿಕ್ಕ ವಯಸ್ಸಿನಲ್ಲಿ ಕ್ರಿಕೆಟರ್ ಆಗಬೇಕು ಎನ್ನುವಂತಹ ಕನಸನ್ನು ನಟನಾದ ಮೇಲೆ ಸಿಸಿಎಲ್ ಹಾಗೂ ಕೆಸಿಸಿ ಮೂಲಕವೂ ಕೂಡ ಕಿಚ್ಚ ಪೂರ್ತಿಗೊಳಿಸುತ್ತಾರೆ. ಪರಭಾಷೆಗಳಲ್ಲಿ ಕನ್ನಡತನವನ್ನು ಮೆರೆಯುವಂತಹ ನಿಜವಾದ ಕನ್ನಡಿಗ.
ಪಾತ್ರ ಯಾವುದೇ ಇರಲಿ ಅದಕ್ಕೆ ತನ್ನ ಅಗತ್ಯ ಇದೆ ಎಂಬುದಾದರೆ ಖಂಡಿತವಾಗಿ ಯಾವ ಭಾಷೆ ಇದ್ದರೂ ಪರವಾಗಿಲ್ಲ ಕಿಚ್ಚ ಸುದೀಪ್(Sudeep) ಹೋಗಿ ನಟಿಸಿ ಬರುತ್ತಾರೆ ಎಂಬುದನ್ನು ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ಸ್ವತಹ ಅವರೇ ಸಾಬೀತುಪಡಿಸಿದ್ದಾರೆ. ಒಬ್ಬ ನಟನಿಗೆ ಬೇಕಾಗಿರುವಂತಹ ಮೂಲಭೂತ ಗುಣ ಅದು. ಸಂಭಾವನೆ ನೋಡಿ ನಟನೆ ಮಾಡುವಂತಹ ಕಲಾವಿದರ ನಡುವೆ ನಟನೆಗೆ ತೂಕ ನೀಡುವಂತಹ ಪಾತ್ರ ನೋಡಿ ನಟನೆ ಮಾಡುವಂತಹ ಕಲಾವಿದ ನಮ್ಮೆಲ್ಲರ ನೆಚ್ಚಿನ ಕಿಚ್ಚ.
ಸದ್ಯಕ್ಕೆ ಕಿಚ್ಚ(Kiccha) ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಕರ್ನಾಟಕದಾದ್ಯಂತ ಪ್ರಚಾರವನ್ನು ನಡೆಸುತ್ತಿದ್ದು ಇದರ ನಡುವೆ ಅವರ ಹೊಸ ಅವತಾರ ಕಂಡುಬಂದಿದೆ. ಹೌದು ಗೆಳೆಯರೇ ತಮ್ಸ್ ಅಪ್(Thumbs Up) ಪಾನೀಯದ ಜಾಹೀರಾತಿನಲ್ಲಿ ಕಿಚ್ಚ ಸುದೀಪ್ ಕಾಣಿಸಿಕೊಂಡಿದ್ದು ಅವರ ಅವತಾರವನ್ನು ನೋಡಿ ಅಭಿಮಾನಿಗಳು ಕೂಡ ಫುಲ್ ಥ್ರಿಲ್ ಆಗಿದ್ದಾರೆ. ಕಿಚ್ಚನ ಹೊಸ ಅವತಾರವನ್ನು ನೋಡಿದ ನಂತರ ನಿಮಗೇನು ಅನ್ನಿಸಿತು ಎಂಬುದನ್ನು ನಮ್ಮೊಂದಿಗೆ ಕಾಮೆಂಟ್ ಮೂಲಕ ಹಂಚಿಕೊಳ್ಳಿ.