Virat Kohli: ಹೋಗಿದ್ದು ಒಂದು ಕೋಟಿ ಕೈಗೆ ಸೇರಿದ್ದು ಎಂಟು ಕೋಟಿ‌. ಇದು ವಿರಾಟ್ ಕೊಹ್ಲಿ ಗತ್ತು.

ಸದ್ಯದ ಮಟ್ಟಿಗೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಮಾತ್ರವಲ್ಲದೆ ಇಡೀ ವಿಶ್ವ ಕ್ರಿಕೆಟ್ ಜಗತ್ತಿನಲ್ಲಿ ಸೂಪರ್ ಸ್ಟಾರ್ ರೀತಿ ಮರೆಯುತ್ತಿರುವಂತಹ ಏಕೈಕ ಕ್ರಿಕೆಟಿಗ ಎಂದರೆ ಅದು ವಿರಾಟ್ ಕೊಹ್ಲಿ. ವಿರಾಟ್ ಕೊಹ್ಲಿ(Virat Kohli) ಸದ್ಯಕ್ಕೆ ಒಂದು ಕಾಲದಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಸಚಿನ್ ತೆಂಡೂಲ್ಕರ್ ಹಾಗೂ ಮಹೇಂದ್ರ ಸಿಂಗ್ ಧೋನಿ ಅವರು ಮಿಂಚಿಮೆರೆದಂತೆ ಸದ್ಯಕ್ಕೆ ಧ್ರುವತಾರೆಯ ಹಾಗೆ ಮೆರೆಯುತ್ತಿದ್ದಾರೆ. ಇದಕ್ಕಾಗಿ ಅವರು ಪಟ್ಟಂತಹ ಕಷ್ಟ ಹಾಗೂ ಪರಿಶ್ರಮದ ಬೆವರಿನ ಫಲ ಖಂಡಿತವಾಗಿಯೂ ನಿಮಗೆ ಕಣ್ಣ ಮುಂದೆ ಕಾಣುತ್ತಿದೆ ಎಂದು ಹೇಳಬಹುದು.

ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ್ದ ವಿರಾಟ್ ಕೊಹ್ಲಿ(Kohli) ತಮ್ಮ ತಂದೆಯ ಮರಣದ ದಿನದಂದು ಕೂಡ ತಮ್ಮ ದೆಹಲಿ ತಂಡದ ಪರವಾಗಿ ಆಟವಾಡುವ ಮೂಲಕ ತಂಡದ ಗೆಲುವಿಗೆ ಸಹಕಾರಿಯಾಗಿದ್ದರು. ಅಷ್ಟರ ಮಟ್ಟಿಗೆ ಕ್ರಿಕೆಟ್ ಎನ್ನುವ ಕ್ರೀಡೆಯನ್ನು ವಿರಾಟ್ ಕೊಹ್ಲಿ ಅವರು ಪ್ರೀತಿಸಿದ್ದ ಕಾರಣದಿಂದಲೇ ಇಂದು ಕ್ರಿಕೆಟ್ ವಿರಾಟ್ ಕೊಹ್ಲಿ ಅವರನ್ನು ಪ್ರೀತಿಸುತ್ತಿದೆ ಎಂದು ಹೇಳಬಹುದು.

Virat Kohli In Suit

ಮೊನ್ನೆಯಷ್ಟೇ ಲಕ್ನೋ ಕ್ರೀಡಾಂಗಣದಲ್ಲಿ ನಡೆದಿರುವಂತಹ ಲಕ್ನೋ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅವರ ಆರ್ಸಿಬಿ(RCB) ತಂಡ ಗೆದ್ದ ರೀತಿ ನಿಜಕ್ಕೂ ಕೂಡ ರೋಮಾಂಚಕವಾಗಿತ್ತು. ಆದರೆ ಆ ಸಂದರ್ಭದಲ್ಲಿ ಲಕ್ನೋ ತಂಡದ ಗಂಭೀರ್(Gambhir) ಸೇರಿದಂತೆ ಹಲವಾರು ಕ್ರಿಕೆಟಿಗರ ಜೊತೆಗೆ ಕೊಹ್ಲಿ ಅವರ ಜಗಳವು ಕೂಡ ನಡೆದಿತ್ತು. ಈ ಸಂದರ್ಭದಲ್ಲಿ ಕೊಹ್ಲಿ ಅವರಿಗೆ ಮ್ಯಾಚ್ ರೆಫ್ರಿ ಒಂದು ಪಂದ್ಯದ ಸಂಪೂರ್ಣ ಸಂಭಾವನೆ ಅಂದರೆ 1.07 ಕೋಟಿ ತಂಡವನ್ನು ವಿಧಿಸಿದರು.

ಆದರೆ ಅದೇ ದಿನ ವಿರಾಟ್ ಕೊಹ್ಲಿ(Virat Kohli) ಒಂದು ಹೊಸ ಜಾಹೀರಾತನ್ನು ತಮ್ಮ instagram ಹಾಗೂ ಸೋಶಿಯಲ್ ಮೀಡಿಯಾ ಗಳಲ್ಲಿ ಪೋಸ್ಟ್ ಮಾಡುವ ಮೂಲಕ ಭರ್ಜರಿ 8 ಕೋಟಿ ಅಧಿಕ ಹಣವನ್ನು ಸಂಭಾವನೆಯ ರೂಪದಲ್ಲಿ ಪಡೆದುಕೊಳ್ಳುವ ಮೂಲಕ ತನ್ನ ಗತ್ತು ಏನು ಎಂಬುದನ್ನು ತಮ್ಮ ಅಭಿಮಾನಿಗಳು ಹಾಗೂ ತಮ್ಮ ಹೇಟರ್ಸ್ ಇಬ್ಬರಿಗೂ ಕೂಡ ಸಾಬೀತುಪಡಿಸಿ ತೋರಿಸಿದ್ದಾರೆ. ಈ ರೀತಿಯ ಜಾಹೀರಾತುಗಳಿಗೆ ವಿರಾಟ್ ಕೊಹ್ಲಿ ಅವರಷ್ಟು ಸಂಭಾವನೆ ಪಡೆಯುವ ಮತ್ತೊಬ್ಬ ಬಹು ಬೇಡಿಕೆಯ ಕ್ರಿಕೆಟಿಗ ಭಾರತೀಯ ಕ್ರಿಕೆಟ್ ತಂಡದಲ್ಲಿ ಇಲ್ಲ ಎಂದು ಹೇಳಬಹುದಾಗಿದೆ.

Leave a Reply

Your email address will not be published. Required fields are marked *