ಕನ್ನಡ ಚಿತ್ರರಂಗ ಕಂಡಂತಹ ಅತ್ಯಂತ ಯಶಸ್ವಿ ಖಳನಾಯಕ ಆಗಿರುವ ಹಾಗೂ ಕನ್ನಡ ಚಿತ್ರರಂಗದ ದೇವರು ಎಂದು ಕರೆಯಲಾಗಿರುವ ರಾಜಕುಮಾರ್ ಅವರ ನೆಚ್ಚಿನ ಕಲಾವಿದ, ತೂಗುದೀಪ್ ಶ್ರೀನಿವಾಸ್ ರವರ ಹಿರಿಯ ಮಗ ಆಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್(Challenging Star Darshan) ಕನ್ನಡ ಚಿತ್ರರಂಗದಲ್ಲಿ ಅವಕಾಶವನ್ನು ಪಡೆಯಲು ಆರಂಭಿಕ ದಿನಗಳಲ್ಲಿ ಎಷ್ಟು ಕಷ್ಟಪಟ್ಟಿದ್ದರು ಹಾಗೂ ಯಾವೆಲ್ಲ ತಿರಸ್ಕಾರದ ಮಾತುಗಳನ್ನು ಕೇಳಿದ್ದರೂ ಎಂಬುದನ್ನು ಅವರ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮವನ್ನು ನೋಡಿ ನೀವು ಅರ್ಥ ಮಾಡಿಕೊಂಡಿರುತ್ತೀರಿ.
ಹೀಗಿದ್ದರೂ ಕೂಡ ಛಲ ಬಿಡದೆ ಕೆಲವೊಂದು ಧಾರವಾಹಿಗಳಲ್ಲಿ ಹಾಗೂ ಸಿನಿಮಾಗಳಲ್ಲಿ ಸಹ ಕಲಾವಿದನಾಗಿ ಮೊದಲಿಗೆ ಕಾಣಿಸಿಕೊಳ್ಳುವ ಮೂಲಕ ಚಿತ್ರರಂಗದಲ್ಲಿ ಒಂದೊಂದೇ ಸಾಧನೆಯ ಮೆಟ್ಟಿಲುಗಳನ್ನು ಏರುತ್ತಾರೆ. ನಂತರ ಮೊದಲ ಬಾರಿಗೆ ಮೆಜೆಸ್ಟಿಕ್ ಸಿನಿಮಾದ(Majestic Film) ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕ ನಟನಾಗಿ ಪಾದಾರ್ಪಣೆ ಮಾಡುತ್ತಾರೆ. ಅಲ್ಲಿಂದ ಆಚೆಗೆ ಅವರ ಸಿನಿಮಾದ ಗೆ ಸೋಲು ಗೆಲುವುಗಳ ಜರ್ನಿ ಏರುಪೇರು ರಸ್ತೆಗಳನ್ನು ನೋಡಿಕೊಂಡು ಬಂದಿದೆ ಆದರೆ ಅವರ ಅಭಿಮಾನಿಗಳು ಮಾತ್ರ ಹೆಚ್ಚಾಗುತ್ತಲೇ ಇದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೂಡ ಸಾಕಷ್ಟು ಯಶಸ್ವಿ ಸಿನಿಮಾಗಳಲ್ಲಿ ಡಿ ಬಾಸ್(Dboss) ಕಾಣಿಸಿಕೊಳ್ಳುತ್ತಿದ್ದು ಈ ಬಾರಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಕೂಡ ಸಾಕಷ್ಟು ಬಿ’ ಜೆಪಿ ಕಾಂ’ ಗ್ರೆಸ್ ಅಭ್ಯರ್ಥಿಗಳ ಪರವಾಗಿ ದರ್ಶನ್ ಅವರು ಸ್ಟಾರ್ ಪ್ರಚಾರಕರಾಗಿ ಕಾಣಿಸಿಕೊಂಡಿದ್ದು ಅವರೆಲ್ಲರೂ ಅವರ ಸ್ನೇಹಿತರು ಎಂಬುದನ್ನು ಕೂಡ ನಾವು ಮೊದಲಿಗೆ ಅರ್ಥ ಮಾಡಿಕೊಳ್ಳಬೇಕು. ಅಷ್ಟಕ್ಕೂ ರಾಜಕೀಯ ಎಂದರೆ ಆಗದ ಡಿ ಬಾಸ್ ಯಾಕೆ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸುತ್ತಾರೆ ಎಂಬುದನ್ನು ತಿಳಿಯೋಣ ಬನ್ನಿ.
ಈಗಾಗಲೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಜನಪ್ರತಿನಿಧಿಗಳು ಕೂಡ ಮಾಡಲಾಗದಷ್ಟು ಸಹಾಯವನ್ನು ತಮ್ಮ ಮನೆಯ ಮುಂದೆ ಸಹಾಯ ಕೇಳಿಕೊಂಡು ಬರುವ ಜನರಿಗೆ ಡಿ ಬಾಸ್ ಮಾಡುತ್ತಾರೆ. ಆದರೆ ಕೆಲವೊಂದು ಸಹಾಯಗಳು ರಾಜಕೀಯ ಪ್ರತಿನಿಧಿಗಳ ಕೈಯಿಂದಲೇ ಆಗಬೇಕು ಹೀಗಾಗಿ ತಾವು ಪ್ರಚಾರ ಮಾಡುವಂತಹ ಅಭ್ಯರ್ಥಿಗಳಿಂದ ಶಾಸಕರ ದೃಢೀಕರಣ ಪತ್ರವನ್ನು ಪಡೆದುಕೊಂಡು ಅದನ್ನು ಅಗತ್ಯವಿರುವಂತಹ ಅಸಹಾಯಕರಿಗೆ ತಲುಪಿಸುವ ಮೂಲಕ ಅವರ ಜೀವನಕ್ಕೆ ಸಹಾಯ ಮಾಡಲೆಂದೆ ಇಂತಹ ಕಾರ್ಯಗಳನ್ನು ದರ್ಶನ್(Darshan) ರವರು ಮಾಡುತ್ತಾರೆ ಎಂಬುದನ್ನು ಕೂಡ ಪ್ರತಿಯೊಬ್ಬರೂ ತಿಳಿದು ಮೆಚ್ಚಿಕೊಳ್ಳಬೇಕಾಗುತ್ತದೆ. ದರ್ಶನ್ ಅವರ ಈ ಚಿನ್ನದಂತಹ ಮನಸ್ಸಿನ ಬಗ್ಗೆ ನಿಮಗಿರುವ ಅಭಿಪ್ರಾಯಗಳನ್ನು ಕಾಮೆಂಟ್ ಮೂಲಕ ಹಂಚಿಕೊಳ್ಳಿ.