Sambhaji Maharaj: ಒಂದೇ ಒಂದು ಸಮರವನ್ನು ಸೋಲದ ಶಿವಾಜಿಯ ಮಗ ಸಂಭಾಜಿ ಮಹಾರಾಜರ ಸಂಪೂರ್ಣ ಕಹಾನಿ ಇಲ್ಲಿದೆ ನೋಡಿ.

ಛತ್ರಪತಿ ಶಿವಾಜಿ ಮಹಾರಾಜರ ಹಿರಿಯ ಮಗನಾಗಿದ್ದ ಸಂಭಾಜಿ(Chathrapathy Sambhaji) ಎರಡು ವರ್ಷದ ವಯಸ್ಸಿನಲ್ಲಿ ತನ್ನ ತಾಯಿಯನ್ನು ಕಳೆದುಕೊಂಡು ಅಜ್ಜಿ ಜೀಜಾಬಾಯಿಯ ಪಾಲನೆಯಲ್ಲಿ ಬೆಳೆಯುತ್ತಾನೆ. 13ನೇ ವಯಸ್ಸಿನಲ್ಲಾಗಲಿ 13 ಭಾಷೆಗಳನ್ನು ಸಂಭಾಜಿ ಕಲಿತಿದ್ದ. ಅವುಗಳಲ್ಲಿ ಇಂಗ್ಲಿಷ್ ಪೋರ್ಚುಗೀಸ್ ನಂತಹ ವಿದೇಶಿ ಭಾಷೆಗಳು ಕೂಡ ಇದ್ದವು. ಅತ್ಯಂತ ಚಿಕ್ಕ ವಯಸ್ಸಿನಲ್ಲಿಯೇ ಶಸ್ತ್ರ ನಿಪುಣ ಯೋಧನಾಗಿ ಕೂಡ ತಯಾರಾಗುತ್ತಾನೆ. ಇನ್ನು 6ನೇ ವಯಸ್ಸಿನಲ್ಲಿ ತಂದೆ ಶಿವಾಜಿ ಜೊತೆ ದೆಹಲಿಯ ಔರಂಗಜೇಬನನ್ನು ಭೇಟಿಯಾಗಲು ಹೋಗಿ ಬಂಧನಕ್ಕೆ ಒಳಗಾಗಿ ನಂತರ ಹೂವಿನ ಬುಟ್ಟಿಯಲ್ಲಿ ಅಡುಗಿ ಕುಳಿತು ಅಷ್ಟೊಂದು ಬಿಗಿಬಂದೋ ಬಸ್ತಿನಲ್ಲಿ ಕೂಡ ತಪ್ಪಿಸಿಕೊಂಡು ಬಂದಿದ್ದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ.

1681 ರಲ್ಲಿ ಮರಾಠ ಸಂಸ್ಥಾಪಕ ತಂದೆ ಶಿವಾಜಿ(Shivaji) ಮರಣ ಹೊಂದಿದ ಸಂದರ್ಭದಲ್ಲಿ ಕೂಡ ಸಂಭಾಜಿ ತಂದೆ ಹಾಕಿ ಕೊಟ್ಟಿದ್ದ ಮಾರ್ಗದಲ್ಲಿ ನಡೆಯಲು ಎಷ್ಟು ಕಾರ್ಯನಿಷ್ಠ ನಾಗಿದ್ದ ಎಂದರೆ ಕೂಡಲೇ ಔರಂಗಬಾದ್ ನಲ್ಲಿ ಇದ್ದಂತಹ ಕೋಟೆಯನ್ನು ಮುತ್ತಿಗೆ ಹಾಕಿ ವಶಪಡಿಸಿಕೊಂಡಿದ್ದ. ಅತ್ಯಂತ ಚಿಕ್ಕ ವಯಸ್ಸಿನಲ್ಲಿ ಹೋರಾಟವನ್ನು ಆರಂಭಿಸಿದ ಸಂಭಾಜಿ ಮಹಾರಾಜ 9 ವರ್ಷಗಳ ಅವಧಿಯಲ್ಲಿ ಬರೋಬ್ಬರಿ 120 ಸಮರವನ್ನು ಮಾಡಿದ್ದ. ಆದರೆ ಒಂದೇ ಒಂದು ಕಾದಾಟವನ್ನು ಕೂಡ ಆತ ಸೋತಿರಲಿಲ್ಲ. ಒಂಬತ್ತು ವರ್ಷಗಳ ಕಾಲ ಮೊಘಲರನ್ನು(Moghals) ಹಣ್ಣುಗಾಯಿ ನೀರುಗಾಯಿ ಮಾಡಿದ್ದ ಈತ ಉತ್ತರದಲ್ಲಿ ಕೂಡ ಹಿಂದೂರಾಜರು ಮೊಘಲರ ವಿರುದ್ಧ ಎದ್ದು ನಿಲ್ಲುವಂತೆ ಪ್ರೇರೇಪಿಸಿದ ಮಹಾ ಸಾಹಸಿ.

Chathrapathy Sambhaji Maharaj

ಒಂದು ಸಮಯದಲ್ಲಿ ಸಂಭಾಜಿ ತನ್ನ ಭಾವ ಆಗಿರುವ ಘನೋಜಿ ಶಿರ್ಕೆಗೆ ಸುಬೇದಾರ್ ವೇತನವನ್ನು ನೀಡುವುದಿಲ್ಲ ಎಂದು ಹೇಳಿದ್ದಕ್ಕಾಗಿ ಆತನ ಜೊತೆಗೆ ಜಗಳ ಮಾಡಿಕೊಂಡಿದ್ದ ಹೀಗಾಗಿ ಔರಂಗಜೇಬ(Aurangazeb) ಆತನ ಭಾವನನ್ನು ತನ್ನ ಕಡೆಗೆ ಸೆಳೆದುಕೊಳ್ಳುತ್ತಾನೆ. ಒಂದು ದಿನ ಸಂಭಾಜಿ ತನ್ನ ಮಂತ್ರಿಯ ಜೊತೆಗೆ ಪುಣ್ಯ ಕ್ಷೇತ್ರದ ದರ್ಶನಕ್ಕೆ ನಿರಾಯುಧನಾಗಿ ಹೋಗುತ್ತಿರುವ ಸಂದರ್ಭದಲ್ಲಿ ಔರಂಗಜೇಬನ 2000 ಸೈನಿಕರು ಸಂಭಾಜಿ ಹಾಗೂ ಆತನ ಮಂತ್ರಿಯನ್ನು ಮೋಸದಿಂದ ಸುತ್ತುವರೆದು ಬಂದಿಯಾಳುಗಳನ್ನಾಗಿ ಮಾಡಿ ಕರೆದುಕೊಂಡು ಹೋಗುತ್ತಾರೆ. ಕದನದಲ್ಲಿ 8 ಲಕ್ಷ ಸೈನಿಕರು ಕೂಡ ಸಂಭಾಜಿಯನ್ನು ಏನು ಕೂಡ ಮಾಡಲು ಸಾಧ್ಯವಾಗಿರಲಿಲ್ಲ ಆದರೆ ಇಲ್ಲಿ ತಮ್ಮವರಿಂದಲೇ ಆದಂತಹ ಮೋಸಕ್ಕೆ ಸಂಭಾಜಿ ಸೆರೆಯಾಳಾಗಿದ್ದ.

ಸಂಭಾಜಿಯನ್ನು(Sambhaji Maharaj) ಬಂಧಿಸಿ ದೆಹಲಿಗೆ ಕರೆ ತಂದ ನಂತರ ಆತನಿಗೆ ನಿನ್ನ ರಾಜ್ಯವನ್ನು ನನಗೆ ಒಪ್ಪಿಸುವ ಹಾಗೂ ಮುಸ್ಲಿಂ ಧರ್ಮಕ್ಕೆ ಮತಾಂತರವಾಗು ಎಂಬುದಾಗಿ ಹೇಳಲಾಗುತ್ತದೆ. ಅದಕ್ಕೆ ವೀರಸಂಬಾಜಿ ನೀನು ನನ್ನನ್ನು ಸಾವಿರ ಬಾರಿ ಸಾ’ ಯಿಸು ಆದರೆ ಸಾವಿರದ ಒಂದನೇ ಬಾರಿ ಕೂಡ ನಾನು ಹಿಂದೂ ಆಗಿಯೇ ಹುಟ್ಟುತ್ತೇನೆ ಎಂಬುದಾಗಿ ಧೀರೋತ್ತರವಾದಂತಹ ಉತ್ತರವನ್ನು ನೀಡುತ್ತಿದ್ದ. ಪ್ರತಿದಿನ ಚಿತ್ರಹಿಂ’ ಸೆ ನೀಡಿ ಸಂಭಾಜಿ ಹಾಗೂ ಆತನ ಮಂತ್ರಿಯನ್ನು ತುಂಡು ತುಂಡಾಗಿ ಮಾಡಿ ನದಿಯ ದಡದ ಬಳಿ ಎಸೆಯುತ್ತಾರೆ. ಅದನ್ನು ಒಟ್ಟುಗೂಡಿಸಿ ಮರಾಠರು(Marathas) ಆತನ ಕೊನೆಯ ಸಂಸ್ಕಾರವನ್ನು ನೆರವೇರಿಸಿ ಕೆಲವೇ ವರ್ಷಗಳ ನಂತರ ದೆಹಲಿಯನ್ನು ವಶಪಡಿಸಿ ಮರಾಠ ಸಾಮ್ರಾಜ್ಯದ ಗತ್ತನ್ನು ಸಾಬೀತುಪಡಿಸುತ್ತಾರೆ. ಪ್ರತಿಯೊಬ್ಬರೂ ಕೂಡ ಸಂಭಾಜಿಯಿಂದ ಕಲಿಯಬೇಕಾಗಿರುವ ಒಂದು ಗುಣ ಏನೆಂದರೆ, ಆತನ ಸ್ವಾಭಿಮಾನ ಹಾಗೂ ಧೈರ್ಯದ ಗುಣ. ಇಂದಿಗೂ ಕೂಡ ಶಿವಾಜಿಯ ನಂತರ ಅತ್ಯಂತ ಪೂಜನೀಯ ವ್ಯಕ್ತಿ ಎಂದರೆ ಸಂಭಾಜಿ ಮಹಾರಾಜ ಎನ್ನುತ್ತಾರೆ.

Leave a Reply

Your email address will not be published. Required fields are marked *